ಜನವರಿ 19ರಿಂದ ಭಾರತ-ದ.ಆಫ್ರಿಕಾ ಏಕದಿನ ಸರಣಿ: ಉಭಯ ತಂಡಗಳು, ಆಟಗಾರರ ಬದಲಾವಣೆ ಇಲ್ಲಿದೆ

ಟೆಸ್ಟ್ ಸರಣಿಯಲ್ಲಿ ಈಗಾಗಲೇ ಮುಖಭಂಗ ಎದುರಿಸಿರುವ ಟೀಂ ಇಂಡಿಯಾ ಮುಂದಿನ ನಾಲ್ಕು ದಿನಗಳಲ್ಲಿ ಆರಂಭಗೊಳ್ಳಲಿರುವ ಏಕದಿನ ಸರಣಿಗಾಗಿ ಈಗಿನಿಂದಲೇ ತಯಾರಿ ನಡೆಸಲು ಸಜ್ಜಾಗಿದೆ. ಜನವರಿ 19 ರಿಂದ ಜನವರಿ 23ರವರೆಗೆ ನಡೆಯಲಿರುವ 50 ಓವರ್‌ಗಳ ಪಂದ್ಯವು ಮತ್ತಷ್ಟು ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ.

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತವು ಕೆ.ಎಲ್ ರಾಹುಲ್ ಮುಂದಾಳತ್ವದಲ್ಲಿ ಹರಿಣಗಳ ನಾಡಲ್ಲಿ ಮುಂದುವರಿಯಲಿದೆ. ಜಸ್ಪ್ರೀತ್ ಬುಮ್ರಾ ಇದೇ ಮೊದಲ ಬಾರಿಗೆ ಉಪನಾಯಕನಾಗಿ ಆಯ್ಕೆಗೊಂಡಿದ್ದು, ಕನ್ನಡಿಗ ರಾಹುಲ್‌ ತಂಡವನ್ನ ಹೇಗೆ ಮುನ್ನಡೆಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಹುದ್ದೆಗೇರಿದ ಬಳಿಕ ನ್ಯೂಜಿಲೆಂಡ್ ವಿರುದ್ಧ ಭಾರತ ಟೆಸ್ಟ್ ಹಾಗೂ ಟಿ-20 ಸರಣಿಯನ್ನ ಗೆದ್ದು ಬೀಗಿತು. ಆದ್ರೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆಲುವು ಸಾಧ್ಯವಾಗಿಲ್ಲ. ಹೀಗಾಗಿ ದ್ರಾವಿಡ್‌ ಹುಡುಗರು ಲಿಮಿಟೆಡ್ ಓವರ್‌ ಕ್ರಿಕೆಟ್‌ನಲ್ಲಿ ಹರಿಣಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಪಣತೊಟ್ಟಿದ್ದಾರೆ.

ದಕ್ಷಿಣ ಆಫ್ರಿಕಾದ ಪ್ರಮುಖ ಬೌಲರ್‌ ಏಕದಿನ ಸರಣಿಗೂ ಅಲಭ್ಯ

ದಕ್ಷಿಣ ಆಫ್ರಿಕಾದ ಪ್ರಮುಖ ಬೌಲರ್‌ ಏಕದಿನ ಸರಣಿಗೂ ಅಲಭ್ಯ

ಈಗಾಗಲೇ ಗಾಯಾಳುವಾಗಿ ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದ ಪ್ರಮುಖ ವೇಗದ ಬೌಲರ್ ಅನ್ರಿಚ್ ನಾರ್ಟ್ಜೆ, ದಕ್ಷಿಣ ಆಫ್ರಿಕಾದ 17 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅನ್ರಿಚ್ ತಮ್ಮ ಗಾಯದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದು, ಟೆಸ್ಟ್ ಸರಣಿಯಂತೆ ಏಕದಿನ ಸರಣಿಗೂ ಭಾಗವಹಿಸುತ್ತಿಲ್ಲ. ಹೀಗಾಗಿ ಕಗಿಸೊ ರಬಾಡ ಮತ್ತು ಲುಂಗಿ ಎನ್‌ಗಿಡಿ ದಕ್ಷಿಣ ಆಫ್ರಿಕಾದ ಬೌಲಿಂಗ್ ನೊಗ ಹೊರಲಿದ್ದಾರೆ.

ಪೂಜಾರ, ರಹಾನೆ ಭವಿಷ್ಯದ ಕಥೆಯೇನು?: ಪತ್ರಕರ್ತರ ಪ್ರಶ್ನೆಗೆ ಖಡಕ್ ಉತ್ತರ ನೀಡಿದ ವಿರಾಟ್ ಕೊಹ್ಲಿ

ಟೆಂಬಾ ಬವುಮಾಗೆ ಹೊಸ ಸವಾಲು

ಟೆಂಬಾ ಬವುಮಾಗೆ ಹೊಸ ಸವಾಲು

ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಟೆಂಬಾ ಬವುಮಾ ದಕ್ಷಿಣ ಆಫ್ರಿಕಾ ಏಕದಿನ ಫಾರ್ಮೆಟ್‌ನಲ್ಲಿ ತಂಡವನ್ನ ಮುನ್ನಡೆಸಲಿದ್ದಾರೆ. ಟೆಸ್ಟ್ ಸ್ಕ್ವಾಡ್‌ನಂತೆ ಯುವಕರನ್ನ ಒಳಗೊಂಡ ಹೊಸ ತಂಡದ ಜೊತೆಗೆ ಟೆಂಬಾ ಬವುಮಾ ನಾಯಕತ್ವವು ದಕ್ಷಿಣ ಆಫ್ರಿಕಾ ತಂಡಕ್ಕೆ ಹೊಸ ಹುರುಪು ನೀಡಿದೆ. ದಕ್ಷಿಣ ಆಫ್ರಿಕಾದ ಕೋಚ್ ಮಾರ್ಕ್‌ ಬೌಚರ್ ಮತ್ತು ಟೆಂಬಾ ಬವುಮಾ ಕಾಂಬಿನೇಷನ್‌ನಲ್ಲಿ ಹರಿಣಗಳ ಪ್ರದರ್ಶನ ಹೇಗಿರಲಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿದೆ.

ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23: ದ. ಆಫ್ರಿಕಾ ವಿರುದ್ಧ ಸೋಲಿನ ಬಳಿಕ ಭಾರತದ ಪಾಯಿಂಟ್ಸ್ ಎಷ್ಟು?

ದಕ್ಷಿಣ ಆಫ್ರಿಕಾ ತಂಡದಲ್ಲಿನ ಪ್ರಮುಖ ಬದಲಾವಣೆಗಳು

ದಕ್ಷಿಣ ಆಫ್ರಿಕಾ ತಂಡದಲ್ಲಿನ ಪ್ರಮುಖ ಬದಲಾವಣೆಗಳು

ಕಳೆದ ನೆದರ್ಲೆಂಡ್ಸ್‌ ವಿರುದ್ಧದ ಏಕದಿನ ಸರಣಿಯಲ್ಲಿ ಆಯ್ಕೆಗೊಂಡಿದ್ದ ವೇಯ್ನ್ ಪಾರ್ನೆಲ್, ರಿಯಾನ್ ರಿಕೆಲ್ಟನ್, ಸಿಸಂಡಾ ಮಗಾಲಾ ಮತ್ತು ಜುಬೇರ್ ಹಮ್ಜಾ ತಂಡದಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಆಲ್ರೌಂಡರ್ ಡ್ವೈನ್ ಪ್ರಿಟೋರಿಯಸ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಜೊತೆಗೆ ಚೊಚ್ಚಲ ಟೆಸ್ಟ್ ಸರಣಿಯಲ್ಲೇ ಗಮನಾರ್ಹ ಪ್ರದರ್ಶನ ನೀಡಿ 19 ವಿಕೆಟ್ ಕಬಳಿಸಿದ ಮಾರ್ಕೊ ಯಾನ್ಸೆನ್‌ಗೆ ಏಕದಿನ ತಂಡದಲ್ಲಿ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ.

ದಕ್ಷಿಣ ಆಫ್ರಿಕಾದ ಏಕದಿನ ಫಾರ್ಮೆಟ್ ಸ್ಕ್ವಾಡ್‌

ದಕ್ಷಿಣ ಆಫ್ರಿಕಾದ ಏಕದಿನ ಫಾರ್ಮೆಟ್ ಸ್ಕ್ವಾಡ್‌

ತೆಂಬಾ ಬವುಮಾ (ನಾಯಕ), ಕೇಶವ್ ಮಹಾರಾಜ್ (ಉಪನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಜುಬೇರ್ ಹಮ್ಜಾ, ಮಾರ್ಕೊ ಜಾನ್ಸೆನ್, ಜಾನ್ನೆಮನ್ ಮಲನ್, ಸಿಸಂದಾ ಮಾಗಲಾ, ಏಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ವೇಯ್ನ್ ಪಾರ್ನೆಲ್, ಆಂಡಿಲೆ ಫೆಹ್ಲುಕ್ವೇಟೋರಿಯಸ್, ಪ್ರೀನೆಟೋರಿಯಸ್ , ಕಗಿಸೊ ರಬಾಡ, ತಬ್ರೈಜ್ ಶಮ್ಸಿ, ರಾಸ್ಸಿ ವಾನ್ ಡೆರ್ ಡಸ್ಸೆನ್ ಮತ್ತು ಕೈಲ್ ವೆರ್ರೆನ್ನೆ.

ಟೀಮ್ ಇಂಡಿಯಾ ಸ್ಕ್ವಾಡ್‌

ಟೀಮ್ ಇಂಡಿಯಾ ಸ್ಕ್ವಾಡ್‌

ಕೆ.ಎಲ್ ರಾಹುಲ್ (ಸಿ), ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶನ್ ಕಿಶನ್ (ವಿಕೆಟ್ ಕೀಪರ್), ಯುಜವೇಂದ್ರ ಚಾಹಲ್, ಆರ್. ಅಶ್ವಿನ್, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ (ಉಪನಾಯಕ) , ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್ ಸ್ಟಾಂಡ್ ಬೈ ಆಗಿ ನವದೀಪ್ ಸೈನಿ ತಂಡದಲ್ಲಿ ಸೇರಿಕೊಂಡಿದ್ದಾರೆ.

ಕೊರೊನಾ ಕಾರಣದಿಂದ ತಂಡದಿಂದ ಸ್ಥಾನ ಕಳೆದುಕೊಂಡಿರುವ ವಾಷಿಂಗ್ಟನ್ ಸುಂದರ್

ಕೊರೊನಾ ಕಾರಣದಿಂದ ತಂಡದಿಂದ ಸ್ಥಾನ ಕಳೆದುಕೊಂಡಿರುವ ವಾಷಿಂಗ್ಟನ್ ಸುಂದರ್

ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿರುವ ಕಾರಣ ವಾಷಿಂಗ್ಟನ್ ಸುಂದರ್ ಟೀಮ್ ಇಂಡಿಯಾ ಏಕದಿನ ತಂಡದಿಂದ ಸ್ಥಾನ ಕಳೆದುಕೊಂಡಿದ್ದಾರೆ. ಸುಂದರ್ ಸುಮಾರು 10 ತಿಂಗಳಿನಿಂದ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ. ಅವರು ಕೊನೆಯದಾಗಿ ಮಾರ್ಚ್ 2021 ರಲ್ಲಿ ಭಾರತಕ್ಕಾಗಿ ಆಡಿದ್ದರು. ಗಾಯಗಳ ಕಾರಣ ತಂಡದಿಂದ ಹೊರಬಿದ್ದ ಬಳಿಕ ಇತ್ತೀಚೆಗೆ ಚೇತರಿಸಿಕೊಂಡರು. ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಇವರನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದ್ರೆ ದುರದೃಷ್ಟವಶಾತ್ ಮತ್ತೆ ಟೀಂ ಇಂಡಿಯಾದಿಂದ ಹೊರ ಬಿದ್ದಿದ್ದಾರೆ.

Team India ಸರಣಿ ಸೋಲಿನ ಬಳಿಕ Points Tableನಲ್ಲಿ ಯಾವ ಸ್ಥಾನದಲ್ಲಿದೆ | Oneindia Kannada
ಏಕದಿನ ಸರಣಿಯ ವೇಳಾಪಟ್ಟಿ

ಏಕದಿನ ಸರಣಿಯ ವೇಳಾಪಟ್ಟಿ

ಮೊದಲ ಏಕದಿನ: ಜನವರಿ 19 , ಪಾರ್ಕ್, ಪಾರ್ಲ್, ಸಮಯ - 2.00 PM

ಎರಡನೇ ಏಕದಿನ: ಜನವರಿ 21, ಪಾರ್ಕ್, ಪಾರ್ಲ್, ಸಮಯ - 2.00 PM

ಮೂರನೇ ಏಕದಿನ: ಜನವರಿ 23, ನ್ಯೂಲ್ಯಾಂಡ್ಸ್, ಕೇಪ್‌ ಟೌನ್, ಸಮಯ - 2.00 PM

For Quick Alerts
ALLOW NOTIFICATIONS
For Daily Alerts
Story first published: Saturday, January 15, 2022, 14:03 [IST]
Other articles published on Jan 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X