ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs WI 1st T20: ಭಾರತ ತಂಡದ ಆಡುವ 11ರ ಬಳಗ; ಆರ್. ಅಶ್ವಿನ್ ಆಡುತ್ತಾರಾ?

IND vs WI 1st T20: Indias Predicted Playing XI; Will Ravichandran Ashwin Play?

ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ನಂತರ, ಇಂದಿನಿಂದ (ಶುಕ್ರವಾರ, ಜುಲೈ 29) ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಗೆಲುವಿನ ನಾಗಾಲೋಟ ಮುಂದುವರೆಸಲು ಎದುರು ನೋಡುತ್ತಿದೆ.

ತಂಡಕ್ಕೆ ಹಿಂದಿರುವಗಿರುವ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ ಮತ್ತು ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಏಕದಿನ ಸರಣಿಗೆ ವಿಶ್ರಾಂತಿ ಪಡೆದ ನಂತರ ಮರಳಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಆ ಆಕ್ರಮಣಕಾರಿ ಬ್ರಾಂಡ್ ಕ್ರಿಕೆಟ್ ಅನ್ನು ತಂಡವು ಮುಂದುವರಿಸುತ್ತದೆಯೇ ಎಂದು ನೋಡಲು ಕುತೂಹಲಕಾರಿಯಾಗಿದೆ.

ಕಾಮನ್‌ವೆಲ್ತ್ ಗೇಮ್ಸ್ 2022: ಸ್ವಾತಂತ್ರ್ಯದ ನಂತರ ಭಾರತದ ಪದಕಗಳ ಬೇಟೆ; ಇಲ್ಲಿ ಪರಿಶೀಲಿಸಿಕಾಮನ್‌ವೆಲ್ತ್ ಗೇಮ್ಸ್ 2022: ಸ್ವಾತಂತ್ರ್ಯದ ನಂತರ ಭಾರತದ ಪದಕಗಳ ಬೇಟೆ; ಇಲ್ಲಿ ಪರಿಶೀಲಿಸಿ

ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ಮೊದಲ ಟಿ20 ಪಂದ್ಯದ ಆಡುವ 11ರ ಬಳಗದಲ್ಲಿ ತಂಡವು ಅವಕಾಶ ನೀಡುತ್ತದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಮೊದಲ ಟಿ20 ಪಂದ್ಯದಲ್ಲಿ ಭಾರತದ 11ರ ಬಳಗ ಹೀಗಿದೆ

ಮೊದಲ ಟಿ20 ಪಂದ್ಯದಲ್ಲಿ ಭಾರತದ 11ರ ಬಳಗ ಹೀಗಿದೆ

ರೋಹಿತ್ ಶರ್ಮಾ (ನಾಯಕ): ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದ ಬಳಿಕ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಮರಳಿದ್ದಾರೆ ಮತ್ತು ಅವರು ದೊಡ್ಡ ಸ್ಕೋರ್ ದಾಖಲಿಸುವ ಭರವಸೆಯಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಗೆದ್ದಿದ್ದರು, ಆದರೆ ಅವರ ಆರಂಭವನ್ನು ಗಣನೀಯ ಸ್ಕೋರ್‌ಗಳಾಗಿ ಪರಿವರ್ತಿಸಲು ಸಾಧ್ಯವಾಗಿರಲಿಲ್ಲ.

ರಿಷಭ್ ಪಂತ್: ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ವಿಕೆಟ್ ಕೀಪರ್-ಎಡಗೈ ಬ್ಯಾಟ್ಸ್‌ಮನ್‌ನನ್ನು ಆರಂಭಿಕ ಆಟಗಾರನಾಗಿ ಪ್ರಯೋಗ ಮಾಡಲಾಗಿತ್ತು ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಈ ಕ್ರಮವು ಮುಂದುವರೆಯುತ್ತದೆಯೇ ಎಂದು ಕಾದು ನೋಡಬೇಕಿದೆ.

ದೀಪಕ್ ಹೂಡಾ: ವಿರಾಟ್ ಕೊಹ್ಲಿ ಏಕದಿನ ಸರಣಿಯ ಭಾಗವಾಗಿಲ್ಲದ ಕಾರಣ, ದೀಪಕ್ ಹೂಡಾ ಅವರು ಐರ್ಲೆಂಡ್ ವಿರುದ್ಧ ಆಡಿದಂತೆ ನಂ.3 ರಲ್ಲಿ ಬ್ಯಾಟಿಂಗ್ ಮಾಡುತ್ತಾರೆ ಎಂದು ಭಾವಿಸುವುದು ಸುರಕ್ಷಿತವಾಗಿದೆ, ಅಲ್ಲಿ ಅವರು ಶತಕ ಗಳಿಸಿದ್ದರು.

ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಸೈ ಎನಿಸಿಕೊಂಡ ಪಾಂಡ್ಯ

ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಸೈ ಎನಿಸಿಕೊಂಡ ಪಾಂಡ್ಯ

ಸೂರ್ಯಕುಮಾರ್ ಯಾದವ್: ಬಲಗೈ ಬ್ಯಾಟರ್ ಸೂರ್ಯಕುಮಾರ್ ಯಾದವ್ ವೆಸ್ಟ್ ಇಂಡೀಸ್ ವಿರುದ್ಧ ಬ್ಯಾಟ್‌ನೊಂದಿಗೆ ಕಳಪೆ ಪ್ರದರ್ಶನ ನೀಡಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಯಲ್ಲಿ ಅವರು ಶತಕ ಗಳಿಸಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ ಮತ್ತು ಅವರು ಮತ್ತದೇ ಪ್ರದರ್ಶನವನ್ನು ದಾಖಲಿಸುವ ಭರವಸೆ ಹೊಂದಿದ್ದಾರೆ.

ಹಾರ್ದಿಕ್ ಪಾಂಡ್ಯ: ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈ ವರ್ಷ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಪ್ರದರ್ಶನ ನೀಡುವ ಮೂಲಕ ಬಲವಾಗಿ ತಂಡಕ್ಕೆ ಹಿಂದಿರುಗಿದ್ದಾರೆ. ಹಾರ್ದಿಕ್ ಪಾಂಡ್ಯ ಎಕ್ಸ್-ಫ್ಯಾಕ್ಟರ್ ಆಗಿರಬಹುದು ಮತ್ತು ಆಟದ ದಿಕ್ಕನ್ನೇ ಬದಲಾಯಿಸಲು ಸಾಮರ್ಥ್ಯ ಹೊಂದಿದ್ದಾರೆ.

ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಕಾರ್ತಿಕ್ ಯತ್ನ

ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಕಾರ್ತಿಕ್ ಯತ್ನ

ದಿನೇಶ್ ಕಾರ್ತಿಕ್: ಅನುಭವಿ ವಿಕೆಟ್‌ಕೀಪರ್-ಬ್ಯಾಟರ್ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಫಾರ್ಮ್‌ನಲ್ಲಿದ್ದರು. ಆದರೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಅದೇ ಪ್ರದರ್ಶನಗಳನ್ನು ದಾಖಲಿಸಲು ಅವರಿಗೆ ಸಾಧ್ಯವಾಗಲಿಲ್ಲ. ದಿನೇಶ್ ಕಾರ್ತಿಕ್ ಪರಿಪೂರ್ಣ ಫಿನಿಶರ್ ಆಗಲು ಮತ್ತು ಟಿ20 ವಿಶ್ವಕಪ್ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಆಶಿಸುತ್ತಾರೆ.

ರವೀಂದ್ರ ಜಡೇಜಾ: ಇನ್ನೊಬ್ಬ ಆಲ್‌ರೌಂಡರ್ ರವೀಂದ್ರ ಜಡೇಜಾ ಗಾಯದಿಂದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಹೊರಗುಳಿದಿದ್ದರು. ಈಗ ಅವರು ಸಂಪೂರ್ಣ ಫಿಟ್ ಆಗಿದ್ದರೆ, ಅವರು ಆಡುವ 11ರ ಬಳಗವನ್ನು ಪ್ರವೇಶಿಸುತ್ತಾರೆ.

ರವಿಚಂದ್ರನ್ ಅಶ್ವಿನ್: ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬೌಲಿಂಗ್ ದಾಳಿಗೆ ಹೆಚ್ಚು ಅಗತ್ಯವಿರುವ ವೈವಿಧ್ಯತೆಯನ್ನು ವೆಸ್ಟ್ ಇಂಡೀಸ್ ಪಿಚ್ ಹೊಂದಿರುವ ಕಾರಣ ಮತ್ತು ಅಶ್ವಿನ್ ಬ್ಯಾಟ್‌ನಲ್ಲೂ ಸೂಕ್ತವಾಗಿರುವುದರಿಂದ ಮೊದಲ ಪಂದ್ಯದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ.

ಈ ವರ್ಷ ಉತ್ತಮ ಫಾರ್ಮ್‌ನಲ್ಲಿರುವ ಭುವನೇಶ್ವರ್ ಕುಮಾರ್

ಈ ವರ್ಷ ಉತ್ತಮ ಫಾರ್ಮ್‌ನಲ್ಲಿರುವ ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್: ಬಲಗೈ ವೇಗಿ ಭುವನೇಶ್ವರ್ ಕುಮಾರ್ ಈ ವರ್ಷ ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಅವರು ಇಂಗ್ಲೆಂಡ್ ವಿರುದ್ಧ ಚೆಂಡನ್ನು ಅತ್ಯುತ್ತಮವಾಗಿ ಸ್ವಿಂಗ್ ಮಾಡಿದರು. ಭುವಿ ಇಲ್ಲಿಯೂ ಸ್ವಿಂಗ್ ಬಳಸಿದರೆ ಎದುರಾಳಿಗಳಿಗೆ ಸಂಕಷ್ಟ ಕಟ್ಟಿಟ್ಟಬುತ್ತಿ.

ಹರ್ಷಲ್ ಪಟೇಲ್: ಡೆತ್-ಓವರ್ ಸ್ಪೆಷಲಿಸ್ಟ್ ಆಗಿರುವ ಹರ್ಷಲ್ ಪಟೇಲ್ ಅವರಿಗೆ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಮಧ್ಯಮ ಮತ್ತು ಕೊನೆಯ ಓವರ್‌ಗಳಲ್ಲಿ ರನ್‌ಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಾರೆ.

ಅರ್ಷ್‌ದೀಪ್ ಸಿಂಗ್: ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಅವೇಶ್ ಖಾನ್ ಹೊರಗುಳಿದಿದ್ದರಿಂದ ಯುವ ವೇಗಿ ಅರ್ಷದೀಪ್ ಸಿಂಗ್‌ಗೆ ಅವಕಾಶ ಸಿಗುತ್ತದೆಯೇ ಎಂದು ಕಾದು ನೋಡಬೇಕಿದೆ. ಏಕದಿನ ಸರಣಿಯಲ್ಲಿ ಬೆಂಚ್ ಕಾಯಿಸಿದ್ದ ಅರ್ಷದೀಪ್ ಟಿ20 ಸರಣಿಯಲ್ಲಿ ತಮ್ಮ ಸಾಮರ್ಥ್ಯ ತೋರಿಸಬಹುದು.

Story first published: Friday, July 29, 2022, 15:47 [IST]
Other articles published on Jul 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X