ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್ 3rd ODI: ಈ ಮೈಲಿಗಲ್ಲುಗಳ ಮೇಲೆ ಧವನ್ ಮತ್ತು ಸೂರ್ಯಕುಮಾರ್ ಯಾದವ್ ಕಣ್ಣು

IND vs WI 3rd ODI stats preview: Players records and approaching milestones in Kannada

ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಕೆರಿಬಿಯನ್ನರ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಈ ಸರಣಿಯ ಮೊದಲೆರಡು ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿದ್ದು, ಈ ಎರಡೂ ಪಂದ್ಯಗಳಲ್ಲಿಯೂ ಗೆದ್ದಿರುವ ಟೀಮ್ ಇಂಡಿಯಾ ಸರಣಿಯಲ್ಲಿ 2-0 ಅಂತರದ ಮುನ್ನಡೆ ಕಾಯ್ದುಕೊಳ್ಳುವುದರ ಜತೆಗೆ ಸರಣಿಯನ್ನು ಈಗಾಗಲೇ ವಶಪಡಿಸಿಕೊಂಡಿದೆ.

ಈ ಬಾರಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತವನ್ನು ಈ ತಂಡ ಸೋಲಿಸಿ ಚಾಂಪಿಯನ್ ಆಗಲಿದೆ ಎಂದ ಪಾಂಟಿಂಗ್ಈ ಬಾರಿ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತವನ್ನು ಈ ತಂಡ ಸೋಲಿಸಿ ಚಾಂಪಿಯನ್ ಆಗಲಿದೆ ಎಂದ ಪಾಂಟಿಂಗ್

ಜುಲೈ 22ರಂದು ನಡೆದಿದ್ದ ಪ್ರಥಮ ಏಕದಿನ ಪಂದ್ಯದಲ್ಲಿ 3 ರನ್‌ಗಳ ರೋಚಕ ಜಯವನ್ನು ಸಾಧಿಸಿದ್ದ ಟೀಮ್ ಇಂಡಿಯಾ ಜುಲೈ 24ರಂದು ನಡೆದ ಎರಡನೇ ಏಕದಿನ ಪಂದ್ಯದಲ್ಲಿ 2 ವಿಕೆಟ್‍ಗಳ ರೋಚಕ ಗೆಲುವು ಕಾಣುವುದರ ಮೂಲಕ ವೆಸ್ಟ್ ಇಂಡೀಸ್ ವಿರುದ್ಧ ಸತತ 12ನೇ ಏಕದಿನ ಸರಣಿಯನ್ನು ಗೆದ್ದು ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು ನಿರ್ದಿಷ್ಟ ತಂಡವೊಂದರ ವಿರುದ್ಧ ಸತತವಾಗಿ ಅತಿ ಹೆಚ್ಚು ಏಕದಿನ ಸರಣಿಗಳನ್ನು ಗೆದ್ದ ದಾಖಲೆ ನಿರ್ಮಿಸಿತು.

ICC Women's T20 Ranking: ನಂ.1 ಸ್ಥಾನಕ್ಕೇರಿದ ಮೆಗ್ ಲ್ಯಾನಿಂಗ್; ಸ್ಮೃತಿ, ಶಫಾಲಿ ಸ್ಥಾನವೆಷ್ಟು?ICC Women's T20 Ranking: ನಂ.1 ಸ್ಥಾನಕ್ಕೇರಿದ ಮೆಗ್ ಲ್ಯಾನಿಂಗ್; ಸ್ಮೃತಿ, ಶಫಾಲಿ ಸ್ಥಾನವೆಷ್ಟು?

ಕ್ವೀನ್ಸ್ ಪಾರ್ಕ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 311 ರನ್ ಕಲೆಹಾಕಿ ಟೀಮ್ ಇಂಡಿಯಾಗೆ ಗೆಲ್ಲಲು 312 ರನ್‌ಗಳ ಗುರಿಯನ್ನು ನೀಡಿತ್ತು. ಟೀಮ್ ಇಂಡಿಯಾ ಪರ ಅಂತಿಮ ಹಂತದಲ್ಲಿ 35 ಎಸೆತಗಳಲ್ಲಿ ಅಜೇಯ 64 ರನ್ ಚಚ್ಚಿ ಅಬ್ಬರಿಸಿದ ಅಕ್ಷರ್ ಪಟೇಲ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಟೀಮ್ ಇಂಡಿಯಾ 49.4 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 312 ರನ್ ಕಲೆಹಾಕಿತು. ಹೀಗೆ ಸರಣಿಯನ್ನು ಈಗಾಗಲೇ ತನ್ನ ತೆಕ್ಕೆಗೆ ಹಾಕಿಕೊಂಡಿರುವ ಟೀಮ್ ಇಂಡಿಯಾ ಇಂದು ( ಜುಲೈ 27 ) ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ತೃತೀಯ ಏಕದಿನ ಪಂದ್ಯವನ್ನೂ ಕೂಡ ಗೆದ್ದು ವೈಟ್ ವಾಷ್ ಸಾಧನೆ ಮಾಡುವತ್ತ ಕಣ್ಣಿಟ್ಟಿದೆ. ಅತ್ತ ಇದಕ್ಕೂ ಮುನ್ನ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ವೈಟ್ ವಾಷ್ ಮುಖಭಂಗ ಅನುಭವಿಸಿದ್ದ ವೆಸ್ಟ್ ಇಂಡೀಸ್ ಈ ಅಂತಿಮ ಏಕದಿನ ಪಂದ್ಯದಲ್ಲಿ ಗೆದ್ದು ಮತ್ತೊಮ್ಮೆ ವೈಟ್ ವಾಶ್ ಮುಖಭಂಗದಿಂದ ಪಾರಾಗುವ ಯೋಜನೆಯಲ್ಲಿದೆ. ಇನ್ನು ಇತ್ತಂಡಗಳ ಆಟಗಾರರು ಈ ಪಂದ್ಯದಲ್ಲಿ ತಮ್ಮದೇ ಆದ ಕೆಲ ಮೈಲಿಗಲ್ಲುಗಳನ್ನು ನಿರ್ಮಿಸುವ ಸಾಧ್ಯತೆಗಳಿದ್ದು, ಆ ಮೈಲಿಗಲ್ಲುಗಳ ಪಟ್ಟಿ ಕೆಳಕಂಡಂತಿದೆ.

ಈ ಮೈಲಿಗಲ್ಲುಗಳತ್ತ ಶಿಖರ್ ಧವನ್ ಚಿತ್ತ

ಈ ಮೈಲಿಗಲ್ಲುಗಳತ್ತ ಶಿಖರ್ ಧವನ್ ಚಿತ್ತ

ಟೀಮ್ ಇಂಡಿಯಾ ನಾಯಕ ಶಿಖರ್ ಧವನ್ ವೆಸ್ಟ್ ಇಂಡೀಸ್ ವಿರುದ್ಧದ ತೃತೀಯ ಏಕದಿನ ಪಂದ್ಯದಲ್ಲಿ ಈ ಕೆಳಕಂಡ ಮೈಲಿಗಲ್ಲುಗಳನ್ನು ಮುಟ್ಟುವ ಸಾಧ್ಯತೆಗಳಿವೆ.

• ಏಕದಿನ ಕ್ರಿಕೆಟ್‍ನಲ್ಲಿ 6435 ರನ್ ಕಲೆಹಾಕಿರುವ ಶಿಖರ್ ಧವನ್ ಈ ಪಂದ್ಯದಲ್ಲಿ 65 ರನ್ ಕಲೆಹಾಕಿದರೆ 6500 ರನ್ ಕಲೆಹಾಕಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

• ಏಕದಿನ ಕ್ರಿಕೆಟ್‍ನಲ್ಲಿ 798 ಬೌಂಡರಿಗಳನ್ನು ಕಲೆಹಾಕಿರುವ ಶಿಖರ್ ಧವನ್ ಈ ಪಂದ್ಯದಲ್ಲಿ 2 ಬೌಂಡರಿ ಬಾರಿಸಿದರೆ 800 ಬೌಂಡರಿ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

ಟೀಮ್ ಇಂಡಿಯಾದ ಇತರೆ ಆಟಗಾರರು ನಿರ್ಮಿಸಬಹುದಾದ ಮೈಲಿಗಲ್ಲುಗಳು

ಟೀಮ್ ಇಂಡಿಯಾದ ಇತರೆ ಆಟಗಾರರು ನಿರ್ಮಿಸಬಹುದಾದ ಮೈಲಿಗಲ್ಲುಗಳು

ಟೀಮ್ ಇಂಡಿಯಾದ ಆಟಗಾರರ ಸೂರ್ಯಕುಮಾರ್ ಯಾದವ್ ಮತ್ತು ರವೀಂದ್ರ ಜಡೇಜಾ ವೆಸ್ಟ್ ಇಂಡೀಸ್‌ ವಿರುದ್ಧದ ಈ ಅಂತಿಮ ಏಕದಿನ ಪಂದ್ಯದಲ್ಲಿ ನಿರ್ಮಿಸಬಹುದಾದ ಮೈಲಿಗಲ್ಲುಗಳ ವಿವರ ಕೆಳಕಂಡಂತಿದೆ.

• ಏಕದಿನ ಕ್ರಿಕೆಟ್‍ನಲ್ಲಿ 2447 ರನ್ ಕಲೆ ಹಾಕಿರುವ ಟೀಮ್ ಇಂಡಿಯಾದ ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾ ಈ ಪಂದ್ಯದಲ್ಲಿ 53 ರನ್ ಬಾರಿಸಿದರೆ 2500 ರನ್ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

• ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲಿ 91 ಬೌಂಡರಿಗಳನ್ನು ಬಾರಿಸಿರುವ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ 9 ಬೌಂಡರಿ ಬಾರಿಸಿದರೆ 100 ಬೌಂಡರಿ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

KL Rahul ಗೆ ನಿಜಕ್ಕೂ ಏನಾಗಿದೆ??T20 ಸರಣಿಯಿಂದಲೂ ಔಟ್!!! | *Cricket | OneIndia Kannada
ಈ ಮೈಲಿಗಲ್ಲುಗಳ ಮೇಲೆ ವೆಸ್ಟ್ ಇಂಡೀಸ್ ಆಟಗಾರರ ಕಣ್ಣು

ಈ ಮೈಲಿಗಲ್ಲುಗಳ ಮೇಲೆ ವೆಸ್ಟ್ ಇಂಡೀಸ್ ಆಟಗಾರರ ಕಣ್ಣು

ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಕೆರಿಬಿಯನ್ನರು ಮುಟ್ಟಬಹುದಾದ ಮೈಲಿಗಲ್ಲುಗಳ ಪಟ್ಟಿ

• ಏಕದಿನ ಕ್ರಿಕೆಟ್ ಮಾದರಿಯಲ್ಲಿ ಒಟ್ಟು 48 ಬೌಂಡರಿಗಳನ್ನು ಬಾರಿಸಿರುವ ಶಾಮ್ರಾ ಬ್ರೂಕ್ಸ್ ಈ ಪಂದ್ಯದಲ್ಲಿ 2 ಬೌಂಡರಿ ಬಾರಿಸಿದರೆ 50 ಬೌಂಡರಿ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

• ವೆಸ್ಟ್ ಇಂಡೀಸ್ ತಂಡದ ಜೇಸನ್ ಹೋಲ್ಡರ್ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಒಟ್ಟು 146 ವಿಕೆಟ್‍ಗಳನ್ನು ಪಡೆದಿದ್ದು, ಈ ಪಂದ್ಯದಲ್ಲಿ 4 ವಿಕೆಟ್ ಪಡೆದರೆ 150 ವಿಕೆಟ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

• ಜೇಸನ್ ಹೋಲ್ಡರ್ ಏಕದಿನ ಕ್ರಿಕೆಟ್ ಮಾದರಿಯಲ್ಲಿ 146 ಬೌಂಡರಿಗಳನ್ನು ಬಾರಿಸಿದ್ದು, ಈ ಪಂದ್ಯದಲ್ಲಿ 4 ಬೌಂಡರಿ ಬಾರಿಸಿದರೆ 150 ಏಕದಿನ ಬೌಂಡರಿ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

Story first published: Wednesday, July 27, 2022, 8:05 [IST]
Other articles published on Jul 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X