ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊನೆಯ 2 ಟಿ20 ಪಂದ್ಯಗಳಿಗೆ ರೋಹಿತ್ ಅಲಭ್ಯ? ಹಾಗಿದ್ರೆ ಟೀಂ ಇಂಡಿಯಾ ಕ್ಯಾಪ್ಟನ್ ಯಾರು?

Rohit sharma

ವೆಸ್ಟ್‌ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಈಗಾಗಲೇ 2-1ರಿಂದ ಮುನ್ನಡೆ ಸಾಧಿಸಿದ. ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಆತಿಥೇಯರನ್ನ ವೈಟ್‌ವಾಶ್ ಮಾಡಿದ ಭಾರತ, ಟಿ20 ಸರಣಿಯಲ್ಲೂ ಕೂಡ ಮುನ್ನಡೆ ಸಾಧಿಸಿದೆ.

ಟಿ20 ಸರಣಿಯಲ್ಲಿ ಇನ್ನುಳಿದ ಎರಡು ಪಂದ್ಯಗಳಲ್ಲಿ ಭಾರತ ಪ್ರಬಲ ಹೋರಾಟ ನೀಡುವ ನಿರೀಕ್ಷಿಯಿದೆ. ಹೀಗಿರುವಾಗ ನಾಯಕ ರೋಹಿತ್ ಶರ್ಮಾ ಇಂಜ್ಯುರಿ ತಂಡಕ್ಕೆ ಚಿಂತೆಗೀಡುಮಾಡಿದೆ. ಮೂರನೇ ಟಿ20 ಪಂದ್ಯದಲ್ಲಿ ಅಜೇಯ 11ರನ್‌ ಕಲೆಹಾಕಿ ಉತ್ತಮ ಆರಂಭ ನೀಡಿದ್ದ ಹಿಟ್‌ಮ್ಯಾನ್‌ ರಿಟೈರ್ಡ್ ಹರ್ಟ್‌ ಆಗಿ ಪೆವಿಲಿಯನ್ ಸೇರಿಕೊಂಡರು.

ರೋಹಿತ್ ಅನುಪಸ್ಥಿತಿಯಲ್ಲಿ ಬೊಂಬಾಟ್ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ 50 ಎಸೆತಗಳಲ್ಲಿ 146ರ ಸ್ಟ್ರೈಕ್‌ರೇಟ್‌ನಲ್ಲಿ 50 ಎಸೆತಗಳಲ್ಲಿ 73ರನ್ ಸಿಡಿಸಿದರು.

ಕೊನೆಯ ಎರಡು ಟಿ20 ಪಂದ್ಯಗಳಿಗೆ ರೋಹಿತ್ ಆಡುವುದು ಅನುಮಾನ!

ಕೊನೆಯ ಎರಡು ಟಿ20 ಪಂದ್ಯಗಳಿಗೆ ರೋಹಿತ್ ಆಡುವುದು ಅನುಮಾನ!

ಹೌದು ಫ್ಲೋರಿಡಾದಲ್ಲಿ ಇದೇ ಶನಿವಾರ ಮತ್ತು ಭಾನುವಾರ ನಡೆಯಲಿರುವ ಕೊನೆಯ ಎರಡು ಟಿ20 ಪಂದ್ಯಗಳಿಗೆ ರೋಹಿತ್ ಶರ್ಮಾ ಆಡುವುದು ಅನುಮಾನ ಮೂಡಿಸಿದೆ. ಬ್ಯಾಕ್ ಸ್ಪ್ಯಾಸ್ಮ್‌ನಿಂದ ಬಳಲುತ್ತಿರುವ ಹಿಟ್‌ಮ್ಯಾನ್‌ ಆರಂಭಿಕ ಓವರ್‌ಗಳಲ್ಲಿಯೇ ಪಿಚ್‌ನಿಂದ ಹೊರನಡೆದಿದ್ರು.

ಹೀಗಾಗಿ ಕೊನೆಯ ಎರಡು ಟಿ20 ಪಂದ್ಯಗಳಲ್ಲಿ ಹಿಟ್‌ಮ್ಯಾನ್ ಆಡುವುದು ಅನುಮಾನಕ್ಕೆ ಎಡೆಮಾಡಿದೆ. ಹಾಗೇನಾದ್ರು ಆದಲ್ಲಿ ಭಾರತವನ್ನ ಯಾರು ಮುನ್ನಡೆಸಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ.

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುನ್ನಡೆಯಲಿದೆ ಟೀಂ ಇಂಡಿಯಾ

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುನ್ನಡೆಯಲಿದೆ ಟೀಂ ಇಂಡಿಯಾ

ರೋಹಿತ್ ಶರ್ಮಾ ಇಲ್ಲಿದಿದ್ರೆ, ರಿಷಭ್ ಪಂತ್ ಟೀಂ ಇಂಡಿಯಾವನ್ನ ಮುನ್ನಡೆಸಬಹುದು ಎಂದು ಅನೇಕರು ಅಂದಾಜಿಸಿದ್ರು. ಏಕೆಂದರೆ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಪಂತ್ ತಂಡವನ್ನ ಉತ್ತಮವಾಗೇ ಮುನ್ನಡೆಸಿದ್ರು. ಆದ್ರೆ ಈ ಸರಣಿಯಲ್ಲಿ ರೋಹಿತ್ ಶರ್ಮಾಗೆ ಸಹಾಯವಾಗಲೆಂದು ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಉಪನಾಯಕತ್ವ ನೀಡಿದೆ. ಹೀಗಿರುವಾಗ ರೋಹಿತ್ ಶರ್ಮಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳಲಿದ್ರೆ, ಹಾರ್ದಿಕ್ ಪಾಂಡ್ಯ ನಾಯಕನಾಗಿ ತಂಡವನ್ನ ಮುನ್ನಡೆಸುವುದು ಬಹುತೇಕ ಪಕ್ಕಾ ಆಗಿದೆ.

ಟಿ20 ವಿಶ್ವಕಪ್‌: ಈ ಸ್ಟಾರ್ ಆಟಗಾರನ ಫಾರ್ಮ್ ಭಾರತ ತಂಡಕ್ಕೆ ಸಕಾರಾತ್ಮಕ ಸಂಕೇತ; ಕಮ್ರಾನ್ ಅಕ್ಮಲ್

ಹಾರ್ದಿಕ್‌ ಪಾಂಡ್ಯಗೆ ಉಪನಾಯಕತ್ವ ಏಕೆ ನೀಡಲಾಗಿದೆ?

ಹಾರ್ದಿಕ್‌ ಪಾಂಡ್ಯಗೆ ಉಪನಾಯಕತ್ವ ಏಕೆ ನೀಡಲಾಗಿದೆ?

ಬಿಸಿಸಿಐ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಏಕೆ ಉಪನಾಯಕತ್ವ ನೀಡಲಾಗಿದೆ ಎಂದು ನೋಡಿದ್ದೇ ಆದಲ್ಲಿ, ಇದಕ್ಕೆ ಕಾರಣ ಟಿ20 ಫಾರ್ಮೆಟ್‌ನಲ್ಲಿ ರಿಷಭ್ ಪಂತ್‌ರ ಪ್ರದರ್ಶನವಾಗಿದೆ. ಅಷ್ಟಾಗಿ ಚುಟುಕು ಫಾರ್ಮೆಟ್‌ನಲ್ಲಿ ಮಿಂಚದ ಪಂತ್‌ಗೆ ಮತ್ತೊಮ್ಮೆ ನಾಯಕತ್ವ ನೀಡುವುದು ಸರಿಯಲ್ಲಿ ಎಂದು ಅರಿತಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಪಂತ್ ರನ್‌ಗಳಿಸಲು ಪರದಾಟ ನಡೆಸಿದರು. ಹೀಗಿರುವಾಗ ಮತ್ತೊಮ್ಮೆ ಆತನಿಗೆ ನಾಯಕತ್ವ ಹೊರಿಸಿ ಒತ್ತಡಕ್ಕೆ ತಳ್ಳುವುದು ಬೇಡ ಎನ್ನುವುದು ಬಿಸಿಸಿಐನ ಮುಂದಾಲೋಚನೆಯಾಗಿದೆ.

ಕಾಮನ್‌ವೆಲ್ತ್ ಗೇಮ್ಸ್ 2022: ಪದಕ ಪಟ್ಟಿಯಲ್ಲಿ ಟಾಪ್ 10 ದೇಶಗಳು; ಭಾರತಕ್ಕೆ ಎಷ್ಟನೇ ಸ್ಥಾನ?

ಐರ್ಲೆಂಡ್ ವಿರುದ್ಧ ಯಶಸ್ವಿಯಾಗಿ ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ

ಐರ್ಲೆಂಡ್ ವಿರುದ್ಧ ಯಶಸ್ವಿಯಾಗಿ ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ

ಐರ್ಲೆಂಡ್ ವಿರುದ್ಧದ ಕಳೆದ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾವನ್ನ ಬಹು ಯಶಸ್ವಿಯಾಗಿ ಮುನ್ನಡೆಸಿದ್ದರು. ಎರಡು ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟಿರುವ ಹಾರ್ದಿಕ್‌, ಐಪಿಎಲ್ 2022ರ ಚಾಂಪಿಯನ್ ಕೂಡ ಹೌದು.

ಗುಜರಾತ್ ಟೈಟನ್ಸ್‌ ತಂಡವನ್ನ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿಸಿದ ಕೀರ್ತಿ ಇವರಿಗಿದೆ. ನಾಯಕತ್ವದ ಜೊತೆಗೆ ಆಲ್‌ರೌಂಡರ್ ಪ್ರದರ್ಶನ ನೀಡಿದ್ದ ಪಾಂಡ್ಯ ಚುಟುಕು ಕ್ರಿಕೆಟ್‌ಗೆ ತಕ್ಕಂತಹ ಆಟಗಾರರಾಗಿದ್ದಾರೆ.

ಹೀಗಾಗಿ ಆಗಸ್ಟ್ 6 ಮತ್ತು 7ರಂದು ಫ್ಲೋರಿಡಾದಲ್ಲಿ ನಡೆಯಲಿರುವ ನಾಲ್ಕು ಮತ್ತು ಐದನೇ ಟಿ20 ಪಂದ್ಯದಲ್ಲಿ ಹಿಟ್‌ಮ್ಯಾನ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ತಂಡವನ್ನ ಮುನ್ನಡೆಸಲು ಸಮರ್ಥರಾಗಿದ್ದಾರೆ.

Story first published: Thursday, August 4, 2022, 12:52 [IST]
Other articles published on Aug 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X