ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎರಡೂ ಅಥವಾ ಮೂರು ತಂಡಗಳನ್ನ ಕಣಕ್ಕಿಳಿಸುವ ಸಾಮರ್ಥ್ಯ ಟೀಂ ಇಂಡಿಯಾಗಿದೆ: ದಿನೇಶ್ ಕಾರ್ತಿಕ್

Asia cup 2022

ಭಾರತೀಯ ಕ್ರಿಕೆಟಿಗರು ಈ ವರ್ಷ ಬ್ಯುಸಿಯಾಗಿರುತ್ತಾರೆ. ಈ ಹಿಂದೆ ನಿಗದಿಯಾಗಿದ್ದ ಸರಣಿಗಳು ಮತ್ತು ಪಂದ್ಯಾವಳಿಗಳ ಜೊತೆಗೆ, ಬಿಸಿಸಿಐ ಈ ವರ್ಷ ತನ್ನ ಕ್ಯಾಲೆಂಡರ್‌ಗೆ ಇನ್ನೂ ಮೂರು ಸರಣಿಗಳನ್ನು ಸೇರಿಸಿದೆ. ಇದರಿಂದ ಆಟಗಾರರು ಗೊಂದಲಕ್ಕೀಡಾಗುವುದರಲ್ಲಿ ಸಂಶಯವಿಲ್ಲ. ಅಂತಾರಾಷ್ಟ್ರೀಯ ವೇಳಾಪಟ್ಟಿಯ ಹೊರತಾಗಿ ಎರಡು ತಿಂಗಳ ಅವಧಿಯ ಐಪಿಎಲ್ ಕೂಡ ಆಟಗಾರರ ಮುಂದಿದೆ.

ಬಿಡುವಿಲ್ಲದ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ವಿವಿಧ ಸರಣಿಗಳಲ್ಲಿ ಒಂದೇ ಸಮಯದಲ್ಲಿ ಎರಡು ತಂಡಗಳನ್ನು ಕಣಕ್ಕಿಳಿಸುವ ಪ್ರಯೋಗದಲ್ಲಿ ಈಗಾಗಲೇ ಯಶಸ್ವಿಯಾಗಿದೆ.
ಇದನ್ನೇ ಉದಾಹರಣೆಯಾಗಿ ಇಟ್ಟುಕೊಂಡು ಟೀಂ ಇಂಡಿಯಾ ಎರಡು ಅಥವಾ ಮೂರು ತಂಡಗಳನ್ನ ಕಣಕ್ಕಿಳಿಸುವ ಸಾಮರ್ಥ್ಯ ಹೊಂದಿದೆ ಎಂದು ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್‌ ಹೇಳಿದ್ದಾರೆ.

ದಿನೇಶ್ ಕಾರ್ತಿಕ್ ಸೇರಿದಂತೆ ಯುವ ಆಟಗಾರರು ಸೇರ್ಪಡೆ

ದಿನೇಶ್ ಕಾರ್ತಿಕ್ ಸೇರಿದಂತೆ ಯುವ ಆಟಗಾರರು ಸೇರ್ಪಡೆ

ಐಪಿಎಲ್ 2022ರ ಸೀಸನ್‌ ಬಳಿಕ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ ದಿನೇಶ್ ಕಾರ್ತಿಕ್ ವೈಟ್‌ ಬಾಲ್ ಕ್ರಿಕೆಟ್‌ನಲ್ಲಿ ತಂಡದ ಭಾಗವಾಗಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಖಾಯಂ ಸದಸ್ಯನಾಗಿ ಗುರುತಿಸಿಕೊಂಡಿರುವ ದಿನೇಶ್ ಕಾರ್ತಿಕ್ ಜೊತೆಗೆ ಯುವ ಆಟಗಾರರಾದ ಅರ್ಷ್‌ದೀಪ್ ಸಿಂಗ್‌, ದೀಪಕ್ ಹೂಡಾ, ಅವೇಶ್ ಖಾನ್ ಮತ್ತು ಉಮ್ರಾನ್ ಮಲ್ಲಿಕ್‌ರಂತಹ ಯುವ ಆಟಗಾರರು ಸೇರ್ಪಡೆಯಾಗಿದ್ದಾರೆ.

ಕಾಮನ್‌ವೆಲ್ತ್‌ ಗೇಮ್ಸ್ 2022: 10,000 ಮೀಟರ್ ನಡಿಗೆಯಲ್ಲಿ ಬೆಳ್ಳಿ ಪದಕ ಗೆದ್ದ ಪ್ರಿಯಾಂಕಾ

ಎರಡು ಮೂರು ತಂಡ ಮಾಡುವಷ್ಟು ಆಟಗಾರರಿದ್ದಾರೆ

ಎರಡು ಮೂರು ತಂಡ ಮಾಡುವಷ್ಟು ಆಟಗಾರರಿದ್ದಾರೆ

ವೆಸ್ಟ್‌ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಸದಸ್ಯರಾಗಿರುವ ದಿನೇಶ್ ಕಾರ್ತಿಕ್‌ ಕೆಳಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ತುಂಬಾ ಪ್ರಾಮಾಣಿಕವಾಗಿ ತಂಡದ ಬೆಂಚ್ ಸ್ಟ್ರೆಂಥ್‌ ಕುರಿತು ಮಾತನಾಡಿದ ದಿನೇಶ್ ಕಾರ್ತಿಕ್, ಪ್ರಸ್ತುತ ಟೀಂ ಇಂಡಿಯಾದಲ್ಲಿ ಎರಡು, ಮೂರು ತಂಡ ಮಾಡುವಷ್ಟು ಆಟಗಾರರಿದ್ದಾರೆ ಎಂದಿದ್ದಾರೆ.

"ಲಭ್ಯವಿರುವ ಆಟಗಾರರ ಸಂಖ್ಯೆಗೆ ಸಂಬಂಧಿಸಿದಂತೆ, ಭಾರತೀಯ ತಂಡವು ಈಗ ಎರಡು ತಂಡಗಳನ್ನು ಅಥವಾ ಬಹುಶಃ ಮೂರು ತಂಡಗಳನ್ನು ಕಣಕ್ಕಿಳಿಸಬಹುದು. ಅನೇಕ ರಾಷ್ಟ್ರಗಳು ಆ ಕುರಿತಾಗಿ ಹೆಮ್ಮೆ ಪಡಬಹುದೆಂದು ನನಗೆ ಅನುಮಾನವಿದೆ'' ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

T20 ವಿಶ್ವಕಪ್‌ನಿಂದ ಹೊರಗುಳಿಯಲು ಅನೇಕ ಆಟಗಾರರಿಗೆ ದುರದೃಷ್ಟಕರವಾಗಿರಬಹುದು ಎಂದು ಕಾರ್ತಿಕ್ ಒಪ್ಪಿಕೊಂಡರು, ಆದರೆ ಆಯ್ಕೆಯಾದ 15 ಆಟಗಾರರು ಅಪಾರ ಪ್ರಮಾಣದ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಅವರು ಹೇಳಿದರು.

IND vs ZIM: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿದ್ದಕ್ಕೆ ಶಿಖರ್ ಧವನ್ ಹೇಳಿದ್ದೇನು?

ಟಿ20 ವಿಶ್ವಕಪ್‌ನಲ್ಲಿ ಅವಕಾಶ ಪಡೆಯುವುದೇ ಅದೃಷ್ಟ ಎಂದ ಕಾರ್ತಿಕ್

ಟಿ20 ವಿಶ್ವಕಪ್‌ನಲ್ಲಿ ಅವಕಾಶ ಪಡೆಯುವುದೇ ಅದೃಷ್ಟ ಎಂದ ಕಾರ್ತಿಕ್

"ಟಿ20 ವಿಶ್ವಕಪ್‌ನ 15 ಸದಸ್ಯರನ್ನೊಳಗೊಂಡ (ಟಿ 20 ವಿಶ್ವಕಪ್‌ಗಾಗಿ) ಆಟಗಾರರು ಈ ತಂಡದ ಭಾಗವಾಗುವುದು ಎಷ್ಟು ಮಹತ್ವದ್ದಾಗಿದೆ ಮತ್ತು ಸುಂದರವಾಗಿರುತ್ತದೆ ಮತ್ತು ಜಾಗತಿಕ ಮಟ್ಟದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಲು ನಾವು ಎಷ್ಟು ಸಂತೋಷಪಡುತ್ತೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು" ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

"ಈ ಹಂತದಲ್ಲಿ, ಒತ್ತಡವು ಒಂದು ಸವಲತ್ತು. ನೀವು ಉನ್ನತ ಮಟ್ಟದಲ್ಲಿ ಆಡುತ್ತಿರುವಾಗ ಮತ್ತು ಜನರು ನಿಮ್ಮಿಂದ ಕೆಲವು ವಿಷಯಗಳನ್ನು ನಿರೀಕ್ಷಿಸಿದಾಗ ಇದನ್ನು ಕ್ರೀಡಾಪಟುವಾಗಿ ನೀಡಲಾಗುತ್ತದೆ'' ಎಂದು ಕಾರ್ತಿಕ್ ಹೇಳಿದ್ದಾರೆ.

ಶನಿವಾರ ಫ್ಲೋರಿಡಾದದಲ್ಲಿ (ಆಗಸ್ಟ್ 6) ವೆಸ್ಟ್ ಇಂಡೀಸ್ ವಿರುದ್ಧ ಭಾರತದ ನಾಲ್ಕನೇ ಟಿ-20 ಇಂಟರ್‌ನ್ಯಾಶನಲ್‌ನಲ್ಲಿ ಆಡುವ ನಿರೀಕ್ಷೆಯಿದೆ.

Story first published: Saturday, August 6, 2022, 18:12 [IST]
Other articles published on Aug 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X