ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs WI 5th T20: ಡ್ರೀಂ ಟೀಂ ಫ್ಯಾಂಟೆಸಿ ಟಿಪ್ಸ್‌, ಪಿಚ್ ರಿಪೋರ್ಟ್‌, ಪ್ಲೇಯಿಂಗ್ 11

Ind vs wi t20

ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ಭಾನುವಾರ (ಆ. 07) ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಏಕದಿನ ಸರಣಿಯಲ್ಲಿ ವೈಟ್‌ ವಾಶ್ ಆದ ಬಳಿಕ ಟಿ20 ಸರಣಿಯನ್ನೂ ಕಳೆದುಕೊಂಡ ನಿಕೊಲಸ್ ಪೂರನ್ ಪಡೆ, ಅಂತಿಮ ಪಂದ್ಯದಲ್ಲಾದರೂ ಗೆಲ್ಲಬೇಕೆಂದು ಪಣತೊಟ್ಟಿದೆ.

ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಗೆದ್ದ ಭಾರತ, ಟಿ20 ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 3-1 ಅಂತರದಲ್ಲಿ ಚುಟುಕು ಸರಣಿ ತನ್ನದಾಗಿಸಿಕೊಂಡಿದೆ. ನಾಲ್ಕನೇ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಭಾರತ ಸುಲಭವಾಗಿ ಪಂದ್ಯ ಗೆದ್ದಿದೆ.

132 ರನ್‌ಗಳಿಗೆ ವಿಂಡೀಸ್ ಆಲೌಟ್‌

132 ರನ್‌ಗಳಿಗೆ ವಿಂಡೀಸ್ ಆಲೌಟ್‌

ಟೀಂ ಇಂಡಿಯಾ ನೀಡಿದ್ದ 192 ರನ್‌ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಭಾರತದ ದಾಳಿಗೆ ತತ್ತರಿಸುವ ಮೂಲಕ ಕೇವಲ 132ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಪಂದ್ಯವನ್ನ 59ರನ್‌ಗಳಿಂದ ಟೀಂ ಇಂಡಿಯಾ ತನ್ನದಾಗಿಸಿಕೊಂಡಿತು. ತಂಡದ ಪರ ನಿಕೋಲಸ್ ಪೂರನ್ ಹಾಗೂ ರೋವ್ಮನ್ ಪೋವೆಲ್ ತಲಾ 24ರನ್‌ಗಳಿಸುವ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದ್ರು.

ಭಾರತದ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಅವೇಶ್ ಖಾನ್ 2, ಅರ್ಷ್‌ದೀಪ್ ಸಿಂಗ್ 3, ರವಿ ಬಿಷ್ಣೊಯಿ ಹಾಗೂ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

ಇದಕ್ಕೂ ಮೊದಲ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ಭಾರತ ಐದು ವಿಕೆಟ್ ನಷ್ಟಕ್ಕೆ 191ರನ್ ಕಲೆಹಾಕಿತು. ತಂಡದ ಪರ ರೋಹಿತ್ ಶರ್ಮಾ 33, ಸೂರ್ಯಕುಮಾರ್ ಯಾದವ್ 24, ದೀಪಕ್ ಹೂಡಾ 21, ರಿಷಭ್ ಪಂತ್ 44, ಸಂಜು ಸ್ಯಾಮ್ಸನ್ ಅಜೇಯ 30, ದಿನೇಶ್ ಕಾರ್ತಿಕ್ 6, ಅಕ್ಷರ್ ಪಟೇಲ್ ಅಜೇಯ 20 ರನ್ ಕಲೆಹಾಕಿದರು.

ಪಿಚ್ ರಿಪೋರ್ಟ್‌ ಮತ್ತು ಹವಾಮಾನ

ಪಿಚ್ ರಿಪೋರ್ಟ್‌ ಮತ್ತು ಹವಾಮಾನ

ಫ್ಲೋರಿಡಾದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಹವಾಮಾನ 29 ಡಿಗ್ರಿ ಸೆಲ್ಸಿಯಸ್‌ನಷ್ಟಿರಲಿದ್ದು, ಶೇಕಡಾ 73ರಷ್ಟು ಹ್ಯುಮಿಡಿಟಿ ಮತ್ತು 16 km/hr ವೇಗದಲ್ಲಿ ಗಾಳಿ ಬೀಸಲಿದೆ. ಆದ್ರೆ ಆತಂಕದ ವಿಚಾರ ಅಂದ್ರೆ ಶೇಕಡ 8ರಷ್ಟು ಮಳೆ ಬರುವ ಸಾಧ್ಯತೆ ಇದೆ.

ಇಲ್ಲಿನ ಪಿಚ್‌ನಲ್ಲಿ ಮೊದಲ ಇನ್ನಿಂಗ್ಸ್‌ ಸರಾಸರಿ ಸ್ಕೋರ್ 168ರಷ್ಟಿದ್ದು, ಎರಡನೇ ಬ್ಯಾಟಿಂಗ್ ಮಾಡಿದ ತಂಡವು ಸೋತಿರುವ ಉದಾಹರಣೆ ಹೆಚ್ಚಿದೆ. ಚೇಸಿಂಗ್ ಮಾಡಿದ ತಂಡದ ಗೆಲುವಿನ ಸರಾಸರಿ ಶೇಕಡಾ 20ರಷ್ಟಿದೆ.

CWG 2022: 10ನೇ ದಿನದ ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ವೇಳಾಪಟ್ಟಿ

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಭಾರತ: ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್(ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷ್‌ದೀಪ್‌ ಸಿಂಗ್

ವೆಸ್ಟ್ ಇಂಡೀಸ್: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ರೋವ್ಮನ್ ಪೊವೆಲ್, ಶಿಮ್ರಾನ್ ಹೆಟ್ಮೆಯರ್, ಡೆವೊನ್ ಥಾಮಸ್ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ಡೊಮಿನಿಕ್ ಡ್ರೇಕ್ಸ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್

IND vs WI: ಮುಂದುವರೆದ ಸೋಲಿಲ್ಲದ ಸರದಾರ ರೋಹಿತ್ ಪಾರುಪತ್ಯ; ಮತ್ತೊಂದು ಸರಣಿ ಗೆದ್ದ ಭಾರತ

ಡ್ರೀಂ ಫ್ಯಾಂಟೆಸಿ ಟೀಂ 1

ಡ್ರೀಂ ಫ್ಯಾಂಟೆಸಿ ಟೀಂ 1

ನಾಯಕ- ರೋಹಿತ್ ಶರ್ಮಾ, ಜೇಸನ್ ಹೋಲ್ಡರ್
ಉಪನಾಯಕ - ಅರ್ಷದೀಪ್ ಸಿಂಗ್, ಒಬೆದ್ ಮೆಕಾಯ್
ಕೀಪರ್ - ರಿಷಬ್ ಪಂತ್
ಬ್ಯಾಟ್ಸ್‌ಮನ್‌ಗಳು - ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್
ಆಲ್ ರೌಂಡರ್ - ದೀಪಕ್ ಹೂಡಾ
ಬೌಲರ್‌ಗಳು - ಭುವನೇಶ್ವರ್ ಕುಮಾರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಒಬೆದ್ ಮೆಕಾಯ್ (ಉಪನಾಯಕ), ಅರ್ಷದೀಪ್ ಸಿಂಗ್

ಡ್ರೀಂ ಫ್ಯಾಂಟೆಸಿ ಟೀಂ 2

ಡ್ರೀಂ ಫ್ಯಾಂಟೆಸಿ ಟೀಂ 2

ವಿಕೆಟ್ ಕೀಪರ್ಸ್ - ರಿಷಬ್ ಪಂತ್, ನಿಕೋಲಸ್ ಪೂರನ್
ಬ್ಯಾಟ್ಸ್‌ಮನ್‌ಗಳು - ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಬ್ರಾಂಡನ್ ಕಿಂಗ್
ಆಲ್ ರೌಂಡರ್‌ಗಳು - ದೀಪಕ್ ಹೂಡಾ, ಜೇಸನ್ ಹೋಲ್ಡರ್ (ನಾಯಕ), ಅಕ್ಷರ್ ಪಟೇಲ್
ಬೌಲರ್‌ಗಳು - ಅಲ್ಜಾರಿ ಜೋಸೆಫ್, ಒಬೆದ್ ಮೆಕಾಯ್, ಅರ್ಶ್‌ದೀಪ್ ಸಿಂಗ್ (ಉಪನಾಯಕ)

ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ ಡ್ರೀಂ ಟೀಂ ನಾಯಕನ ಆಯ್ಕೆಯಲ್ಲಿ ಪ್ರಮುಖ ಆಟಗಾರನಾಗಿದ್ದು, ಜೇಸನ್ ಹೋಲ್ಡರ್‌ ಕೂಡ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದ್ದಾರೆ. ಬ್ರಾಂಡನ್ ಕಿಂಗ್‌ ಮತ್ತು ಅಕ್ಷರ್ ಪಟೇಲ್‌ ಕೂಡ ಹೆಚ್ಚು ಆಯ್ಕೆಯಾಗುವ ಆಟಗಾರರು. ಡ್ರೀಂ 11 ಫ್ಯಾಂಟೆಸಿ ತಂಡದ ಬೆಸ್ಟ್‌ ಸಂಯೋಜನೆ 1-4-1-5 ಆಗಿದೆ. ತಂಡದ ಬಲವನ್ನ ಗಮನಿಸಿದ್ರೆ, ಟೀಂ ಇಂಡಿಯಾ ಈ ಪಂದ್ಯ ಗೆಲ್ಲಬಹುದು.

Story first published: Sunday, August 7, 2022, 12:02 [IST]
Other articles published on Aug 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X