ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವೆಸ್ಟ್ ಇಂಡೀಸ್: ಅಂತಿಮ ಟಿ20 ಪಂದ್ಯದ ಟಾಸ್ ವರದಿ, ಆಡುವ ಬಳಗ, Live ಸ್ಕೋರ್

Ind vs WI: 5th t20I, match report and live score, toss report and playing XI, Florida

ಭಾರತ ಹಾಗೂ ವೆಸ್ಟ್ ಇಂಡಿಸ್ ವಿರುದ್ಧದ ಟಿ20 ಸರಣಿಯ 5ನೇ ಹಾಗೂ ಅಂತಿಮ ಪಂದ್ಯದ ಆರಂಭವಾಗಿದೆ. ಈ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಆತಿಥೆಯ ವೆಸ್ಟ್ ಇಂಡೀಸ್ ತಂಡ ರನ್ ಬೆನ್ನಟ್ಟುವ ಸವಾಲು ಸ್ವೀಕರಿಸಿದೆ. ಸರಣಿಯಲ್ಲಿ ಈಗಾಗಲೇ ಸೋಲು ಅನುಬವಿಸಿರುವ ವೆಸ್ಟ್ ಇಂಡೀಸ್ ಅಂತಿಮ ಪಂದ್ಯವನ್ನು ಗೆದ್ದು ಹಿನ್ನಡೆಯನ್ನು ಕಡಿಮೆ ಗೊಳಿಸುವ ಪ್ರಯತ್ನ ನಡೆಸಲಿದೆ.

ಇನ್ನು ಈ ಪಂದ್ಯದಲ್ಲಿ ನಾಲ್ಕು ಬದಲಾವಣೆಯನ್ನು ಮಾಡಿಕೊಂಡು ಕಣಕ್ಕಿಳಿದಿದೆ. ಸ್ವತಃ ನಾಯಕ ರೋಹಿತ್ ಶರ್ಮಾ ಸೇರಿದಂತೆ ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾಗೂ ಭುವನೇಶ್ವರ್ ಕುಮಾರ್ ಆಡುವ ಬಳಗದಿಮದ ಹೊರಗುಳಿದಿದ್ದಾರೆ. ಈ ಆಟಗಾರರ ಬದಲಿಗೆ ಇಶಾನ್ ಕಿಶನ್, ಶ್ರೇಯಸ್ ಐಯ್ಯರ್, ಕುಲ್‌ದೀಪ್ ಯಾದವ್ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ವೆಸ್ಟ ಇಂಡೀಸ್ ತಂಡ ಕೂಡ ನಾಲ್ಕು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಬ್ಯೂಸ್, ವಾಲ್ಶ್, ಓಡಿಯನ್ ಸ್ಮಿತ್ ಹಾಗೂ ಕೀಮೋ ಪೌಲ್ ಆಡುವ ಬಳಗದಲ್ಲಿ ಕಾಣಿಸಿಕೊಂಡ ಆಟಗಾರರಾಗಿದ್ದಾರೆ.

Live ಸ್ಕೋರ್‌ಕಾರ್ಡ್ ಹೀಗಿದೆ

1
54166

IND vs WI: ವಿರಾಟ್ ಕೊಹ್ಲಿ ಕನಿಷ್ಠ ಏಕದಿನ or ಟಿ20 ಆಡಬೇಕಿತ್ತು ಎಂದ ಮಾಜಿ ಕ್ರಿಕೆಟಿಗIND vs WI: ವಿರಾಟ್ ಕೊಹ್ಲಿ ಕನಿಷ್ಠ ಏಕದಿನ or ಟಿ20 ಆಡಬೇಕಿತ್ತು ಎಂದ ಮಾಜಿ ಕ್ರಿಕೆಟಿಗ

ನಾಯಕನಾಗಿ ಹಾರ್ದಿಕ್ ಪಾಂಡ್ಯ

ನಾಯಕನಾಗಿ ಹಾರ್ದಿಕ್ ಪಾಂಡ್ಯ

ತಂಡದ ಖಾಯಂ ನಾಯಕ ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿರುವ ಕಾರಣ ಈ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮುನ್ನಡೆಸುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಈಗಾಗಲೇ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿ ಯಶಸ್ಸು ಕಂಡಿದ್ದು. ಇದೀಗ ವೆಸ್ಟ್ ಇಂಡಿಸ್ ವಿರುದ್ಧದ ಸರಣಿಯಲ್ಲಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಇಬ್ಬರೂ ವಿಶ್ರಾಂತಿ ಪಡೆದಿರುವ ಕಾರಣ ಆರಂಭಿಕರಾಗಿ ಹೊಸ ಜೋಡಿ ಕಣಕ್ಕಿಳಿದಿದೆ. ಇಶಾನ್ ಕಿಶನ್ ಹಾಗೂ ಶ್ರೇಯಸ್ ಐಯ್ಯರ್ ಆರಂಭಿಕರಾಗಿ ಬ್ಯಾಟಿಂಗ್‌ಗೆ ಇಳಿದಿದ್ದಾರೆ.

ವೆಸ್ಟ್ ಇಂಡೀಸ್ ಆಡುವ ಬಳಗ

ವೆಸ್ಟ್ ಇಂಡೀಸ್ ಆಡುವ ಬಳಗ

ವೆಸ್ಟ್ ಇಂಡಿಸ್ ಪ್ಲೇಯಿಂಗ್ XI: ಶಮರ್ ಬ್ರೂಕ್ಸ್, ಶಿಮ್ರಾನ್ ಹೆಟ್ಮೆಯರ್, ನಿಕೋಲಸ್ ಪೂರನ್ (ನಾಯಕ), ಡೆವೊನ್ ಥಾಮಸ್ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ಓಡಿಯನ್ ಸ್ಮಿತ್, ಕೀಮೋ ಪಾಲ್, ಡೊಮಿನಿಕ್ ಡ್ರೇಕ್ಸ್, ಒಬೆಡ್ ಮೆಕಾಯ್, ಹೇಡನ್ ವಾಲ್ಷ್, ರೋವ್‌ಮನ್ ಪೊವೆಲ್
ಬೆಂಚ್: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಅಕೀಲ್ ಹೊಸೈನ್, ಅಲ್ಜಾರಿ ಜೋಸೆಫ್, ರೊಮಾರಿಯೋ ಶೆಫರ್ಡ್

ಭಾರತ ಆಡುವ ಬಳಗ

ಭಾರತ ಆಡುವ ಬಳಗ

ಭಾರತ ತಂಡ ಪ್ಲೇಯಿಂಗ್ XI: ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅವೇಶ್ ಖಾನ್, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್
ಬೆಂಚ್: ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಭುವನೇಶ್ವರ್ ಕುಮಾರ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ರವೀಂದ್ರ ಜಡೇಜಾ

Story first published: Sunday, August 7, 2022, 20:14 [IST]
Other articles published on Aug 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X