ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಯಕ ಕೊಹ್ಲಿ ಪುಸ್ತಕ ಓದುತ್ತಿರುವ ಫೋಟೋ ಸಕತ್ ವೈರಲ್

ವಿರಾಟ್ ಕೊಹ್ಲಿ ಟ್ರೋಲ್ ಆಗುತ್ತಿರೋದು ಯಾಕೆ ಗೊತ್ತಾ..? | Virat Kohli | Oneindia Kannada
Ind vs WI first test : Tweets on Virat Kohli reading Detox Your Ego

ಆಂಟಿಗಾ, ಆಗಸ್ಟ್ 25: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸುತ್ತಿದೆ. ಈ ನಡುವೆ ಪಂದ್ಯದ ನಡುವೆ ಪೆವಿಲಿಯನ್ ನಲ್ಲಿ ಕುಳಿತು ಕೊಹ್ಲಿ ಪುಸ್ತಕ ಓದುತ್ತಿದ್ದ ಚಿತ್ರ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.

ಸ್ಟೀವನ್ ಸಿಲ್ವೆಸ್ಟರ್ ಬರೆದಿರುವ 'Detox Your Ego' ಎಂಬ ಪುಸ್ತಕ ಓದುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗಿದೆ. ಈ ಬಗ್ಗೆ ತಮಾಷೆಯಾಗಿ ಕಾಮೆಂಟ್ ಗಳು ಬರುತ್ತಿವೆ. ಈ ಪುಸ್ತಕವನ್ನು ಕೊಹ್ಲಿ ತುಂಬಾ ಮುಂಚೆ ಓದಬೇಕಿತ್ತು. ಇದು ಅವರಿಗೆ ಸರಿಯಾದ ಪುಸ್ತಕ ಎಂದಿದ್ದಾರೆ. ಕೊಹ್ಲಿಗೆ ಈ ಪುಸ್ತಕ ಕೊಟ್ಟಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.

'ವಿರಾಟ್ ಕೊಹ್ಲಿ, ಸಚಿನ್ ಎಲ್ಲಾ ದಾಖಲೆ ಮುರಿಯುತ್ತಾರೆ, ಒಂದನ್ನು ಬಿಟ್ಟು!''ವಿರಾಟ್ ಕೊಹ್ಲಿ, ಸಚಿನ್ ಎಲ್ಲಾ ದಾಖಲೆ ಮುರಿಯುತ್ತಾರೆ, ಒಂದನ್ನು ಬಿಟ್ಟು!'

ಪಂದ್ಯದ 2ನೇ ದಿನದಂದು ಆಲ್ ರೌಂಡರ್ ರವೀಂದ್ರ ಜಡೇಜ ಉತ್ತಮ ಆಟ ಪ್ರದರ್ಶಿಸುತ್ತಿದ್ದ ಸಮಯದಲ್ಲಿ ಕೊಹ್ಲಿ ಪುಸ್ತಕ ಓದುತ್ತಾ ಕುಳಿತಿದ್ದರು. ಹಾಗೆ ನೋಡಿದರೆ, ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಅವರು ಕೂಡಾ ಈ ಹಿಂದೆ ಅನೇಕ ಬಾರಿ ಪೆವಿಲಿಯನ್ ನಲ್ಲಿ ಪುಸ್ತಕ ಓದುತ್ತಾ ಕುಳಿತುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಭಾರತ vs ವಿಂಡೀಸ್ 1st ಟೆಸ್ಟ್, 3ನೇ ದಿನ, Live: ಕೊಹ್ಲಿ ಪಡೆ ಮುನ್ನಡೆ ಭಾರತ vs ವಿಂಡೀಸ್ 1st ಟೆಸ್ಟ್, 3ನೇ ದಿನ, Live: ಕೊಹ್ಲಿ ಪಡೆ ಮುನ್ನಡೆ

ಇಶಾಂತ್ ಶರ್ಮ 9ನೇ ಬಾರಿಗೆ ಪಂದ್ಯವೊಂದರಲ್ಲಿ 5 ವಿಕೆಟ್ ಪಡೆದು ಮಿಂಚಿದ್ದರಿಂದ ವಿಂಡೀಸ್ ತಂಡ ಭಾರತಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 297ಕ್ಕೆ ಆಲೌಟ್ ಆಗಿದೆ, ವಿಂಡೀಸ್ ಮೊದಲ ಇನ್ನಿಂಗ್ಸ್ ನಲ್ಲಿ 222 ಸ್ಕೋರಿಗೆ ಸರ್ವಪತನ ಕಂಡಿದೆ. ಮೂರನೇ ದಿನದ ಅಂತ್ಯಕ್ಕೆ ಭಾರತ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 185/3ಸ್ಕೋರ್ ಮಾಡಿದೆ.

ಟ್ವಿಟರ್‌ನಲ್ಲಿ ಭಾವನಾತ್ಮಕ ಸಂದೇಶ ಬರೆದ ನಾಯಕ ವಿರಾಟ್ ಕೊಹ್ಲಿ ಟ್ವಿಟರ್‌ನಲ್ಲಿ ಭಾವನಾತ್ಮಕ ಸಂದೇಶ ಬರೆದ ನಾಯಕ ವಿರಾಟ್ ಕೊಹ್ಲಿ

ಕೊನೆಗೂ ಕೊಹ್ಲಿಗೆ ಸರಿಯಾದ ಪುಸ್ತಕ ಓದಲಿಕ್ಕೆ ಸಿಕ್ಕಿದೆ

ಕೊಹ್ಲಿಗೆ ಯಾರೋ ಸರಿಯಾದ ಉಡುಗೊರೆಯನ್ನು ನೀಡಿದ್ದಾರೆ.

ಉಡುಗೊರೆ ಕೊಟ್ಟರೂ ಕೊಹ್ಲಿ ಈ ಪುಸ್ತಕ ಓದುವಂತೆ ಪ್ರೇರೇಪಿಸಿದವರು ಯಾರು?

ಕೊಹ್ಲಿ ಓದಿದ ಬಳಿಕ ಈ ಪುಸ್ತಕಕ್ಕೆ ಭಾರತದಲ್ಲಿ ಭಾರಿ ಬೇಡಿಕೆ ಬಂದರೂ ಆಶ್ಚರ್ಯವೇನಿಲ್ಲ.

Story first published: Sunday, August 25, 2019, 11:58 [IST]
Other articles published on Aug 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X