ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs WI: ರಿಷಭ್ ಪಂತ್‌, ಸಂಜು ಸ್ಯಾಮ್ಸನ್ ನಡುವಿನ ವ್ಯತ್ಯಾಸ ತಿಳಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

IND vs WI: Former Pakistan Cricketer Talk On The Difference Between Rishabh Pant And Sanju Samson

ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದ ಮೊದಲನೇ ಏಕದಿನ ಪಂದ್ಯದಲ್ಲಿ ಕೇವಲ 12 ರನ್‌ಗಳಿಗೆ ಔಟಾಗುವ ಮೂಲಕ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತೀಯ ವಿಕೆಟ್‌ಕೀಪರ್ ಆಗಿರುವ ಸಂಜು ಸ್ಯಾಮ್ಸನ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಕಳಪೆ ಔಟ್ ಆದರು.

ಸೀಮಿತ ಓವರ್‌ಗಳ ಸ್ವರೂಪದಲ್ಲಿ ಬ್ಯಾಟ್‌ನೊಂದಿಗೆ ಅಸಮಂಜಸತೆಯನ್ನು ತೋರಿಸಿದ್ದಕ್ಕಾಗಿ ರಾಜಸ್ಥಾನ್ ರಾಯಲ್ಸ್ ನಾಯಕನೂ ಆಗಿರುವ ಸಂಜು ಸ್ಯಾಮ್ಸನ್‌ನನ್ನು ಟೀಕಿಸಲಾಗಿದೆ. ಆದರೆ ಅವರು ಭಾರತೀಯ ಆಟಗಾರರ ಆಡುವ 11ರ ಬಳಗದಲ್ಲಿ ಸ್ಥಿರ ಸ್ಥಾನವನ್ನು ಪಡೆದಿಲ್ಲ ಎಂಬುದು ನಿಜ. ಸಂಜು ಸ್ಯಾಮ್ಸನ್ ಇದುವರೆಗೆ 2 ಏಕದಿನ ಮತ್ತು 14 ಟಿ20 ಪಂದ್ಯಗಳಲ್ಲಿ ಆಡಿದ್ದು, ಎರಡು ಸ್ವರೂಪಗಳಲ್ಲಿ 58 ಮತ್ತು 251 ರನ್ ಗಳಿಸಿದ್ದಾರೆ.

IND vs WI 2ನೇ ODI: ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ಶಿಖರ್ ಧವನ್ ಬಳಗ; ಸಂಭಾವ್ಯ ತಂಡಗಳುIND vs WI 2ನೇ ODI: ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ಶಿಖರ್ ಧವನ್ ಬಳಗ; ಸಂಭಾವ್ಯ ತಂಡಗಳು

ಸಂಜು ಸ್ಯಾಮ್ಸನ್ ಸ್ಪರ್ಧೆಯು ರಿಷಭ್ ಪಂತ್ ಜೊತೆ ಹೋಲಿಕೆಯಾಗುತ್ತಿದೆ. ರಿಷಭ್ ಪಂತ್ ಇದೀಗ ವೈಟ್-ಬಾಲ್ ಆಟಗಳಲ್ಲಿ ತಮ್ಮದೇ ಆದ ಆಟದಿಂದ ಗಮನ ಸೆಳೆಯುತ್ತಿದ್ದಾರೆ. ರಿಷಭ್ ಪಂತ್ ಪ್ರದರ್ಶನ ಖಂಡಿತವಾಗಿಯೂ ಒಂದು ವಿದ್ಯಮಾನವಾಗಿದ್ದು, ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದರು.

ರಿಷಭ್ ಪಂತ್‌ಗಿಂತ ಸಂಜು ಸ್ಯಾಮ್ಸನ್ ಸಂಪೂರ್ಣ ವಿಭಿನ್ನ ಆಟಗಾರ

ರಿಷಭ್ ಪಂತ್‌ಗಿಂತ ಸಂಜು ಸ್ಯಾಮ್ಸನ್ ಸಂಪೂರ್ಣ ವಿಭಿನ್ನ ಆಟಗಾರ

ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗಿಂತ ಮುಂಚೆ ಈ ಇಬ್ಬರೂ ಸ್ಟಾರ್‌ಗಳಿಗೆ ಉತ್ತಮ ಪ್ರದರ್ಶನ ನೀಡುವ ಅವಶ್ಯಕತೆ ಇದೆ. ಸಂಜು ಸ್ಯಾಮ್ಸನ್ ಅವರು ರಿಷಭ್ ಪಂತ್‌ಗಿಂತ ಸಂಪೂರ್ಣವಾಗಿ ವಿಭಿನ್ನ ಆಟಗಾರ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಹೇಳಿದ್ದಾರೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯದ ಕುರಿತು ಮಾತನಾಡುತ್ತಾ, ಸಂಜು ಸ್ಯಾಮ್ಸನ್ ಅವರು ರಿಷಭ್ ಪಂತ್‌ನಂತೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲದ ಕಾರಣ, ಆರ್ಡರ್ ಅನ್ನು ತಳ್ಳಿಹಾಕಬಾರದು ಎಂದು ದಾನಿಶ್ ಕನೇರಿಯಾ ತಿಳಿಸಿದರು.

"ಸಂಜು ಸ್ಯಾಮ್ಸನ್‌ಗೆ ಮತ್ತೊಂದು ಅವಕಾಶ ಸಿಕ್ಕಿತು, ಆದರೆ ಅವರು ವಿಶೇಷವಾಗಿ ಆಡಲಿಲ್ಲ. ರೊಮಾರಿಯೋ ಶೆಫರ್ಡ್ ಬೌಲಿಂಗ್‌ನಲ್ಲಿ ಔಟಾಗುವ ಮೊದಲು ಅವರು ಕಳಪೆಯಾಗಿ ಕಾಣುತ್ತಿದ್ದರು. ಆದರೆ ಮತ್ತೊಮ್ಮೆ ನಾನು ದೀಪಕ್ ಹೂಡಾ ಬಗ್ಗೆ ಮಾತನಾಡುತ್ತೇನೆ. ಅವನು ಏಕೆ ಬ್ಯಾಟಿಂಗ್ ಆರ್ಡರ್ ಬದಲಾವಣೆ ಮಾಡಿದ? ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಕ್ರಮವಾಗಿ ನಂ.2 ಮತ್ತು 3 ಸ್ಥಾನಗಳಲ್ಲಿ ಬಂದರು".

ಸ್ಯಾಮ್ಸನ್‌ಗಿಂತ ಮುಂಚೆ ಹೂಡಾ ಬ್ಯಾಟಿಂಗ್‌ಗೆ ಬರಬೇಕಿತ್ತು

ಸ್ಯಾಮ್ಸನ್‌ಗಿಂತ ಮುಂಚೆ ಹೂಡಾ ಬ್ಯಾಟಿಂಗ್‌ಗೆ ಬರಬೇಕಿತ್ತು

"ಆದರೆ ದೀಪಕ್ ಹೂಡಾ ಸಂಜು ಸ್ಯಾಮ್ಸನ್‌ಗಿಂತ ಮುಂಚೆ ಬ್ಯಾಟಿಂಗ್‌ಗೆ ಬರಬೇಕಿತ್ತು. ಭಾರತ ತಂಡದ ಮ್ಯಾನೇಜ್‌ಮೆಂಟ್ ಸಂಜು ಸ್ಯಾಮ್ಸನ್‌ರನ್ನು ರಿಷಭ್ ಪಂತ್ ರೀತಿಯಲ್ಲಿಯೇ ಬ್ಯಾಟಿಂಗ್ ಕ್ರಮಾಂಕವನ್ನು ಹೆಚ್ಚಿಸಿತು. ಆದರೆ ಸ್ಯಾಮ್ಸನ್ ಅವರು ಪಂತ್ ರೀತಿ ಆಡಲಿಲ್ಲ. ಅವರ ಬ್ಯಾಟಿಂಗ್ ಸಂಪೂರ್ಣವಾಗಿ ವಿಭಿನ್ನವಾಗಿದೆ," ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಭಾನುವಾರ (ಜುಲೈ 24) ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು 2-0 ಅಂತರದ ಅಜೇಯ ಮುನ್ನಡೆ ಸಾಧಿಸಲು ಎದುರು ನೋಡುತ್ತಿದೆ.

ವೆಸ್ಟ್ ಇಂಡೀಸ್ ಮತ್ತು ಭಾರತ ಸಂಭಾವ್ಯ ತಂಡಗಳು

ವೆಸ್ಟ್ ಇಂಡೀಸ್ ಮತ್ತು ಭಾರತ ಸಂಭಾವ್ಯ ತಂಡಗಳು

ವೆಸ್ಟ್ ಇಂಡೀಸ್: ನಿಕೋಲಸ್ ಪೂರನ್ (ನಾಯಕ), ಶಾಯ್ ಹೋಪ್ (ಉಪನಾಯಕ), ಶಮರ್ ಬ್ರೂಕ್ಸ್, ಕೀಸಿ ಕಾರ್ಟಿ, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ಗುಡಕೇಶ್ ಮೋಟಿ, ಕೀಮೋ ಪಾಲ್, ರೋವ್‌ಮನ್ ಪೊವೆಲ್ ಮತ್ತು ಜೇಡನ್ ಸೀಲ್ಸ್.

ಭಾರತ: ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.

Story first published: Sunday, July 24, 2022, 16:46 [IST]
Other articles published on Jul 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X