ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಕ್ಷರ್ ಸಾಹಸದಿಂದ ಗೆದ್ದ ಭಾರತ: ತಂಡದ ಮೇಲೆ ನಂಬಿಕೆಯಿತ್ತು ಎಂದ ನಾಯಕ ಧವನ್

Ind vs Eng: Indian skipper Shikhar Dhawan reaction after Team India victroy

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದೆ. ಆಲ್‌ರೌಂಡರ್ ಅಕ್ಷರ್ ಪಟೇಲ್ ಈ ಪಂದ್ಯದಲ್ಲಿ ಬ್ಯಾಟಿಂಗ್‌ನನಲ್ಲಿ ನೀಡಿದ ಅಮೋಘ ಪ್ರದರ್ಶನದಿಂದಾಗಿ ಭಾರತ ತಂಡ ವಿಂಡೀಸ್ ನೀಡಿದ್ದ ಬೃಹತ್ ಗುರಿಯನ್ನು ಮೀರ ನಿಲ್ಲಲು ಯಶಸ್ವಿಯಾಯಿತು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಉಳಿದಿರುವಂತೆಯೇ ಭಾರತ 2-0 ಅಂತರದಿಂದ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ರೋಚಕ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ನಾಯಕ ಶಿಖರ್ ಧವನ್ ಪ್ರತಿಕ್ರಿಯೆ ನೀಡಿದ್ದಾರೆ. "ನನ್ನ ಪ್ರಕಾರ ಇದೊಂದು ಶ್ರೇಷ್ಠವಾದ ತಂಡದ ಪ್ರದರ್ಶನವಾಗಿತ್ತು. ನಾವು ತಪ್ಪುಗಳನ್ನು ಮಾಡಿದೆವು, ನಾವು ಸವಾಲನ್ನು ಸ್ವೀಕರಿಸಿದೆವು. ಆದರೆ ನಮ್ಮಲ್ಲಿ ಆತ್ಮವಿಶ್ವಾಸವಿತ್ತು" ಎಂದಿದ್ದಾರೆ ಭಾರತ ತಂಡದ ಹಂಗಾಮಿ ನಾಯಕ ಶಿಖರ್ ಧವನ್. ಈ ಸಂದರ್ಭದಲ್ಲಿ ಮಧ್ಯಮ ಕ್ರಮಾಂಕದಿಂದ ಪ್ರದರ್ಶನಕ್ಕೆ ಧವನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

IND vs WI: 5 ಸಿಕ್ಸ್, ಅಜೇಯ 64 ರನ್ ಚಚ್ಚಿದ ಅಕ್ಷರ್; 2ನೇ ಏಕದಿನ ಗೆದ್ದು ಸರಣಿ ವಶಪಡಿಸಿಕೊಂಡ ಭಾರತIND vs WI: 5 ಸಿಕ್ಸ್, ಅಜೇಯ 64 ರನ್ ಚಚ್ಚಿದ ಅಕ್ಷರ್; 2ನೇ ಏಕದಿನ ಗೆದ್ದು ಸರಣಿ ವಶಪಡಿಸಿಕೊಂಡ ಭಾರತ

ನಾವು ತಪ್ಪುಗಳನ್ನು ಮಾಡಿದೆವು

ನಾವು ತಪ್ಪುಗಳನ್ನು ಮಾಡಿದೆವು

ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ನಾಯಕ ಧವನ್ ತಮ್ಮ ತಂಡದಿಂದ ಕೆಲ ತಪ್ಪುಗಳು ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಈ ತಪ್ಪುಗಳನ್ನು ನಾವು ಸವಾಲಾಗಿ ಸ್ವೀಕರಿಸಿದೆವು ಎಂದಿದ್ದಾರೆ. "ನಮ್ಮ ತಂಡದಲ್ಲಿ ಆತ್ವ ವಿಶ್ವಾಸವಿತ್ತು. ಆದರೆ ಒಂದು ಹಂತದಲ್ಲಿ ನಾವು ಕೂಡ ಆಶ್ಚರ್ಯಗೊಂಡಿದ್ದೆ. ನಮ್ಮ ಮಧ್ಯಕ ಕ್ರಮಾಂಕದ ಪ್ರದರ್ಶನಕ್ಕೆ ಹ್ಯಾಟ್ಸ್‌ಆಫ್ ಹೇಳಬೇಕು. ಎಲ್ಲಾ ಬ್ಯಾಟರ್‌ಗಳಿಂದಲೂ ಅದ್ಭುತ ಕೊಡುಗೆ ಬಂದಿದೆ.

ಅಕ್ಷರ್ ಪಟೇಲ್ ಅಮೋಘ ಆಟ ಎಂದ ಧವನ್

ಅಕ್ಷರ್ ಪಟೇಲ್ ಅಮೋಘ ಆಟ ಎಂದ ಧವನ್

"ನಾವು ನಿಧಾನವಾಗಿ ಆರಂಭವನ್ನು ಪಡೆದೆವು. ಸ್ಪಿನ್ನರ್‌ಗಳ ವಿರುದ್ಧ ನಾವು ಹೆಚ್ಚು ರನ್ ಗಳಿಸಬಹುದು ಎಂದು ನಾವು ಭಾವಿಸಿದ್ದೆ. ಆದರೆ ಈ ಸಂದರ್ಭದಲ್ಲಿ ನಾನು ವಿಕೆಟ್ ಕಳೆದುಕೊಂಡೆ. ಈ ಸಂದರ್ಭದಲ್ಲಿ ಶ್ರೇಯಸ್ ಐಯ್ಯರ್ ಹಾಗೂ ಸಂಜು ಸ್ಯಾಮ್ಸನ್ ಉತ್ತಮ ಆಟವನ್ನು ಪ್ರದರ್ಶಿಸಿದರು. ಕ್ಷುಲ್ಲಕ ತಪ್ಪಿನಿಂದಾಗಿ ಈ ಸಂದರ್ಭದಲ್ಲಿ ರನೌಟ್ ಆಯಿತು. ಆದರೆ ಅದಾದ ಬಳಿಕ ಅಕ್ಷರ್ ಪಟೇಲ್ ಬ್ಯಾಟಿಂಗ್‌ನಲ್ಲಿ ನೀಡಿದ ಪ್ರದರ್ಶನ ಅಮೋಘ" ಎಂದು ತಂಡದ ಹೋರಾಟದ ಬಗ್ಗೆ ಶಿಖರ್ ಧವನ್ ವಿಶೇಷ ಮಾತುಗಳನ್ನು ಆಡಿದ್ದಾರೆ. ಈ ಪಂದ್ಯದಲ್ಲಿ ಭಾರತದ ಮಧ್ಯಕ ಕ್ರಮಾಂಕದ ಆಟಗಾರರಾದ ಸಂಜು ಸ್ಯಾಮ್ಸನ್, ಶ್ರೇಯಸ್ ಐಯ್ಯರ್ ಹಾಗೂ ಆಲ್‌ರೌಂಡರ್ ಅಕ್ಷರ್ ಪಟೇಲ್ ಅರ್ಧ ಶತಕ ಸಿಡಿಸಿದ್ದಾರೆ.

ಎರಡು ಎಸೆತ ಇರುವಂತೆಯೇ ಗೆದ್ದ ಭಾರತ

ಎರಡು ಎಸೆತ ಇರುವಂತೆಯೇ ಗೆದ್ದ ಭಾರತ

ಇನ್ನು ವೆಸ್ಟ್ ಇಂಡೀಸ್ ಎರಡನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಆಟಗಾರ ಶಾಯ್ ಹೋಪ್ ಅವರ ಭರ್ಜರಿ ಶತಕ ಹಾಗೂ ನಾಯಕ ಪೂರನ್ 74 ರನ್‌ಗಳ ಸಹಾಯದಿಂದ ವೆಸ್ಟ್ ಇಂಡೀಸ್ ತಂಡ ಭರ್ಜರಿ 311 ರನ್‌ಗಳನ್ನು ಗಳಿಸಲು ಯಶಸ್ವಿಯಾಯಿತು. ಇದನ್ನು ಬೆನ್ನಟ್ಟಿದ ಭಾರತ ತಂಡ ಒಂದು ಹಂತದಲ್ಲಿ ಸೋಲಿನ ಭೀತಿಗೆ ಒಳಗಾಗಿತ್ತು. ಆದರೆ ಅಕ್ಷರ್ ಪಟೇಲ್ ಅಂತಿಮ ಹಂತದಲ್ಲಿ ನಿರೀಕ್ಷಿಸದ ರೀತಿಯಲ್ಲಿ ಬ್ಯಾಟಿಂಗ್ ನಡೆಸಿದರು. ಕೇವಲ 35 ಎಸೆತಗಳನ್ನು ಎದುರಿಸಿದ ಅಕ್ಷರ್ ಐದು ಸಿಕ್ಸರ್ ಮೂರು ಬೌಂಡರಿ ಸಹಾಯದಿಂದ 64 ರನ್ ಸಿಡಿಸಿದರು. ಇದರ ಪರಿಣಾಮವಾಗಿ ಭಾರತ ಇನ್ನೂ ಎರಡು ಎರಡತಗಳು ಬಾಕಿಯಿರುವಂತೆಯೇ ಗೆದ್ದು ಬೀಗಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

ಮೈದಾನದಲ್ಲೇ ಅಯ್ಯರ್ ಮತ್ತು ಶಿಖರ್ ಧವನ್ ಮಸ್ತಿ ಹೇಗಿತ್ತು ನೋಡಿ | *Cricket | OneIndia Kannada
ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ವೆಸ್ಟ್ ಇಂಡೀಸ್: ಶಾಯ್ ಹೋಪ್ (ವಿಕೆಟ್ ಕೀಪರ್), ಕೈಲ್ ಮೇಯರ್ಸ್, ಶಮರ್ ಬ್ರೂಕ್ಸ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್ (ನಾಯಕ), ರೋವ್‌ಮನ್ ಪೊವೆಲ್, ಅಕೇಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಅಲ್ಜಾರಿ ಜೋಸೆಫ್, ಜೇಡನ್ ಸೀಲ್ಸ್, ಹೇಡನ್ ವಾಲ್ಷ್
ಬೆಂಚ್: ಕೀಮೋ ಪಾಲ್, ಕೀಸಿ ಕಾರ್ಟಿ

ಭಾರತ: ಶಿಖರ್ ಧವನ್ (ನಾಯಕ), ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್, ಅವೇಶ್ ಖಾನ್
ಬೆಂಚ್: ಋತುರಾಜ್ ಗಾಯಕ್ವಾಡ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಇಶಾನ್ ಕಿಶನ್

Story first published: Monday, July 25, 2022, 12:00 [IST]
Other articles published on Jul 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X