ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vd WI: ರೋಹಿತ್ ಶರ್ಮಾ ಸಂಪೂರ್ಣ ಫಿಟ್: ಅಂತಿಮ ಎರಡು ಪಂದ್ಯಗಳಿಗೆ ಲಭ್ಯ ಎನ್ನುತ್ತಿವೆ ವರದಿ!

Ind vs WI: Report says Indian skipper Rohit Sharma fit and available for last two T20Is against West Indies

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಬೆನ್ನುನೋವಿಗೆ ಒಳಗಾಗಿದ್ದ ರೋಹಿತ್ ಶರ್ಮಾ ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಯುನೈಟೆಡ್ ಸ್ಟೇಟ್ಸ್‌ನ ಫ್ಲೋರಿಡಾದಲ್ಲಿ ನಡೆಯಲಿರುವ ಅಂತಿಮ ಎರಡು ಪಂದ್ಯಗಳಿಗೆ ರೋಹಿತ್ ಶರ್ಮಾ ಲಭ್ಯವಾಗಲಿದ್ದಾರೆ ಎನ್ನಲಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ರೋಹಿತ್ ಶರ್ಮಾ 5 ಎಸೆತಗಳಲ್ಲಿ 11 ರನ್‌ಗಳನ್ನು ಗಳಿಸಿದ್ದರು. ಈ ಸಂದರ್ಭದಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ರೋಹಿತ್ ತೀವ್ರ ಬೆನ್ನುನೋವಿಗೆ ಒಳಗಾಗಿದ್ದು ಗಾಯದಿಂದ ನಿವೃತ್ತಿ ಪಡೆದುಕೊಂಡರು. ಅದಾದ ಬಳಿಕ ಬಿಸಿಸಿಐ ಸಾಮಾಜಿಕ ಟ್ವಿಟ್ಟರ್‌ನಲ್ಲಿ ರೋಹಿತ್ ಶರ್ಮಾ ಬೆನ್ನು ನೋವಿಗೆ ತುತ್ತಾಗಿರುವುದನ್ನು ಖಚಿತಪಡಿಸಿದ್ದು ವೈದ್ಯಕೀಯ ಸಿಬ್ಬಂದಿಗಳು ರೋಹಿತ್ ನೆರವಿಗಿದ್ದಾರೆ ಎಂದು ತಿಳಿಸಿತ್ತು.

ಟಿ20 ವಿಶ್ವಕಪ್‌: ಈ ಸ್ಟಾರ್ ಆಟಗಾರನ ಫಾರ್ಮ್ ಭಾರತ ತಂಡಕ್ಕೆ ಸಕಾರಾತ್ಮಕ ಸಂಕೇತ; ಕಮ್ರಾನ್ ಅಕ್ಮಲ್ಟಿ20 ವಿಶ್ವಕಪ್‌: ಈ ಸ್ಟಾರ್ ಆಟಗಾರನ ಫಾರ್ಮ್ ಭಾರತ ತಂಡಕ್ಕೆ ಸಕಾರಾತ್ಮಕ ಸಂಕೇತ; ಕಮ್ರಾನ್ ಅಕ್ಮಲ್

ಗಾಯದ ಬಗ್ಗೆ ಮಾಹಿತಿ ನೀಡಿದ್ದ ರೋಹಿತ್

ಗಾಯದ ಬಗ್ಗೆ ಮಾಹಿತಿ ನೀಡಿದ್ದ ರೋಹಿತ್

ಇನ್ನು ಈ ಪಂದ್ಯದ ಮುಕ್ತಾಯದ ಬಳಿಕ ರೋಹಿತ್ ಶರ್ಮಾ ಮಾತನಾಡುತ್ತಾ ಗಾಯದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. "ಈ ಕ್ಷಣಕ್ಕೆ ಪರವಾಗಿಲ್ಲ. ಮುಂದಿನ ಪಂದ್ಯಕ್ಕೆ ಕೆಲ ದಿನಗಳ ಸಮಯವಿದೆ. ಆ ವೇಳೆಗೆ ಎಲ್ಲವೂ ಸರಿಯಾಗಬಹುದು ಎನಿಸುತ್ತದೆ" ಎಂದಿದ್ದರು ರೋಹಿತ್ ಶರ್ಮಾ. ಈ ಸರಣಿಯ ಮೊದಲ ಪಂದ್ಯದಲ್ಲಿ 44 ಎಸೆತಗಳಿಂದ 64 ರನ್‌ಗಳಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ರೋಹಿತ್ ಶರ್ಮಾ ಎರಡನೇ ಪಂದ್ಯದಲ್ಲಿ ಮೊದಲ ಎಸೆತದಲ್ಲಿಯೇ ವಿಕೆಟ್ ಕಳೆದುಕೊಂಡಿದ್ದರು. ಆದರೆ ಮೂರನೇ ಪಂದ್ಯದಲ್ಲಿ ಅದ್ಭುತ ಲಯದಲ್ಲಿದ್ದಂತೆ ಕಂಡುಬಂದಿದ್ದರಾದರೂ ಗಾಯದ ಕಾರಣ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲು ಸಾಧ್ಯವಾಗಲಿಲ್ಲ.

4ನೇ ಪಂದ್ಯದಲ್ಲಿ ರೋಹಿತ್ ಆಡಲಿದ್ದಾರೆ ಎನ್ನುತ್ತಿದೆ ವರದಿ

4ನೇ ಪಂದ್ಯದಲ್ಲಿ ರೋಹಿತ್ ಆಡಲಿದ್ದಾರೆ ಎನ್ನುತ್ತಿದೆ ವರದಿ

ರೋಹಿತ್ ಶರ್ಮಾ ಸದ್ಯ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಅಂತಿಮ ಎರಡು ಪಂದ್ಯಗಳಲ್ಲಿ ಅವರು ಭಾವಹಿಸಲಿದ್ದಾರೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಆದರೆ ಮುಂದಿನ ದಿನಗಳಲ್ಲಿ ಭಾರತ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಕಾರಣ ರೋಹಿತ್ ಶರ್ಮಾ ಫಿಟ್‌ನೆಸ್ ಬಹಳಷ್ಟು ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಮ್ಯಾನೇಜ್‌ಮೆಂಟ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ರೋಹಿತ್ ಸ್ಥಾನ ತುಂಬಲು ಸಿದ್ಧವಾಗಿದ್ದಾರೆ ಯುವ ಆಟಗಾರರು

ರೋಹಿತ್ ಸ್ಥಾನ ತುಂಬಲು ಸಿದ್ಧವಾಗಿದ್ದಾರೆ ಯುವ ಆಟಗಾರರು

ಅಂತಿಮ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲು ನಿರ್ಧರಿಸಿದರೆ ಆರಂಭಿಕನಾಗಿ ರೋಹಿತ್ ಶರ್ಮಾ ಸ್ಥಾನವನ್ನು ಇಶಾನ್ ಕಿಶನ್ ತುಂಬಬಹುದಾಗಿದೆ. ಆದರೆ ತಂಡವನ್ನು ಯಾರು ಮುನ್ನಡೆಸುವುದು ಎಂಬುದು ಪ್ರಶ್ನೆ. ಇತ್ತೀಚೆಗಷ್ಟೇ ಭಾರತ ತಂಡವನ್ನು ಮುನ್ನಡೆಸಿರುವ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ತಂಡದಲ್ಲಿದ್ದು ನಾಯಕತ್ವದ ಹೊಣೆಗಾರಿಗೆಯನ್ನು ಈ ಯುವ ಆಟಗಾರರಿಗೆ ನೀಡಬಹುದು.

ಯುಎಸ್‌ ವೀಸಾ ಪಡೆದ ಭಾರತ ಹಾಗೂ ವೆಸ್ಟ್ ಇಂಡೀಸ್ ಆಟಗಾರರು

ಯುಎಸ್‌ ವೀಸಾ ಪಡೆದ ಭಾರತ ಹಾಗೂ ವೆಸ್ಟ್ ಇಂಡೀಸ್ ಆಟಗಾರರು

ಇನ್ನು ಅಂತಿಮ ಎರಡು ಪಂದ್ಯಗಳು ಯುನೈಟೆಡ್ ಸ್ಟೇಟ್ಸ್‌ನ ಫ್ಲೋರಿಡಾದಲ್ಲಿ ಆಯೋಜನೆಯಾಗಲಿದೆ. ಹೀಗಾಗಿ ಭಾರತ ಹಾಗೂ ವೆಸ್ಟ್ ಇಂಡೀಸ್ ಎರಡೂ ತಂಡಗಳ ಎಲ್ಲಾ ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಯುಎಸ್ ವೀಸಾ ದೊರೆತಿದೆ. ವೀಸಾ ವಿಚಾರವಾಗಿ ಕೆಲ ಗೊಂದಲಗಳು ಮೂಡಿದ್ದ ಕಾರಣ ಆತಂಕ ಮೂಡಿಸಿತ್ತು. ಆದರೆ ಗಯಾನ ಸರ್ಕಾರ ರಾಜತಾಂತ್ರಿಕವಾಗಿ ಮಧ್ಯಪ್ರವೇಶಿಸಿದ ಕಾರಣ ಈ ಗೊಂದಲಕ್ಕೆ ತೆರೆಬಿದ್ದಿದ್ದು ಎಲ್ಲಾ ಆಟಗಾರರು ಕೂಡ ವೀಸಾ ಪಡೆದುಕೊಂಡಿದ್ದಾರೆ.

ಸ್ಕ್ವಾಡ್‌ಗಳು ಹೀಗಿದೆ
ವೆಸ್ಟ್ ಇಂಡೀಸ್: ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೆವೊನ್ ಥಾಮಸ್ (ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್, ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್, ಓಡಿಯನ್ ಸ್ಮಿತ್, ಕೀಮೋ ಪಾಲ್, ಶಮರ್ ಬ್ರೂಕ್ಸ್, ರೊಮಾರಿಯೋ ಶೆಫರ್ಡ್, ಹೇಡನ್ ವಾಲ್ಷ್

ಭಾರತ: ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಅರ್ಷ್ದೀಪ್ ಸಿಂಗ್, ರವಿ ಬಿಷ್ಣೋಯ್, ಇಶಾನ್ ಕಿಶನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ , ಸಂಜು ಸ್ಯಾಮ್ಸನ್, ಹರ್ಷಲ್ ಪಟೇಲ್, ರವೀಂದ್ರ ಜಡೇಜಾ

Story first published: Thursday, August 4, 2022, 15:42 [IST]
Other articles published on Aug 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X