ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನು ಸಂಪೂರ್ಣ ನಾಲ್ಕು ಓವರ್ ಬೌಲಿಂಗ್ ಮಾಡಬಲ್ಲೆ: ಹಾರ್ದಿಕ್ ಪಾಂಡ್ಯ

Hardik pandya

ಐಪಿಎಲ್ 2022ರ ಸೀಸನ್‌ನಲ್ಲಿ ಭರ್ಜರಿ ಆಟವಾಡಿದ ಬಳಿಕ ಟೀಂ ಇಂಡಿಯಾ ಪರ ಪ್ರಮುಖ ಆಲ್‌ರೌಂಡರ್ ಆಗಿ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ ಭಾರತ ತಂಡದಲ್ಲಿ ನನ್ನ ಬೌಲಿಂಗ್ ಮೌಲ್ಯವನ್ನು ಕಲಿತಿದ್ದೇನೆ ಎಂದು ಹೇಳಿದ್ದಾರೆ.

ಸಂಪೂರ್ಣ ಓವರ್‌ಗಳ ಕೋಟಾವನ್ನು ಬೌಲಿಂಗ್ ಮಾಡುವುದರಿಂದ ತಂಡಕ್ಕೆ ಸಮತೋಲನ ಬರುತ್ತದೆ ಎಂದು ಅವರು ಅರಿತುಕೊಂಡರು ಎಂದು ಹೇಳಿದರು. ಬುಧವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ಹಾರ್ದಿಕ್ ಪ್ರಮುಖ ವಿಕೆಟ್ ಪಡೆದರು.

ಟಿ20 ಕ್ರಿಕೆಟ್‌ನಲ್ಲಿ 50ನೇ ವಿಕೆಟ್ ಪಡೆದ ಹಾರ್ದಿಕ್ ಪಾಂಡ್ಯ

ಟಿ20 ಕ್ರಿಕೆಟ್‌ನಲ್ಲಿ 50ನೇ ವಿಕೆಟ್ ಪಡೆದ ಹಾರ್ದಿಕ್ ಪಾಂಡ್ಯ

ಭಾರತೀಯ ಕ್ರಿಕೆಟ್‌ನಲ್ಲಿ ಇದುವರೆಗೆ ಯಾವುದೇ ಆಟಗಾರ ಮಾಡದ ಸಾಧನೆಯನ್ನ ಹಾರ್ದಿಕ್ ಪಾಂಡ್ಯ ಮಾಡಿದರು. ಪಂದ್ಯದ 8ನೇ ಓವರ್‌ನಲ್ಲಿ ಬ್ರಾಂಡನ್ ಕಿಂಗ್ ವಿಕೆಟ್ ಪಡೆದರು. ಕೈಲ್ ಮೇಯರ್ಸ್ ಜೊತೆಗೆ ಉತ್ತಮ ಜೊತೆಯಾಟ ನೀಡುತ್ತಿದ್ದ ಬ್ರಾಂಡನ್‌ ವಿಕೆಟ್ ಎಗರಿಸುವಲ್ಲಿ ಹಾರ್ದಿಕ್ ಯಶಸ್ವಿಯಾದ್ರು. ಇದು ಟಿ20 ಕ್ರಿಕೆಟ್‌ನಲ್ಲಿ ಹಾರ್ದಿಕ್‌ಗೆ 50ನೇ ವಿಕೆಟ್ ಆಗಿದೆ.
ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ (1/19) ಬೌಲಿಂಗ್ ಮಾಡಲು ಶಕ್ತರಾದರು.

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ವಿಕೆಟ್ ಮೈಲುಗಲ್ಲು ತಲುಪಿದ ಭಾರತದ ಆರನೇ ಆಟಗಾರ ಎಂಬ ಸಾಧನೆಯನ್ನ ಹಾರ್ದಿಕ್ ಪಾಂಡ್ಯ ಮಾಡಿದ್ದಾರೆ. ಇದಕ್ಕೂ ಮೊದಲು ಜಸ್ಪ್ರೀತ್ ಬುಮ್ರಾ, ಯುಜವೇಂದ್ರ ಚಹಾಲ್, ರವೀಂದ್ರ ಜಡೇಜಾ ಅವರಂತಹ ಆಟಗಾರರು ಈ ಸಾಧನೆ ಮಾಡಿದ್ದಾರೆ.

ಟಿ20 ಶ್ರೇಯಾಂಕಪಟ್ಟಿಯಲ್ಲಿ ಸೂರ್ಯಕುಮಾರ್ 2ನೇ ಸ್ಥಾನಕ್ಕೆ ಲಗ್ಗೆ: ಮೊದಲ ಸ್ಥಾನದ ಮೇಲೆ ಕಣ್ಣು

ಸೂರ್ಯಕುಮಾರ್ ಪ್ರದರ್ಶನ ಕುರಿತು ಹಾರ್ದಿಕ್ ಹೊಗಳಿಕೆಯ ಮಾತು

ಸೂರ್ಯಕುಮಾರ್ ಪ್ರದರ್ಶನ ಕುರಿತು ಹಾರ್ದಿಕ್ ಹೊಗಳಿಕೆಯ ಮಾತು

ಸೂರ್ಯಕುಮಾರ್ ಯಾದವ್‌ ಭಾರತ ಪರ ಮೂರನೇ ಟಿ20 ಪಂದ್ಯದಲ್ಲಿ ಓಪನರ್ ಆಗಿ 146ರ ಸ್ಟ್ರೈಕ್‌ರೇಟ್‌ನಲ್ಲಿ 50 ಎಸೆತಗಳಲ್ಲಿ 73ರನ್ ಸಿಡಿಸಿದರು. ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಸೂರ್ಯ ಇನ್ನಿಂಗ್ಸ್‌ನಲ್ಲಿ ಎಂಟು ಬೌಂಡರಿ ಮತ್ತು ನಾಲ್ಕು ಅಮೋಘ ಸಿಕ್ಸರ್‌ ಒಳಗೊಂಡಿದ್ದವು. ಒಂದೆಡೆ ವಿಕೆಟ್ ಉರುಳಿದರೂ ತನ್ನ ಕ್ಲಾಸ್ ಆಟವಾಡಿದ ಸೂರ್ಯಕುಮಾರ್ ಯಾದವ್ ಸಿಕ್ಕ ಅವಕಾಶದಲ್ಲಿ ಮಿಂಚಿನ ಆಟವಾಡಿದರು.

''ಸೂರ್ಯಕುಮಾರ್ ಯಾದವ್ ಅಸಾಧಾರಣ ಆಟಗಾರ. ಅವರು ಬಿಗ್ ಶಾಟ್‌ ಹೊಡೆಯುವುದನ್ನು ವೀಕ್ಷಿಸಲು ಬಯಸುತ್ತೇನೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಗೆಲುವಿನಲ್ಲಿ ಅವರ ಇನ್ನಿಂಗ್ಸ್ ನಿರ್ಣಾಯಕವಾಗಿತ್ತು. ಅವಕಾಶಗಳು ತಡವಾಗಿ ಬಂದರೂ ಮೊದಲು ತೆಗೆದುಕೊಳ್ಳುತ್ತಾರೆ. ಅದಕ್ಕಾಗಿ ಶ್ರಮಿಸಿದ್ದಾರೆ. ನಾನು ಪೂರ್ಣ ಓವರ್‌ಗಳನ್ನು ಪೂರ್ಣಗೊಳಿಸುತ್ತಿರುವುದು ಒಳ್ಳೆಯದು. ಬೌಲಿಂಗ್ ಮಾಡುವುದನ್ನು ಯಾವಾಗಲೂ ಆನಂದಿಸುತ್ತಿದ್ದರು. ನಾನು ಈಗಾಗಲೇ ಹಲವು ಬಾರಿ ಹೇಳಿದ್ದೇನೆ. ಗಾಯದಿಂದ ಚೇತರಿಸಿಕೊಂಡ ನಂತರ ಪೂರ್ಣ ಕೋಟಾವನ್ನು ಮಾಡಲು ಸ್ವಲ್ಪ ಸಮಯ ತೆಗೆದುಕೊಂಡಿದ್ದೇನೆ'' ಎಂದಿದ್ದಾರೆ.

Ind vs WI 3rd T20: ಮಹತ್ವದ ದಾಖಲೆ ಮಾಡಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ

ತನ್ನ ಬೌಲಿಂಗ್‌ನಿಂದಾಗಿ ತಂಡಕ್ಕೆ ಸಮತೋಲನ: ಪಾಂಡ್ಯ

ತನ್ನ ಬೌಲಿಂಗ್‌ನಿಂದಾಗಿ ತಂಡಕ್ಕೆ ಸಮತೋಲನ: ಪಾಂಡ್ಯ

ನನ್ನ ಬೌಲಿಂಗ್ನಿಂದಾಗಿ ತಂಡದಲ್ಲಿ ಸಮತೋಲನವನ್ನು ತರುತ್ತದೆ ಎಂದು ನಾನು ಅರಿತುಕೊಂಡೆ. ನಾಯಕ ಮತ್ತು ತಂಡಕ್ಕೆ ನನ್ನ ಮೇಲೆ ನಂಬಿಕೆ ಬರುವಂತೆ ಮಾಡಲು ಸಾಧ್ಯವಾಯಿತು. ಹಿಂದೆ ಬೇರೆಯವರು ಬೌಲಿಂಗ್ ಮಾಡಲು ಕಷ್ಟಪಡುತ್ತಿದ್ದಾಗ ಮಾತ್ರ ನಾನು ಬೌಲಿಂಗ್ ಮಾಡಲು ಬರುತ್ತಿದ್ದೆ. ಆದರೆ ಈಗ ನಾನು ಸಂಪೂರ್ಣ ಓವರ್‌ಗಳನ್ನು ಬೌಲ್ ಮಾಡಬಲ್ಲೆ ಎಂದು ಹೆಮ್ಮೆಯಿಂದ ಹೇಳಬಲ್ಲೆ. ಬ್ಯಾಟಿಂಗ್‌ನಲ್ಲೂ ಪ್ರಮುಖ ಪಾತ್ರ ವಹಿಸುವ ವಿಶ್ವಾಸವಿದೆ ಎಂದು ಹಾರ್ದಿಕ್ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಉಪನಾಯಕನಾಗಿ ಅಧಿಕಾರ ವಹಿಸಿಕೊಂಡಿರುವುದಕ್ಕೆ ಹಾರ್ದಿಕ್ ಸಂತಸ ವ್ಯಕ್ತಪಡಿಸಿದ್ದಾರೆ. "ಗಾಯಗೊಂಡ ನಂತರ ಅಥವಾ ಫಾರ್ಮ್‌ನಿಂದ ಹೊರಗುಳಿದ ನಂತರ ತಂಡಕ್ಕೆ ಮರಳಲು ಸಾಕಷ್ಟು ಕಠಿಣ ಪರಿಶ್ರಮ ಬೇಕಾಗುತ್ತದೆ. ಅದಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದೇನೆ. ಅದಕ್ಕೇ ನಾನು ಚೆನ್ನಾಗಿ ಆಡಿದರೂ ಆಡದಿದ್ದರೂ ಅದೇ ಪ್ರತಿಕ್ರಿಯೆ ಕೊಡುವುದು ರೂಢಿ. ಭಾರತ ತಂಡದ ಉಪನಾಯಕನಾಗಿರುವುದು ಗೌರವದ ಸಂಗತಿ. ನಾಯಕ ರೋಹಿತ್ ಶರ್ಮಾ ನಮಗೆ ಸಾಕಷ್ಟು ಸ್ವಾತಂತ್ರ್ಯ ನೀಡಿದ್ದಾರೆ ಎಂದು ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯಿಸಿದ್ದಾರೆ.

ಶನಿವಾರ ನಡೆಯಲಿದೆ ನಾಲ್ಕನೇ ಟಿ20 ಪಂದ್ಯ

ಶನಿವಾರ ನಡೆಯಲಿದೆ ನಾಲ್ಕನೇ ಟಿ20 ಪಂದ್ಯ

ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ನಾಲ್ಕನೇ ಮತ್ತು ಐದನೇ ಟಿ20 ಪಂದ್ಯವನ್ನು ಫ್ಲೋರಿಡಾದ ಸೆಂಟ್ರಲ್ ಬ್ರೊವಾರ್ಡ್ ರೀಜನಲ್ ಪಾರ್ಕ್‌ ಸ್ಟೇಡಿಯಂ ಟರ್ಪ್‌ ಗ್ರೌಂಡ್‌ನಲ್ಲಿ ಆಡಲಿದೆ. ನಾಲ್ಕನೇ ಪಂದ್ಯವು ಶನಿವಾರ ನಡೆಯಲಿದ್ದು, ಈ ಪಂದ್ಯದಲ್ಲಿ ಭಾರತ ಜಯಿಸಿದ್ರೆ ಸರಣಿಯನ್ನ ತನ್ನದಾಗಿಸಿಕೊಳ್ಳಲಿದ್ದು, ವಿಂಡೀಸ್ ಗೆಲ್ಲಲೇಬೇಕಾದ ಅನಿವಾರ್ಯತೆ ಹೊಂದಿದೆ.

Story first published: Wednesday, August 3, 2022, 23:20 [IST]
Other articles published on Aug 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X