ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ರೀತಿ ಆಡುವುದು ನ್ಯಾಯವಲ್ಲ: ಕೊಹ್ಲಿ ವಿಕೆಟ್ ಪಡೆದ ವಿಂಡೀಸ್ ಬೌಲರ್ ವಿರುದ್ಧ ಗವಾಸ್ಕರ್ ಕಿಡಿ!

IND vs WI t20: Sunil Gavaskar questions Roston Chase for covering his palm during the match

ಭಾರತ ಪ್ರವಾಸವನ್ನು ಕೈಗೊಂಡಿರುವ ವೆಸ್ಟ್ ಇಂಡೀಸ್ ಟೀಮ್ ಇಂಡಿಯಾ ವಿರುದ್ಧದ ಸೀಮಿತ ಓವರ್ ಸರಣಿಗಳಲ್ಲಿ ನಿರತವಾಗಿದೆ. ಹೌದು, ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ ಟ್ವೆಂಟಿ ಸರಣಿಗಳ ಆಯೋಜನೆಯಾಗಿದ್ದು, ಇತ್ತಂಡಗಳ ನಡುವಿನ ಏಕದಿನ ಸರಣಿ ಈಗಾಗಲೇ ಮುಗಿದು ಸದ್ಯ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ನಡೆಯುತ್ತಿದೆ.

ಐಪಿಎಲ್ ಹರಾಜು: ಈ ಸಾಮಾನ್ಯ ಆಟಗಾರರಿಗೆ ಕೋಟಿ ಏಕೆ? ಎಲ್ಲಾ ಫ್ರಾಂಚೈಸಿಯಲ್ಲೂ ಓರ್ವ ಕಳಪೆ ಆಟಗಾರ!ಐಪಿಎಲ್ ಹರಾಜು: ಈ ಸಾಮಾನ್ಯ ಆಟಗಾರರಿಗೆ ಕೋಟಿ ಏಕೆ? ಎಲ್ಲಾ ಫ್ರಾಂಚೈಸಿಯಲ್ಲೂ ಓರ್ವ ಕಳಪೆ ಆಟಗಾರ!

ಇನ್ನು ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಟೆಸ್ಟ್ ಹಾಗೂ ಏಕದಿನ ಎರಡೂ ಸರಣಿಗಳಲ್ಲಿಯೂ ಕೂಡ ಸೋತು ಮುಖಭಂಗಕ್ಕೊಳಗಾಗಿದ್ದ ಟೀಮ್ ಇಂಡಿಯಾ ಇದೀಗ ವೆಸ್ಟ್ ಇಂಡೀಸ್ ವಿರುದ್ಧ ಮೊದಲಿಗೆ ನಡೆದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ವೈಟ್ ವಾಷ್ ಸಾಧನೆ ಮಾಡಿದ್ದು ಯಶಸ್ಸಿನ ಹಾದಿಗೆ ಮರಳಿದೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಎಲ್ಲಾ ಪಂದ್ಯಗಳನ್ನು ಗೆದ್ದ ಟೀಮ್ ಇಂಡಿಯಾ ನಂತರ ಆರಂಭವಾಗಿರುವ ಟಿ ಟ್ವೆಂಟಿ ಸರಣಿಯಲ್ಲಿಯೂ ಕೂಡ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಹೌದು, ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಈಗಾಗಲೇ 3 ಪಂದ್ಯಗಳ ಟ್ವೆಂಟಿ ಸರಣಿಯ ಮೊದಲೆರಡು ಪಂದ್ಯಗಳು ಮುಗಿದಿದ್ದು, ಈ ಎರಡೂ ಪಂದ್ಯಗಳಲ್ಲಿಯೂ ಕೂಡ ಟೀಮ್ ಇಂಡಿಯಾ ಕೆರಿಬಿಯನ್ನರಿಗೆ ಸೋಲುಣಿಸಿದೆ. ಈ ಮೂಲಕ ಸರಣಿಯನ್ನು ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಟಿ ಟ್ವೆಂಟಿ ಸರಣಿಯಲ್ಲಿ ವೈಟ್ ವಾಷ್ ಬಳಿಯುವ ಸನಿಹದಲ್ಲಿದೆ.

ಕೊಹ್ಲಿ ನೀಡಿದ್ದ ಬೆಲೆ ಕಟ್ಟಲಾಗದ ಉಡುಗೊರೆಯನ್ನು ಕಣ್ಣೀರಿಟ್ಟು ವಾಪಸ್ ಮಾಡಿದ್ದೆ ಎಂದ ಸಚಿನ್!ಕೊಹ್ಲಿ ನೀಡಿದ್ದ ಬೆಲೆ ಕಟ್ಟಲಾಗದ ಉಡುಗೊರೆಯನ್ನು ಕಣ್ಣೀರಿಟ್ಟು ವಾಪಸ್ ಮಾಡಿದ್ದೆ ಎಂದ ಸಚಿನ್!

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಹಾಗೂ ಚೊಚ್ಚಲ ಟಿ ಟ್ವೆಂಟಿ ಪಂದ್ಯದಲ್ಲಿ ಸುಲಭ ಗೆಲುವನ್ನು ಸಾಧಿಸಿದ ಟೀಂ ಇಂಡಿಯಾ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಕೊನೆಯ ಹಂತದವರೆಗೂ ಹೋರಾಟವನ್ನು ನಡೆಸಿ ನಂತರ ಗೆಲುವಿನ ಕೇಕೆ ಹಾಕಿತು. ಪಂದ್ಯದಲ್ಲಿ ಉತ್ತಮ ಪೈಪೋಟಿ ನೀಡಿದ ಕೆರಿಬಿಯನ್ನರು ಅಂತಿಮ ಹಂತದಲ್ಲಿ ಚೇಸ್ ಮಾಡಲಾಗದೆ ಎಡವಿದರು. ಹೀಗೆ ಪೈಪೋಟಿಯುತ ಪ್ರದರ್ಶನ ನೀಡಿದ ವೆಸ್ಟ್ ಇಂಡೀಸ್ ಆಟಗಾರರ ಕುರಿತು ಪ್ರಶಂಸೆಗಳು ವ್ಯಕ್ತವಾಗುತ್ತಿದ್ದು, ಇದರ ನಡುವೆ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ವೆಸ್ಟ್ ಇಂಡೀಸ್ ತಂಡದ ಬೌಲರ್ ಒಬ್ಬನ ವಿರುದ್ಧ ಈ ಕೆಳಕಂಡಂತೆ ಕಿಡಿಕಾರಿದ್ದಾರೆ.

ವೆಸ್ಟ್ ಇಂಡೀಸ್ ಬೌಲರ್ ರೋಸ್ಟನ್ ಚೇಸ್ ವಿರುದ್ಧ ಸುನಿಲ್ ಗವಾಸ್ಕರ್ ಗರಂ

ವೆಸ್ಟ್ ಇಂಡೀಸ್ ಬೌಲರ್ ರೋಸ್ಟನ್ ಚೇಸ್ ವಿರುದ್ಧ ಸುನಿಲ್ ಗವಾಸ್ಕರ್ ಗರಂ

ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ದ್ವಿತೀಯ ಟಿ ಟ್ವೆಂಟಿ ಪಂದ್ಯ ಮುಗಿದ ನಂತರ ಮಾತನಾಡಿರುವ ಸುನಿಲ್ ಗವಾಸ್ಕರ್ ವೆಸ್ಟ್ ಇಂಡೀಸ್ ತಂಡದ ಬೌಲರ್ ರೋಸ್ಟನ್ ಚೇಸ್ ಪಂದ್ಯದುದ್ದಕ್ಕೂ ತಮ್ಮ ಎಡಗೈ ಹಸ್ತಕ್ಕೆ ಬ್ಯಾಂಡ್ ಒಂದನ್ನು ಧರಿಸಿದ್ದರ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಆಟಗಾರರು ರಕ್ಷಣೆ ಪಡೆದುಕೊಳ್ಳಲು ಬೆರಳುಗಳಿಗೆ ಈ ರೀತಿಯ ಬ್ಯಾಂಡ್ ಧರಿಸುತ್ತಾರೆ, ಆದರೆ ಈ ರೀತಿ ಹಸ್ತಕ್ಕೆ ಧರಿಸುತ್ತಿರುವುದನ್ನು ಇದೇ ಮೊದಲು ಕಾಣುತ್ತಿದ್ದೇವೆ ಎಂದಿರುವ ಸುನಿಲ್ ಗವಾಸ್ಕರ್ ಈ ರೀತಿ ಕಣಕ್ಕಿಳಿಯುವುದು ನ್ಯಾಯಯುತವಾದ ನಡೆಯೇ ಎಂದು ಪ್ರಶ್ನಿಸಿ ಅಸಮಾಧಾನ ಹೊರಹಾಕಿದ್ದಾರೆ.

ಈ ರೀತಿ ಹಸ್ತ ರಕ್ಷಕಗಳನ್ನು ಬಳಸಿದರೆ ಫೀಲ್ಡರ್‌ಗೆ ಅನುಕೂಲ

ಈ ರೀತಿ ಹಸ್ತ ರಕ್ಷಕಗಳನ್ನು ಬಳಸಿದರೆ ಫೀಲ್ಡರ್‌ಗೆ ಅನುಕೂಲ

ಇನ್ನೂ ಮುಂದುವರಿದು ಮಾತನಾಡಿರುವ ಸುನಿಲ್ ಗವಾಸ್ಕರ್ ಈ ರೀತಿ ಹಸ್ತಕ್ಕೆ ಬ್ಯಾಂಡ್ ಹಾಕಿಕೊಳ್ಳುವುದರಿಂದ ಫೀಲ್ಡರ್ಸ್ ಸುಲಭವಾಗಿ ಕ್ಯಾಚನ್ನು ಹಿಡಿಯಲು ಸಹಾಯವಾಗಲಿದೆ ಎಂದು ಬೇಸರ ಹೊರಹಾಕಿದ್ದಾರೆ.

ದ್ವಿತೀಯ ಪಂದ್ಯದಲ್ಲಿ 3 ವಿಕೆಟ್ ಪಡೆದಿದ್ದ ರೋಸ್ಟನ್ ಚೇಸ್

ದ್ವಿತೀಯ ಪಂದ್ಯದಲ್ಲಿ 3 ವಿಕೆಟ್ ಪಡೆದಿದ್ದ ರೋಸ್ಟನ್ ಚೇಸ್

ಫೆಬ್ರವರಿ 18ರ ಶುಕ್ರವಾರದಂದು ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ರೋಸ್ಟನ್ ಚೇಸ್ ಟೀಮ್ ಇಂಡಿಯಾದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರ ವಿಕೆಟ್‍ಗಳನ್ನು ಪಡೆದಿದ್ದರು. 4 ಓವರ್ ಬೌಲಿಂಗ್ ಮಾಡಿದ್ದ ರೋಸ್ಟನ್ ಚೇಸ್ 25 ರನ್ ನೀಡಿ 3 ವಿಕೆಟ್ ಪಡೆದಿದ್ದರು.

Story first published: Saturday, February 19, 2022, 16:07 [IST]
Other articles published on Feb 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X