ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಜಿಂಬಾಬ್ವೆ: ಧವನ್ ಬದಲು ಕೆಎಲ್ ರಾಹುಲ್‌ಗೆ ನಾಯಕತ್ವ ನೀಡಿದ್ದು ತಪ್ಪು ಎನ್ನುತ್ತಿವೆ ಈ 3 ಅಂಶಗಳು

IND vs ZIM: 3 reasons why Shikhar Dhawan should have lead India instead of KL Rahul

ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡು ಏಕದಿನ ಹಾಗೂ ಟಿ ಟ್ವೆಂಟಿ ಎರಡೂ ಸರಣಿಗಳನ್ನು ವಶಪಡಿಸಿಕೊಂಡಿದ್ದ ಟೀಮ್ ಇಂಡಿಯಾ ಇದೀಗ ಜಿಂಬಾಬ್ವೆ ಪ್ರವಾಸವನ್ನು ಕೈಗೊಳ್ಳಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿ ವೈಟ್ ವಾಶ್ ಸಾಧನೆ ಮಾಡಿದ್ದ ಶಿಖರ್ ಧವನ್ ಅವರನ್ನು ಮೊದಲಿಗೆ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೆ ಪ್ರಕಟವಾಗಿದ್ದ ಭಾರತ ತಂಡದ ನಾಯಕ ಎಂದು ಘೋಷಿಸಲಾಗಿತ್ತು.

ಕೋಟಿ ಕೊಟ್ರೂ ಡಕ್ಔಟ್ ಆಗಿದ್ದೀಯಾ ಎಂದು ಐಪಿಎಲ್ ತಂಡದ ಮಾಲೀಕ ಕೆನ್ನೆಗೆ ಹೊಡೆದಿದ್ರು: ರಾಸ್ ಟೇಲರ್!ಕೋಟಿ ಕೊಟ್ರೂ ಡಕ್ಔಟ್ ಆಗಿದ್ದೀಯಾ ಎಂದು ಐಪಿಎಲ್ ತಂಡದ ಮಾಲೀಕ ಕೆನ್ನೆಗೆ ಹೊಡೆದಿದ್ರು: ರಾಸ್ ಟೇಲರ್!

ಆದರೆ ನಂತರ ಮತ್ತೊಂದು ಸುದ್ದಿಯನ್ನು ನೀಡಿದ ಬಿಸಿಸಿಐ ಕೆಎಲ್ ರಾಹುಲ್ ಕಣಕ್ಕಿಳಿಯಲು ಸಂಪೂರ್ಣವಾಗಿ ಫಿಟ್ ಆಗಿದ್ದು, ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಹಾಗೂ ಈ ಹಿಂದೆ ನಾಯಕ ಎಂದು ಘೋಷಿಸಲ್ಪಟ್ಟಿದ್ದ ಶಿಖರ್ ಧವನ್ ಉಪನಾಯಕನಾಗಲಿದ್ದಾರೆ ಎಂದು ತಿಳಿಸಿತ್ತು. ಬಿಸಿಸಿಐನ ಈ ಅಂತಿಮ ಹಂತದ ನಿರ್ಣಯ ಕೆಲ ಮಾಜಿ ಕ್ರಿಕೆಟಿಗರು ಸೇರಿದಂತೆ ಕ್ರಿಕೆಟ್ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಬೇಸರ ಹಾಗೂ ಆಶ್ಚರ್ಯವನ್ನುಂಟುಮಾಡಿತ್ತು.

ನಡೆದಿರುವ ಒಟ್ಟು 13 ಏಷ್ಯಾಕಪ್ ಟೂರ್ನಿಗಳಲ್ಲಿ ಭಾರತದ ನಾಯಕರಾಗಿದ್ದವರು ಯಾರು? ಗೆದ್ದವರೆಷ್ಟು?ನಡೆದಿರುವ ಒಟ್ಟು 13 ಏಷ್ಯಾಕಪ್ ಟೂರ್ನಿಗಳಲ್ಲಿ ಭಾರತದ ನಾಯಕರಾಗಿದ್ದವರು ಯಾರು? ಗೆದ್ದವರೆಷ್ಟು?

ಹೀಗೆ ಶಿಖರ್ ಧವನ್ ಬದಲು ಕೆಎಲ್ ರಾಹುಲ್‌ಗೆ ನಾಯಕತ್ವ ನೀಡಿದ್ದು ತಪ್ಪು ಎಂದು ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೇ ಈ ಕೆಳಕಂಡ 3 ಅಂಶಗಳು ಕೂಡಾ ಸಾರಿ ಹೇಳುತ್ತಿವೆ.

ಇನ್ನೂ ಚೇತರಿಕೆ ಬೇಕಿತ್ತು

ಇನ್ನೂ ಚೇತರಿಕೆ ಬೇಕಿತ್ತು

ಇತ್ತೀಚೆಗಷ್ಟೇ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ ಟ್ವೆಂಟಿ ಎರಡೂ ಸರಣಿಗಳಿಗೂ ಅಲಭ್ಯರಾಗಿದ್ದ ಕೆಎಲ್ ರಾಹುಲ್ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದ ನಂತರ ನಡೆದ ಯಾವುದೇ ಅಂತರರಾಷ್ಟ್ರೀಯ ಪಂದ್ಯದಲ್ಲಿಯೂ ಭಾಗವಹಿಸಿರಲಿಲ್ಲ. ಐಪಿಎಲ್ ಮುಕ್ತಾಯವಾದ ನಂತರ ಗಾಯದ ಸಮಸ್ಯೆ ಹಾಗೂ ಇತ್ತೀಚಿಗಷ್ಟೆ ಕೊರೋನಾ ಸೋಂಕಿಗೆ ಒಳಗಾಗಿ ಬಳಲಿದ್ದ ಕೆಎಲ್ ರಾಹುಲ್ ಅವರನ್ನು ಮುಂಬರುವ ಏಷ್ಯಾಕಪ್ ಟೂರ್ನಿಯವರೆಗೂ ಚೇತರಿಸಿಕೊಳ್ಳಲು ಬಿಡದೇ ಈ ರೀತಿ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆ ಮಾಡಿ ನಾಯಕನ ಸ್ಥಾನವನ್ನು ನೀಡಿದ್ದು ತಪ್ಪು ನಿರ್ಣಯ ಎನ್ನಬಹುದು.

ನಾಯಕತ್ವದಿಂದ ಧವನ್ ತೆಗೆದುಹಾಕಿದ್ದು ತಪ್ಪು

ನಾಯಕತ್ವದಿಂದ ಧವನ್ ತೆಗೆದುಹಾಕಿದ್ದು ತಪ್ಪು

ಇನ್ನು ಸರಿಯಾಗಿ ಚೇತರಿಸಿಕೊಳ್ಳದ ಕೆಎಲ್ ರಾಹುಲ್ ಅವರಿಗೆ ನಾಯಕತ್ವ ನೀಡುವ ಭರದಲ್ಲಿ ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಅವರ ನೆಲದಲ್ಲಿಯೇ ವೈಟ್ ವಾಷ್ ಸಾಧನೆ ಮಾಡಿದ್ದ ಶಿಖರ್ ಧವನ್ ಅವರನ್ನು ನಾಯಕತ್ವದಿಂದ ತೆಗೆದು ಹಾಕಿದ್ದು ತಪ್ಪು ನಿರ್ಣಯ ಎನ್ನಬಹುದು. ಟೆಸ್ಟ್ ಹಾಗೂ ಟಿ ಟ್ವೆಂಟಿ ಮಾದರಿಗಳಿಂದ ಬಹುತೇಕ ದೂರ ಸರಿದಿರುವ ಶಿಖರ್ ಧವನ್ ಅವರಿಗೆ ಏಕದಿನ ಕ್ರಿಕೆಟ್‍ನಲ್ಲಿ ಮಾತ್ರ ಅವಕಾಶ ಲಭಿಸುತ್ತಿದ್ದು, ಈ ವೆಸ್ಟ್ ಇಂಡೀಸ್ ಸರಣಿ ಮಾತ್ರವಲ್ಲದೆ ಈ ಹಿಂದೆ ಕೊರೋನಾ ಸಂದರ್ಭದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗಲೂ ಧವನ್ ನಾಯಕನಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದರು. ಹೀಗೆ ತಂಡವನ್ನು ನಾಯಕನಾಗಿ ಮುನ್ನಡೆಸಲು ಅರ್ಹನಾಗಿರುವ ಶಿಖರ್ ಧವನ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಬಾರದಿತ್ತು.

ಕೆಎಲ್ ರಾಹುಲ್ ಇನ್ನೂ ಸಮರ್ಥ ನಾಯಕನಲ್ಲ

ಕೆಎಲ್ ರಾಹುಲ್ ಇನ್ನೂ ಸಮರ್ಥ ನಾಯಕನಲ್ಲ

ಇನ್ನು ಕೆಎಲ್ ರಾಹುಲ್ ನಾಯಕನಾಗಿ ಟೀಂ ಇಂಡಿಯಾವನ್ನು 3 ಏಕದಿನ ಪಂದ್ಯಗಳು ಹಾಗೂ ಏಕೈಕ ಟೆಸ್ಟ್ ಪಂದ್ಯದಲ್ಲಿ ಮುನ್ನಡೆಸಿದ್ದಾರೆ. ಹೀಗೆ ಕಡಿಮೆ ಪಂದ್ಯಗಳಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಿದ್ದರೂ ಸಹ ಈ ಎಲ್ಲಾ ಪಂದ್ಯಗಳಲ್ಲಿಯೂ ತಂಡ ಸೋಲನ್ನು ಅನುಭವಿಸಿದೆ. ಹೀಗಾಗಿ ಕೆಎಲ್ ರಾಹುಲ್ ಅಂತರರಾಷ್ಟ್ರೀಯ ಮಟ್ಟದಲ್ಲಿ ತಂಡವನ್ನು ಮುನ್ನಡೆಸಲು ಇನ್ನೂ ಸಹ ಸಮರ್ಥನಾದ ನಾಯಕನಾಗಿ ರೂಪುಗೊಂಡಿಲ್ಲ ಎಂದು ಹೇಳಬಹುದು. ಈ ಕಾರಣದಿಂದಾಗಿ ಈ ಸರಣಿಯಲ್ಲಿ ಕೆ ಎಲ್ ರಾಹುಲ್ ಉಪನಾಯಕನಾಗಿ ಶಿಖರ್ ಧವನ್ ನಾಯಕನಾಗಿದ್ದರೆ ಉತ್ತಮ ಆಯ್ಕೆಯಾಗುತ್ತಿತ್ತು ಎನ್ನಬಹುದು.

Story first published: Sunday, August 14, 2022, 16:02 [IST]
Other articles published on Aug 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X