ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ZIM 3ನೇ ಏಕದಿನ: ಚೊಚ್ಚಲ ಅಂತಾರಾಷ್ಟ್ರೀಯ ಶತಕ ಸಿಡಿಸಿದ ಶುಭ್‌ಮನ್ ಗಿಲ್

IND vs ZIM 3rd ODI: Shubman Gill Hits Maiden International Century Against Zimbabwe

ಹರಾರೆಯಲ್ಲಿ ನಡೆಯುತ್ತಿರುವ ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಮೂರಂಕಿಯನ್ನು ತಲುಪಿದ ಶುಭಮನ್ ಗಿಲ್, ತಮ್ಮ ಮೊದಲ ಅಂತಾರಾಷ್ಟ್ರೀಯ ಶತಕವನ್ನು ಗಳಿಸುವ ತಮ್ಮ ದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿದರು.

ಶುಭಮನ್ ಗಿಲ್ ಈ ಹಿಂದೆ ಟೆಸ್ಟ್ ಮತ್ತು ಏಕದಿನ ಎರಡರಲ್ಲೂ ಕೆಲವು ಸಂದರ್ಭಗಳಲ್ಲಿ 90ರ ಗಡಿಯನ್ನು ಪ್ರವೇಶಿಸಿದ್ದಾರೆ, ಆದರೆ ಶತಕವಾಗಿ ಪರಿವರ್ತಿಸಲು ಅವರ ಅದೃಷ್ಟ ಸರಿ ಇರಲಿಲ್ಲ. ಆದರೆ ಈ ಬಾರಿ ಅವರು ಮೂರಂಕಿ ಗಡಿ ದಾಟಿದರು ಮತ್ತು ತಮ್ಮ ಚೊಚ್ಚಲ ಶತಕದ ಬರ ನೀಗಿಸಿಕೊಂಡರು.

IPL 2023: ಅನಿಲ್ ಕುಂಬ್ಳೆ ನಂತರ ಪಂಜಾಬ್ ಕಿಂಗ್ಸ್ ನಾಯಕ ಹುದ್ದೆಯಿಂದ ಮಯಾಂಕ್ ಅಗರ್ವಾಲ್ ವಜಾ!IPL 2023: ಅನಿಲ್ ಕುಂಬ್ಳೆ ನಂತರ ಪಂಜಾಬ್ ಕಿಂಗ್ಸ್ ನಾಯಕ ಹುದ್ದೆಯಿಂದ ಮಯಾಂಕ್ ಅಗರ್ವಾಲ್ ವಜಾ!

ಭಾರತದ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ತಮ್ಮ ಚೊಚ್ಚಲ ಶತಕವನ್ನು ದಾಖಲಿಸಿದರು. ಸೋಮವಾರ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯುತ್ತಿರುವ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಭಾರತವು ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಿರುವಾಗಲೇ ಶುಭಮನ್ ಗಿಲ್ ಮೊತ್ತೊಂದು ತುದಿಯನ್ನು ಬಿಗಿಯಾಗಿ ಹಿಡಿದಿದ್ದಾರೆ.

ಹಲವು ಬಾರಿ ಶತಕ ತಪ್ಪಿಸಿಕೊಂಡಿದ್ದ ಶುಭಮನ್ ಗಿಲ್

ಹಲವು ಬಾರಿ ಶತಕ ತಪ್ಪಿಸಿಕೊಂಡಿದ್ದ ಶುಭಮನ್ ಗಿಲ್

ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಶುಭಮನ್ ಗಿಲ್ ತನ್ನ ಅತ್ಯುತ್ತಮ ಪ್ರದರ್ಶನದೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯ ವೇಳೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದರು.

ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದ ವೇಳೆ 22 ವರ್ಷ ವಯಸ್ಸಿನ ಶುಭಮನ್ ಗಿಲ್ ಮೂರು ಅಂಕಿಗಳ ದಾಟುವ ಪಡೆಯುವ ಸಮೀಪದಲ್ಲಿದ್ದರು. ಆದರೆ, ಮಳೆಯಿಂದಾಗಿ ಅವರು 98 ರನ್ ಗಳಿಸಿ ಅಜೇಯರಾಗಿ ಉಳಿದರು. ಇದು ಅವರ ಮೊದಲ ಶತಕದ ಆಸೆಯನ್ನು ಜೀವಂತವಾಗಿರಿಸಿತ್ತು. ಇದೇ ವೇಳೆ ಭಾರತ ತಂಡ ಮೂರನೇ ಏಕದಿನ ಪಂದ್ಯದಲ್ಲಿ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 289 ರನ್ ಗಳಿಸಿದೆ.

ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್‌ ಜೊತೆಯಾಟ

ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್‌ ಜೊತೆಯಾಟ

ಆದರೆ, ಜಿಂಬಾಬ್ವೆ ವಿರುದ್ಧ ಸೋಮವಾರ ಭಾರತೀಯ ಯುವ ತಾರೆ ಮತ್ತೆ ಅವಕಾಶವನ್ನು ಕೈಚೆಲ್ಲಲಿಲ್ಲ. ಉತ್ತಮ ಲಯದಲ್ಲಿ ಕಾಣುತ್ತಿದ್ದ ಶುಭಮನ್ ಗಿಲ್, ಭಾರತ ತಂಡ 15 ಓವರ್‌ಗಳಲ್ಲಿ ಸ್ಕೋರ್ 63 ರನ್ ಗಳಿಸಿದ್ದಾಗ ನಾಯಕ ಕೆಎಲ್ ರಾಹುಲ್ ಔಟ್ ಆದ ನಂತರ ಬ್ಯಾಟಿಂಗ್‌ಗೆ ಬಂದರು. ಪ್ರವಾಸಿ ತಂಡ ನಂತರ ಶಿಖರ್ ಧವನ್ ಅವರ ವಿಕೆಟ್ ಕಳೆದುಕೊಂಡಿತು ಮತ್ತು ಎರಡು ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿತ್ತು.

ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್‌ ವಿಶ್ವಾಸಾರ್ಹ ಜೊತೆಯಾಟವನ್ನು ಕಂಡುಕೊಂಡರು. ಇಬ್ಬರೂ ಕಠಿಣ ಅವಧಿಯಲ್ಲಿ ತಂಡದ ಮೊತ್ತವನ್ನು ಏರಿಸಲು ಪ್ರಯತ್ನಪಟ್ಟರು. ಇದೇ ವೇಳೆ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಜಿಂಬಾಬ್ವೆ ಬೌಲಿಂಗ್‌ನ ಮೇಲೆ ಪ್ರತಿದಾಳಿ ನಡೆಸಿದರು. ಇಶಾನ್ ಕಿಶನ್ ರನ್ ಔಟ್ ಆಗುವ ಮೊದಲು ಉತ್ತಮ ಅರ್ಧಶತಕ ಗಳಿಸಿದರು.

82 ಎಸೆತಗಳಲ್ಲಿ ಶತಕದ ಗಡಿ ದಾಟಿದ ಶುಭಮನ್ ಗಿಲ್

82 ಎಸೆತಗಳಲ್ಲಿ ಶತಕದ ಗಡಿ ದಾಟಿದ ಶುಭಮನ್ ಗಿಲ್

22ರ ಹರೆಯದ ಶುಭಮನ್ ಗಿಲ್ ಅವರು ಎದುರಾಳಿ ಬೌಲರ್‌ಗಳಿಗೆ ಬೌಂಡರಿ ಗಳಿಸಿ ರನ್ ರೇಟ್ ಅನ್ನು ಹೆಚ್ಚಿಸಲು ಸ್ಫೋಟಕ ಆಟದಲ್ಲಿ ಕಾಣಿಸಿಕೊಂಡರು. ಗಿಲ್ ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿಗಳನ್ನು ಒಳಗೊಂಡಿತ್ತು ಮತ್ತು ಅವರು ಕೇವಲ 82 ಎಸೆತಗಳಲ್ಲಿ ಶತಕದ ಗಡಿಯನ್ನು ತಲುಪಿದರು. ಅಂತಿಮವಾಗಿ 97 ಎಸೆತಗಳಲ್ಲಿ 130 ರನ್ ಗಳಿಸಿ ಔಟಾದರು.

ಆಗಸ್ಟ್ 18ರಂದು ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅವರು ಅಜೇಯ 82 ರನ್ ಗಳಿಸಿದ್ದರಿಂದ ಬಲಗೈ ಬ್ಯಾಟರ್‌ಗೆ ಜಿಂಬಾಬ್ವೆ ಸರಣಿಯು ಯಶಸ್ವಿಯಾಗಿದೆ. ಎರಡನೇ ಪಂದ್ಯದಲ್ಲಿ ನಾಯಕ ಕೆಎಲ್ ರಾಹುಲ್‌ಗೆ ತನ್ನ ಆರಂಭಿಕ ಸ್ಥಾನವನ್ನು ಬಿಟ್ಟುಕೊಟ್ಟರು ಮತ್ತು ಅವರು ತಂಡಕ್ಕೆ ನಂ.3 ಸ್ಥಾನಕ್ಕೆ ಬಂದರು. ಅವರು ಆ ಪಂದ್ಯದಲ್ಲಿ 33 ರನ್ ಗಳಿಸಿದರು.

ಭಾರತೀಯ ಏಕದಿನ ತಂಡದಲ್ಲಿ ಎರಡು ಪ್ರಮುಖ ಬ್ಯಾಟಿಂಗ್ ಸ್ಲಾಟ್‌ಗಳಿಗೆ ತನ್ನನ್ನು ತಾನು ಪ್ರತಿಸ್ಪರ್ಧಿಯಾಗಿ ಇರಿಸಿಕೊಂಡಿರುವ ಕಾರಣ, ಸೋಮವಾರದ ಅವರ ಚೊಚ್ಚಲ ಶತಕವು ಭಾರತೀಯ ತಾರೆಗೆ ಖಂಡಿತವಾಗಿಯೂ ತಂಡದಲ್ಲಿ ಭದ್ರ ಸ್ಥಾನ ಒದಗಿಸುವ ಸಾಧ್ಯತೆ ಇದೆ.

Story first published: Monday, August 22, 2022, 16:45 [IST]
Other articles published on Aug 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X