ಭಾರತ vs ಜಿಂಬಾಬ್ವೆ: ಇತ್ತಂಡಗಳ ನಡುವಿನ ಏಕದಿನ ಮುಖಾಮುಖಿಯಲ್ಲಿ ಭಾರತ ಎಷ್ಟು ಪಂದ್ಯ ಗೆದ್ದಿದೆ?

ಇತ್ತೀಚೆಗಷ್ಟೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡು ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ ಟ್ವೆಂಟಿ ಸರಣಿಗಳಲ್ಲಿ ಕೆರೆಬಿಯನ್ನರ ವಿರುದ್ಧ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಎರಡೂ ಸರಣಿಗಳನ್ನೂ ವಶಪಡಿಸಿಕೊಂಡು ಇದೀಗ ಜಿಂಬಾಬ್ವೆ ಪ್ರವಾಸವನ್ನು ಕೈಗೊಂಡಿದೆ. ಇನ್ನು ಟೀಮ್ ಇಂಡಿಯಾದ ಪೂರ್ಣಾವಧಿ ನಾಯಕ ರೋಹಿತ್ ಶರ್ಮಾ ವಿಶ್ರಾಂತಿಯ ಕಾರಣದಿಂದಾಗಿ ಈ ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದಿದ್ದು, ಭಾರತ ತಂಡದ ಪೂರ್ಣಾವಧಿ ಉಪನಾಯಕ ಕೆಎಲ್ ರಾಹುಲ್ ತಂಡಕ್ಕೆ ನಾಯಕನಾಗಿ ಹಲವು ತಿಂಗಳ ನಂತರ ಮರಳಿ ತಂಡ ಸೇರಿದ್ದಾರೆ.

Breaking News: ಬಿಸಿಸಿಐ ಮಾಜಿ ಕಾರ್ಯದರ್ಶಿ ಅಮಿತಾಭ್ ಚೌಧರಿ ನಿಧನBreaking News: ಬಿಸಿಸಿಐ ಮಾಜಿ ಕಾರ್ಯದರ್ಶಿ ಅಮಿತಾಭ್ ಚೌಧರಿ ನಿಧನ

ಇನ್ನು ಭಾರತ ಮತ್ತು ಜಿಂಬಾಬ್ವೆ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಆಯೋಜನೆಯಾಗಿದ್ದು, ಆಗಸ್ಟ್ 18ರಂದು ಆರಂಭವಾಗಿ 22ಕ್ಕೆ ಮುಕ್ತಾಯಗೊಳ್ಳಲಿದೆ. ಈ ಸರಣಿಯ ಎಲ್ಲಾ ಪಂದ್ಯಗಳೂ ಸಹ ಜಿಂಬಾಬ್ವೆ ರಾಜಧಾನಿ ಹರಾರೆಯ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿಯೇ ನಡೆಯಲಿದ್ದು, ಈಗಾಗಲೇ ಜಿಂಬಾಬ್ವೆಯಲ್ಲಿರುವ ಕೆ ಎಲ್ ರಾಹುಲ್ ಬಳಗ ಸರಣಿಗಾಗಿ ಸಿದ್ಧತೆ ನಡೆಸಿಕೊಳ್ಳುತ್ತಿದ್ದು, ಆಟಗಾರರು ಮುಂಬರುವ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಸ್ಥಾನ ಪಡೆದುಕೊಳ್ಳಲು ಉತ್ತಮ ಪ್ರದರ್ಶನ ನೀಡುವತ್ತ ಚಿತ್ತ ನೆಟ್ಟಿದ್ದಾರೆ. ಅತ್ತ ಸರಣಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿರುವ ಜಿಂಬಾಬ್ವೆ ಭಾರತಕ್ಕೆ ಸವಾಲೊಡ್ಡಿದೆ.

ಪಾಕ್ ವಿರುದ್ಧ ರೋಹಿತ್ ಗಳಿಸಿರುವ ಟಿ20 ರನ್ ಎಷ್ಟು? 30 ರನ್ ದಾಟಲಾಗದೇ ಪರದಾಟ!ಪಾಕ್ ವಿರುದ್ಧ ರೋಹಿತ್ ಗಳಿಸಿರುವ ಟಿ20 ರನ್ ಎಷ್ಟು? 30 ರನ್ ದಾಟಲಾಗದೇ ಪರದಾಟ!

ಹೀಗೆ ಗಮನ ಸೆಳೆದಿರುವ ಈ ಏಕದಿನ ಸರಣಿಗೂ ಮುನ್ನ ಭಾರತ ಮತ್ತು ಜಿಂಬಾಬ್ವೆ ತಂಡಗಳು ಇಲ್ಲಿಯವರೆಗೂ ಒಟ್ಟು ಎಷ್ಟು ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ ಹಾಗೂ ಈ ಪೈಕಿ ಯಾವ ತಂಡ ಎಷ್ಟು ಪಂದ್ಯಗಳಲ್ಲಿ ಗೆದ್ದಿದೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಏಕದಿನ ಮುಖಾಮುಖಿ

ಏಕದಿನ ಮುಖಾಮುಖಿ

ಭಾರತ ಮತ್ತು ಜಿಂಬಾಬ್ವೆ ತಂಡಗಳು ಇಲ್ಲಿಯವರೆಗೂ ಒಟ್ಟು 63 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಟೀಮ್ ಇಂಡಿಯಾ 51 ಪಂದ್ಯಗಳಲ್ಲಿ ಗೆದ್ದಿದ್ದರೆ, ಜಿಂಬಾಬ್ವೆ 10 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಉಳಿದ 2 ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೇ ಡ್ರಾನಲ್ಲಿ ಅಂತ್ಯಗೊಂಡಿವೆ. ಈ ಮೂಲಕ ಭಾರತ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಶೇ 80.95ರಷ್ಟು ಪಂದ್ಯಗಳಲ್ಲಿ ಗೆದ್ದು, ಸಂಪೂರ್ಣ ಹಿಡಿತ ಸಾಧಿಸಿದೆ.

ಸರಣಿಯ ವೇಳಾಪಟ್ಟಿ

ಸರಣಿಯ ವೇಳಾಪಟ್ಟಿ

ಆಗಸ್ಟ್ 18- ಜಿಂಬಾಬ್ವೆ vs ಭಾರತ, 1ನೇ ಏಕದಿನ - ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ - 12:45 PM

ಆಗಸ್ಟ್ 20- ಜಿಂಬಾಬ್ವೆ vs ಭಾರತ, 2ನೇ ಏಕದಿನ - ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ - 12:45 PM

ಆಗಸ್ಟ್ 22- ಜಿಂಬಾಬ್ವೆ vs ಭಾರತ, 3ನೇ ಏಕದಿನ - ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ - 12:45 PM

ಸ್ಕ್ವಾಡ್‌ಗಳು

ಸ್ಕ್ವಾಡ್‌ಗಳು

ಭಾರತ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ , ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಶಹಬಾಜ್ ಅಹ್ಮದ್.

ಜಿಂಬಾಬ್ವೆ: ರೆಗಿಸ್ ಚಕಬ್ವಾ (ಸಿ), ತನಕಾ ಚಿವಂಗಾ, ಬ್ರಾಡ್ಲಿ ಇವಾನ್ಸ್, ಲ್ಯೂಕ್ ಜೊಂಗ್ವೆ, ರಿಯಾನ್ ಬರ್ಲ್, ಇನೊಸೆಂಟ್ ಕೈಯಾ, ಕೈಟಾನೊ ತಕುಡ್ಜ್ವಾನಾಶೆ, ಕ್ಲೈವ್ ಮದಂಡೆ, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಾನಿ, ಜಾನ್ ಮಸಾರಾ, ಟೋನಿ ಮುನ್ಯೊಂಗಾ, ರಿಚರ್ಡ್ ನ್ಗರವ, ಸಿಕಂಟೊನ್ಯರವ, ವಿಕ್ಟೋರ್ ನ್ಗರವಾ, , ಡೊನಾಲ್ಡ್ ಟಿರಿಪೊನೊ

For Quick Alerts
ALLOW NOTIFICATIONS
For Daily Alerts
Read more about: india mykhel original zimbabwe
Story first published: Tuesday, August 16, 2022, 18:15 [IST]
Other articles published on Aug 16, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X