ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ZIM: ರಾಷ್ಟ್ರಗೀತೆ ಸಂದರ್ಭದಲ್ಲಿ ರಾಹುಲ್ ಮೈದಾನದಲ್ಲಿ ನಡೆದುಕೊಂಡ ರೀತಿ; ವಿಡಿಯೋ ವೈರಲ್

IND vs ZIM: KL Rahul took out chewing gum from his mouth before National Anthem and paid respect

ಸದ್ಯ ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿ ಬೀಡುಬಿಟ್ಟಿರುವ ಕೆಎಲ್ ರಾಹುಲ್ ನಾಯಕತ್ವದ ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ನಿರತವಾಗಿದೆ. ಈ ಸರಣಿಯ ಪ್ರಥಮ ಪಂದ್ಯದ ನಿನ್ನೆ ( ಆಗಸ್ಟ್ 18 ) ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದು, ಪಂದ್ಯದಲ್ಲಿ ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧ 10 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಮಹಾರಾಜ ಟ್ರೋಫಿ: ಪಡಿಕ್ಕಲ್ ಸುನಾಮಿ; ಮಯಾಂಕ್ ಪಡೆಗೆ ಸೋಲುಣಿಸಿದ ಗುಲ್ಬರ್ಗಾ!ಮಹಾರಾಜ ಟ್ರೋಫಿ: ಪಡಿಕ್ಕಲ್ ಸುನಾಮಿ; ಮಯಾಂಕ್ ಪಡೆಗೆ ಸೋಲುಣಿಸಿದ ಗುಲ್ಬರ್ಗಾ!

ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯವಾದ ನಂತರ ಯಾವುದೇ ಅಂತರರಾಷ್ಟ್ರೀಯ ಪಂದ್ಯದಲ್ಲಿಯೂ ಕೂಡ ಕಣಕ್ಕಿಳಿಯದೇ ಇದ್ದ ಕೆಎಲ್ ರಾಹುಲ್ ಇದೀಗ ಜಿಂಬಾಬ್ವೆ ಸರಣಿಯಲ್ಲಿ ಕಣಕ್ಕಿಳಿಯುವುದರ ಮೂಲಕ ಮರಳಿ ತಂಡ ಸೇರಿದ್ದು, ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಚಾಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕು?: ನನ್ನ ಹೊಸ ಜೀವನ ಶುರು ಎಂದ ಚಾಹಲ್!ಚಾಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕು?: ನನ್ನ ಹೊಸ ಜೀವನ ಶುರು ಎಂದ ಚಾಹಲ್!

ಇನ್ನು ಈ ಪಂದ್ಯ ಆರಂಭವಾಗುವ ಮುನ್ನ ಉಭಯ ತಂಡಗಳ ರಾಷ್ಟ್ರಗೀತೆಗಳನ್ನು ಹಾಡಿ ಗೌರವ ಸಲ್ಲಿಸುವ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್ ಭಾರತದ ರಾಷ್ಟ್ರಗೀತೆ ಹಾಡುವುದಕ್ಕೂ ಮುನ್ನ ನಡೆದುಕೊಂಡ ರೀತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಬೃಹತ್ ಮೆಚ್ಚುಗೆಗೆ ಪಾತ್ರವಾಗಿದೆ.

ಚೂಯಿಂಗ್ ಗಮ್ ಕಿತ್ತೆಸೆದ ರಾಹುಲ್

ಚೂಯಿಂಗ್ ಗಮ್ ಕಿತ್ತೆಸೆದ ರಾಹುಲ್

ರಾಷ್ಟ್ರಗೀತೆಯನ್ನು ಹಾಡಲು ಮೈದಾನಕ್ಕೆ ಇಳಿದಿದ್ದ ಕೆಎಲ್ ರಾಹುಲ್ ಚ್ಯೂಯಿಂಗ್ ಗಮ್ ಜಗಿಯುತ್ತಿದ್ದರು. ಇನ್ನೇನು ಕೆಲವೇ ಕ್ಷಣಗಳಲ್ಲಿ ರಾಷ್ಟ್ರಗೀತೆ ಆರಂಭವಾಗಲಿದೆ ಎಂಬುದನ್ನು ಅರಿತ ಕೂಡಲೇ ಕೆಎಲ್ ರಾಹುಲ್ ತಮ್ಮ ಬಾಯಲ್ಲಿದ್ದ ಚೂಯಿಂಗ್ ಗಮ್ ಅನ್ನು ಕಿತ್ತೆಸೆಯುವುದರ ಮೂಲಕ ರಾಷ್ಟ್ರಗೀತೆಗೆ ನೀಡಬೇಕಾದ ಗೌರವವನ್ನು ಸಲ್ಲಿಸಿದ್ದಾರೆ. ಸದ್ಯ ಕೆ ಎಲ್ ರಾಹುಲ್ ಅವರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅಂತರರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಆಟಗಾರನೂ ಕೂಡ ಕೆಎಲ್ ರಾಹುಲ್ ಅವರ ರೀತಿ ರಾಷ್ಟ್ರಭಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕೊಂಡಾಡುತ್ತಿದ್ದಾರೆ.

ಪಂದ್ಯ ಗೆದ್ದ ಕೆ ಎಲ್ ರಾಹುಲ್ ಪಡೆ

ಪಂದ್ಯ ಗೆದ್ದ ಕೆ ಎಲ್ ರಾಹುಲ್ ಪಡೆ

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಫೀಲ್ಡಿಂಗ್ ಆಯ್ದುಕೊಂಡು ಜಿಂಬಾಬ್ವೆ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 40.3 ಓವರ್‌ಗಳಲ್ಲಿ 189 ರನ್ ಕಲೆಹಾಕಿ ಆಲ್ ಔಟ್ ಆಗಿ ರಾಹುಲ್ ಪಡೆಗೆ 190 ರನ್‌ಗಳ ಸಾಮಾನ್ಯ ಗುರಿಯನ್ನು ನೀಡಿತು. ಇತ್ತ ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಶಿಖರ್ ಧವನ್ ಹಾಗೂ ಶುಬ್ ಮನ್ ಗಿಲ್ ಅವರ ಅಜೇಯ ಜೊತೆಯಾಟದ ನೆರವಿನಿಂದ 30.5 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 192 ರನ್ ಕಲೆಹಾಕಿ ಸುಲಭ ಜಯ ಸಾಧಿಸಿತು. ಈ ಮೂಲಕ ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧ ಸತತ 13ನೇ ಏಕದಿನ ಪಂದ್ಯವನ್ನು ಗೆದ್ದು ನಿರ್ದಿಷ್ಟ ತಂಡವೊಂದರ ವಿರುದ್ಧ ಸತತವಾಗಿ ಅತಿ ಹೆಚ್ಚು ಏಕದಿನ ಪಂದ್ಯ ಗೆದ್ದ ದಾಖಲೆ ಬರೆಯಿತು. ಅಷ್ಟೇ ಅಲ್ಲದೆ ಕೆಎಲ್ ರಾಹುಲ್ ನಾಯಕನಾಗಿ ಗೆದ್ದ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯ ಕೂಡ ಇದಾಗಿದೆ.

ಆಡುವ ಬಳಗ

ಆಡುವ ಬಳಗ

ಭಾರತ: ಶಿಖರ್ ಧವನ್, ಶುಭಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್(ನಾಯಕ), ದೀಪಕ್ ಹೂಡಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ದೀಪಕ್ ಚಾಹರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್

ಬೆಂಚ್‌: ರಾಹುಲ್ ತ್ರಿಪಾಠಿ, ಶಾರ್ದೂಲ್ ಠಾಕೂರ್, ಅವೇಶ್‌ ಖಾನ್, ಶಬಾಜ್ ನದೀಮ್, ರುತುರಾಜ್ ಗಾಯಕ್ವಾಡ್‌

ಜಿಂಬಾಬ್ವೆ: ತಡಿವಾನಾಶೆ ಮರುಮನಿ, ಇನೋಸೆಂಟ್ ಕೈಯಾ, ಸೀನ್ ವಿಲಿಯಮ್ಸ್, ವೆಸ್ಲಿ ಮಾಧೆವೆರೆ, ಸಿಕಂದರ್ ರಾಜಾ, ರೆಗಿಸ್ ಚಕಬ್ವಾ(ನಾಯಕ ಮತ್ತು ವಿಕೆಟ್ ಕೀಪರ್), ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯುಚಿ, ರಿಚರ್ಡ್ ನ್ಗರವ

ಬೆಂಚ್ : ತಕುಡ್ಜ್ವಾನಾಶೆ ಕೈಟಾನೊ, ಮಿಲ್ಟನ್ ಶುಂಬಾ, ಡೊನಾಲ್ಡ್ ತಿರಿಪಾನೊ, ಕ್ಲೈವ್ ಮದಂಡೆ, ಜಾನ್ ಮಸಾರಾ, ಟೋನಿ ಮುನ್ಯೊಂಗಾ, ತನಕಾ ಚಿವಂಗಾ

Story first published: Friday, August 19, 2022, 11:13 [IST]
Other articles published on Aug 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X