ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ZIM: ಮೊದಲ ಪಂದ್ಯದಲ್ಲಿ ನಾಯಕ ಕೆಎಲ್ ರಾಹುಲ್‌ಗಿದೆ ಒಂದು ಸುವರ್ಣಾವಕಾಶ!

IND vs ZIM ODI Series: KL Rahul Has A Opportunity To Register His Maiden Win As Team India Captain

ಗುರುವಾರ, ಆಗಸ್ಟ್ 18ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮತ್ತು ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗಲಿವೆ.

ಈ ಹಿಂದೆ ಶಿಖರ್ ಧವನ್‌ಗೆ ನಾಯಕತ್ವ ನೀಡಲಾಗಿತ್ತು, ಆದರೆ ಕನ್ನಡಿಗ ಕೆಎಲ್ ರಾಹುಲ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದರಿಂದ ಅವರಿಗೆ ನಾಯಕತ್ವ ನೀಡಿ, ಶಿಖರ್ ಧವನ್ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ.

IND vs ZIM: ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಧವನ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಉತ್ತಪ್ಪIND vs ZIM: ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಧವನ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಉತ್ತಪ್ಪ

ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತವನ್ನು ಮುನ್ನಡೆಸಲಿರುವ ಕೆಎಲ್ ರಾಹುಲ್ ಇಲ್ಲಿಯವರೆಗೆ ಒಂದು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಆದರೆ ಯಾವುದೇ ಯಶಸ್ಸು ಕಂಡಿಲ್ಲ. ಹೀಗಾಗಿ ಅವರು ಭಾರತೀಯ ನಾಯಕನಾಗಿ ತಮ್ಮ ಗೆಲುವಿನ ಖಾತೆಯನ್ನು ತೆರೆಯುವ ಸುವರ್ಣ ಅವಕಾಶವಿದೆ.

ಬಾಂಗ್ಲಾದೇಶ ಸೋಲಿಸಿ ಆತ್ಮವಿಶ್ವಾಸದಿಂದ ತುಂಬಿರುವ ಜಿಂಬಾಬ್ವೆ

ಬಾಂಗ್ಲಾದೇಶ ಸೋಲಿಸಿ ಆತ್ಮವಿಶ್ವಾಸದಿಂದ ತುಂಬಿರುವ ಜಿಂಬಾಬ್ವೆ

ಇನ್ನು ರೆಗಿಸ್ ಚಕಬ್ವಾ ನಾಯಕತ್ವದ ಜಿಂಬಾಬ್ವೆ ತಂಡ ಏಕದಿನ ಮತ್ತು ಟಿ20 ಸರಣಿಯಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ ನಂತರ ಆತ್ಮವಿಶ್ವಾಸದಿಂದ ತುಂಬಿದೆ. ಸಿಕಂದರ್ ರಾಝಾ ಅವರು ಎರಡೂ ಸರಣಿಯಲ್ಲಿ ಅಪ್ರತಿಮ ಬ್ಯಾಟ್ಸ್‌ಮನ್ ಆಗಿ ಮೂಡಿಬಂದಿದ್ದು, ಇನ್ನೋಸೆಂಟ್ ಕೈಯಾ ಮತ್ತು ರಿಯಾನ್ ಬರ್ಲ್ ಅವರಂತಹವರು ಕೂಡ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಲು ಸಫಲರಾದರು.

ಅವರ ಬ್ಯಾಟಿಂಗ್‌ನ ಹೊರತಾಗಿ, ಸಿಕಂದರ್ ರಾಝಾ ಅವರು ತಮ್ಮ ಕೈಯಲ್ಲಿದ್ದ ಚೆಂಡಿನ ಮೂಲಕ ಮೂರು ವಿಕೆಟ್‌ಗಳ ಸಾಧನೆಯೊಂದಿಗೆ ತಮ್ಮ ಪರಾಕ್ರಮವನ್ನು ತೋರಿಸಿದರು. ಆದಾಗ್ಯೂ, ಬಲಿಷ್ಠ ಭಾರತೀಯ ತಂಡವನ್ನು ಎದುರಿಸುವುದು ಅವರಿಗೆ ಹುಮ್ಮಸ್ಸು ನೀಡಿದೆ. ಹರಾರೆಯಲ್ಲಿ, ಜಿಂಬಾಬ್ವೆ ತಂಡವು ಎದುರಿಸಿದ 16 ಏಕದಿನ ಪಂದ್ಯಗಳಲ್ಲಿ ಬಲಿಷ್ಠ ಭಾರತವನ್ನು ಎರಡು ಬಾರಿ ಮಾತ್ರ ಸೋಲಿಸಿದೆ.

ಆರು ತಿಂಗಳ ನಂತರ ಕೆಎಲ್ ರಾಹುಲ್ ಭಾರತ ತಂಡದಲ್ಲಿ

ಆರು ತಿಂಗಳ ನಂತರ ಕೆಎಲ್ ರಾಹುಲ್ ಭಾರತ ತಂಡದಲ್ಲಿ

ಇನ್ನು ಭಾರತಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಸುಮಾರು ಆರು ತಿಂಗಳ ನಂತರ ಕೆಎಲ್ ರಾಹುಲ್ ತಂಡದಲ್ಲಿ ತನ್ನ ಸ್ಥಾನವನ್ನು ಮರಳಿ ಪಡೆದಿದ್ದಾರೆ ಮತ್ತು ನಾಯಕನಾಗಿ ಮರಳಿ ಭಾರಿ ಪ್ರೋತ್ಸಾಹ ಪಡೆದರು. ಕೆಎಲ್ ರಾಹುಲ್ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು ಮತ್ತು ಶಿಖರ್ ಧವನ್ ಬದಲಿಗೆ ಅವರನ್ನು ನಾಯಕನನ್ನಾಗಿ ಮಾಡಿದರು. ಶಿಖರ್ ಧವನ್ ಅವರನ್ನು ಏಕದಿನ ಸರಣಿಗೆ ಉಪನಾಯಕನಾಗಿ ಹೆಸರಿಸಲಾಯಿತು.

ಇನ್ನು ಶುಭಮನ್ ಗಿಲ್ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಆರಂಭಿಕನಾಗಿ ಪ್ರಮುಖ ರನ್ ಗಳಿಸಿದ ಆಟಗಾರರಾದರು ಮತ್ತು ಸರಣಿ ಶ್ರೇಷ್ಠ ಆಟಗಾರನಾದರು. ಆದರೆ, ಕೆಎಲ್ ರಾಹುಲ್ ವಾಪಸ್ಸಾದ ನಂತರ, ಭಾರತ ತಂಡದಲ್ಲಿ ಶುಭಮನ್ ಗಿಲ್ ಸ್ಥಾನ ಮತ್ತು ಕ್ರಮಾಂಕವನ್ನು ನೋಡಬೇಕಾಗಿದೆ.

ಯುಎಇನಲ್ಲಿ ನಡೆಯಲಿರುವ ಏಷ್ಯಾ ಕಪ್‌

ಯುಎಇನಲ್ಲಿ ನಡೆಯಲಿರುವ ಏಷ್ಯಾ ಕಪ್‌

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ನಡೆಯಲಿರುವ ಏಷ್ಯಾ ಕಪ್‌ನ ಆವೃತ್ತಿಯಲ್ಲಿ ಪಾಲ್ಗೊಳ್ಳಲಿರುವ ಭಾರತವು ತಮ್ಮ ಹಲವಾರು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದೆ. ಆದರೆ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕೆ ತಮ್ಮ ಬೆಂಚ್ ಬಲವನ್ನು ಪರೀಕ್ಷಿಸಲು ಇದು ಒಂದು ಮತ್ತೊಂದು ಅವಕಾಶವಾಗಿದೆ.

ಹೆಡ್ ಟು ಹೆಡ್
ಒಟ್ಟಾರೆ ಆಡಿದ್ದು- 63 ಪಂದ್ಯ, ಭಾರತದ ಗೆಲುವು- 51, ಸೋಲು- 10, ಟೈಡ್- 2

ಜಿಂಬಾಬ್ವೆಯಲ್ಲಿ ಆಡಿದ್ದು- 23 ಪಂದ್ಯ, ಭಾರತದ ಗೆಲುವು 19, ಸೋಲು 4, ಫಲಿತಾಂಶವಿಲ್ಲ- 0

Ravi Shastri ಅವಧಿಯಲ್ಲಿ ದಿನೇಶ್ ಕಾರ್ತಿಕ್ ಭಯಪಟ್ಟಿದ್ದು ಯಾಕೆ? | *Cricket | OneIndia Kannada
ಭಾರತ ಮತ್ತು ಜಿಂಬಾಬ್ವೆ ತಂಡಗಳ ಆಡುವ 11ರ ಬಳಗ

ಭಾರತ ಮತ್ತು ಜಿಂಬಾಬ್ವೆ ತಂಡಗಳ ಆಡುವ 11ರ ಬಳಗ

ಜಿಂಬಾಬ್ವೆ: ತಡಿವಾನಾಶೆ ಮರುಮನಿ, ರೆಗಿಸ್ ಚಕಬ್ವಾ (ನಾಯಕ), ಇನೊಸೆಂಟ್ ಕೈಯಾ, ವೆಸ್ಲಿ ಮಾಧೆವೆರೆ, ಸಿಕಂದರ್ ರಜಾ, ಕ್ಲೈವ್ ಮದಂಡೆ (ವಿಕೆಟ್ ಕೀಪರ್), ಟೋನಿ ಮುನ್ಯೊಂಗಾ, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯಾಯುಚಿ, ರಿಚರ್ಡ್ ಗರವ.

ಭಾರತ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ಶುಭಮನ್ ಗಿಲ್, ಇಶಾನ್ ಕಿಶನ್, ರಾಹುಲ್ ತ್ರಿಪಾಠಿ/ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ಅಕ್ಷರ್ ಪಟೇಲ್, ದೀಪಕ್ ಚಾಹರ್, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ಅವೇಶ್ ಖಾನ್

Story first published: Wednesday, August 17, 2022, 22:42 [IST]
Other articles published on Aug 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X