ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ZIM: 2023ರ ವಿಶ್ವಕಪ್‌ಗೆ ಈತ ಬ್ಯಾಕ್ಅಪ್ ಓಪನರ್ ಆಗಬಲ್ಲ; ಮಾಜಿ ಕ್ರಿಕೆಟಿಗ

IND vs ZIM: Shubman Gill Can Be Backup Opener For 2023 World Cup Says Former Cricketer Saba Karim

ಕೆಎಲ್ ರಾಹುಲ್ ನಾಯಕತ್ವದ ಟೀಂ ಇಂಡಿಯಾ ಶನಿವಾರ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಮೈದಾನಕ್ಕಿಳಿಯಲಿದ್ದು, ತಮ್ಮ ಗೆಲುವಿನ ಸರಮಾಲೆಯನ್ನು ಮುಂದುವರಿಸಲು ಎದುರು ನೋಡುತ್ತಿದೆ.

ಹರಾರೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 190 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಇನ್ನೂ 115 ಎಸೆತಗಳು ಬಾಕಿ ಇರುವಂತೆಯೇ ಹತ್ತು ವಿಕೆಟ್‌ಗಳ ಅಂತರಿದಿಂದ ನಿರಾಯಾಸದಾಯಕವಾಗಿ ಗೆಲುವು ಸಾಧಿಸಿತು ಮತ್ತು ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.

ಏಷ್ಯಾ ಕಪ್, ಟಿ20 ವಿಶ್ವಕಪ್‌ಗೆ ಬಾಂಗ್ಲಾದೇಶದ ಕೋಚ್ ಆಗಿ ಭಾರತದ ಮಾಜಿ ಆಲ್‌ರೌಂಡರ್ ನೇಮಕಏಷ್ಯಾ ಕಪ್, ಟಿ20 ವಿಶ್ವಕಪ್‌ಗೆ ಬಾಂಗ್ಲಾದೇಶದ ಕೋಚ್ ಆಗಿ ಭಾರತದ ಮಾಜಿ ಆಲ್‌ರೌಂಡರ್ ನೇಮಕ

ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶುಭಮನ್ ಗಿಲ್ ಮತ್ತು ಶಿಖರ್ ಧವನ್ ಕ್ರಮವಾಗಿ 82 ಮತ್ತು 81 ರನ್ ಗಳಿಸಿ ಪ್ರವಾಸಿ ತಂಡಕ್ಕೆ ಗೆಲುವಿನ ಗಡಿ ದಾಟಿಸಲು ನೆರವಾದರು. ಇದಕ್ಕೂ ಮೊದಲು ದೀಪಕ್ ಚಹಾರ್, ಪ್ರಸಿದ್ಧ್ ಕೃಷ್ಣ ಮತ್ತು ಅಕ್ಷರ್ ಪಟೇಲ್ ತಲಾ ಮೂರು ವಿಕೆಟ್‌ಗಳೊಂದಿಗೆ ಅತಿಥೇಯ ಜಿಂಬಾಬ್ವೆಯನ್ನು 41 ಓವರ್‌ಗಳಲ್ಲಿ 189 ರನ್‌ಗಳಿಗೆ ಕಟ್ಟಿಹಾಕಿದ್ದರು.

ವೆಸ್ಟ್ ಇಂಡೀಸ್ ವಿರುದ್ಧ 205 ರನ್ ಗಳಿಸಿದ ಗಿಲ್

ವೆಸ್ಟ್ ಇಂಡೀಸ್ ವಿರುದ್ಧ 205 ರನ್ ಗಳಿಸಿದ ಗಿಲ್

"2023ರ ಐಸಿಸಿ ವಿಶ್ವಕಪ್ ತಯಾರಿಯಲ್ಲಿ ಭಾರತ ತಂಡದ ಬ್ಯಾಕ್‌ಅಪ್ ಓಪನರ್ ಪಾತ್ರವನ್ನು ಶುಭ್‌ಮನ್ ಗಿಲ್ ನಿರ್ವಹಿಸಬಹುದು. ಆದರೆ ಸ್ಟ್ಯಾಂಡ್-ಇನ್ ನಾಯಕ ಕೆಎಲ್ ರಾಹುಲ್ ನಂ. 4ರಲ್ಲಿ ಬ್ಯಾಟಿಂಗ್ ಮಾಡಬೇಕು," ಎಂದು ಮಾಜಿ ಭಾರತೀಯ ಕ್ರಿಕೆಟ್ ಆಯ್ಕೆಗಾರ ಸಬಾ ಕರೀಮ್ ಲೆಕ್ಕ ಹಾಕಿದ್ದಾರೆ. ಶುಭ್‌ಮನ್ ಗಿಲ್ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಬಹುದಾದ ಆಯಾಮದ ಆಟಗಾರ ಎಂದು ಹೇಳಿದ್ದಾರೆ.

ಈ ಹಿಂದಿನ ವೆಸ್ಟ್ ಇಂಡೀಸ್ ವಿರುದ್ಧದ 3 ಏಕದಿನ ಪಂದ್ಯಗಳಲ್ಲಿ ಶುಭ್‌ಮನ್ ಗಿಲ್ 205 ರನ್ ಗಳಿಸಿ ಸ್ಕೋರಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಶಿಖರ್ ಧವನ್ 168 ರನ್ ಗಳಿಸಿ ಎರಡನೇ ಸ್ಥಾನ ಪಡೆದರು. ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ಮತ್ತು ಶುಭ್‌ಮನ್ ಗಿಲ್ ಜೋಡಿ ತಮ್ಮ ಆತ್ಯುತ್ತಮ ಆಟವನ್ನು ಮುಂದುವರೆಸಿದರು.

ಗಿಲ್ 82 ಮತ್ತು ಧವನ್ 81 ರನ್

ಗಿಲ್ 82 ಮತ್ತು ಧವನ್ 81 ರನ್

ಧವನ್ -ಗಿಲ್ ಜೋಡಿ ಆಗಸ್ಟ್ 18, ಗುರುವಾರದಂದು 3 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತವು 10 ವಿಕೆಟ್‌ಗಳ ಜಯ ಸಾಧಿಸಲು ಸಹಾಯ ಮಾಡಿದರು. ಗಿಲ್ 82 ಮತ್ತು ಧವನ್ 81 ರನ್ ಗಳಿಸಿ 192 ರನ್ ಸೇರಿಸಿದರು. ಏಕದಿನ ಪಂದ್ಯದಲ್ಲಿ ಜಿಂಬಾಬ್ವೆಯಲ್ಲಿ ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಆರಂಭಿಕ ವಿಕೆಟ್‌ನಲ್ಲಿ ಅತ್ಯಧಿಕ ಪಾಲುದಾರಿಕೆ ನೀಡಿದರು.

"ಈ ಸಮಯದಲ್ಲಿ ಕೆಎಲ್ ರಾಹುಲ್ ಅವರ ಸ್ಥಾನವು ನಂ.4 ಆಗಿದೆ. ಹೀಗಾಗಿ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಬ್ಯಾಟಿಂಗ್ ತೆರೆಯಲು ಕಾರಣವಾಗಿದೆ. ಭಾರತದ ಆಯ್ಕೆಗಾರರು ಮತ್ತು ತಂಡದ ಆಡಳಿತವು 2023ರ ವಿಶ್ವಕಪ್‌ಗೆ ಬ್ಯಾಕ್ಅಪ್ ಓಪನರ್‌ಗಾಗಿ ಎದುರು ನೋಡುತ್ತಿದೆ," ಎಂದು ಮಾಜಿ ಆಯ್ಕೆಗಾರ ಸಬಾ ಕರೀಮ್ ತಿಳಿಸಿದರು.

ರೋಹಿತ್ ಶರ್ಮಾ, ಶಿಖರ್ ಧವನ್ ಮುಂಚೂಣಿ ಓಪನರ್

ರೋಹಿತ್ ಶರ್ಮಾ, ಶಿಖರ್ ಧವನ್ ಮುಂಚೂಣಿ ಓಪನರ್

"ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮುಂಚೂಣಿಯ ಓಪನರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ ಶುಭ್‌ಮನ್ ಗಿಲ್ ಬ್ಯಾಕ್‌ಅಪ್ ಓಪನರ್ ಪಾತ್ರವನ್ನು ನಿರ್ವಹಿಸಬಲ್ಲರು. ಸರಿಯಾದ ತಂತ್ರದೊಂದಿಗೆ ಮೂರು ಸ್ವರೂಪಗಳಲ್ಲಿ ಆಡುವುದು ತುಂಬಾ ಕಷ್ಟ, ಆದರೆ ಶುಭ್‌ಮನ್ ಗಿಲ್ ಆ ಎಲ್ಲಾ ಅಂಶಗಳನ್ನು ಹೊಂದಿದ್ದಾರೆ. ಅವರ ಮನೋಧರ್ಮ ಉತ್ತಮವಾಗಿದೆ. ಅವರು ರನ್ ಗಳಿಸಿಸಿಯೂ ಕಠಿಣ ಸವಾಲುಗಳನ್ನು ಎದುರಿಸಬೇಕಾಯಿತು," ಎಂದು ಮಾಜಿ ಕ್ರಿಕೆಟಿಗ ಸಬಾ ಕರೀಮ್ ಹೇಳಿದರು.

Ravi Shastri ಅವಧಿಯಲ್ಲಿ ದಿನೇಶ್ ಕಾರ್ತಿಕ್ ಭಯಪಟ್ಟಿದ್ದು ಯಾಕೆ? | *Cricket | OneIndia Kannada
ಜಿಂಬಾಬ್ವೆ ವಿರುದ್ಧ ಭಾರತದ ಸಂಭಾವ್ಯ ತಂಡ

ಜಿಂಬಾಬ್ವೆ ವಿರುದ್ಧ ಭಾರತದ ಸಂಭಾವ್ಯ ತಂಡ

ಭಾರತ: ಕೆಎಲ್ ರಾಹುಲ್(ನಾಯಕ), ಶಿಖರ್ ಧವನ್ (ಉಪನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ದೀಪಕ್ ಚಾಹರ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್

ಬೆಂಚ್: ರಾಹುಲ್ ತ್ರಿಪಾಠಿ, ಶಾರ್ದೂಲ್ ಠಾಕೂರ್, ಅವೇಶ್ ಖಾನ್, ಶಬಾಜ್ ನದೀಮ್, ರುತುರಾಜ್ ಗಾಯಕ್ವಾಡ್

Story first published: Friday, August 19, 2022, 16:52 [IST]
Other articles published on Aug 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X