ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ ಮಹಿಳಾ ಟೆಸ್ಟ್: ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ, ಮಳೆ ಅಡ್ಡಿ

Ind W vs Aus W: Day 1, Rain washes out play after brilliant start for India

ಆಸ್ಟ್ರೇಲಿಯಾದಲ್ಲಿ ಭಾರತದ ಮಹಿಳೆಯರು ಹಾಗೂ ಆಸ್ಟ್ರೇಲಿಯಾ ಮಹಿಳೆಯರ ತಂಡಗಳ ನಡುವೆ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಇಂದು ಆರಂಭವಾಗಿದೆ. ಮೊದಲ ದಿನ ಮಳೆಯ ಕಾರಣದಿಂದಾಗಿ ಸಂಪೂರ್ಣವಾಗಿ ಪಂದ್ಯ ನಡೆಯದಿದ್ದರೂ ಮೊದಲ ದಿನದ ಗೌರವವನ್ನು ಭಾರತ ತಂಡ ಸಂಪೂರ್ಣವಾಗಿ ಪಡೆಯಲು ಯಶಸ್ವಿಯಾಗಿದೆ. ಟಾಸ್ ಸೋತ ಭಾರತ ಮಹಿಳೆಯರ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಪಡೆಯಿತು.

ಈ ಅವಕಾಶವನ್ನು ಭಾರತದ ಆರಂಭಿಕರು ಅದ್ಭುತವಾಗಿ ಬಳಸಿಕೊಂಡರು. ಮೊದಲ ವಿಕೆಟ್‌ಗೆ ಆರಂಭಿಕ ಜೋಡಿ 93 ರನ್‌ಗಳ ಜೊತೆಯಾಟವನ್ನು ನೀಡಿದೆ. ಸ್ಮೃತಿ ಮಂಧಾನ ಹಾಗೂ ಹಾಗೂ ಶಫಾಲಿ ವರ್ಮಾ ಆಸಿಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ 64 ಎಸೆತಗಳಲ್ಲಿ 31 ರನ್‌ಗಳಿಸಿದ್ದ ಶಫಾಲಿ ವರ್ಮಾ ವಿಕೆಟ್ ಕಳೆದುಕೊಂಡರು. ನಂತರ ಸ್ಮೃತಿ ಮಂಧಾನಾಗೆ ಪೂನಮ್ ರಾವತ್ ಜೊತೆಯಾಗಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ 7000 ರನ್ ಬಾರಿಸಿದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳ ಪಟ್ಟಿಟಿ20 ಕ್ರಿಕೆಟ್‌ನಲ್ಲಿ 7000 ರನ್ ಬಾರಿಸಿದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳ ಪಟ್ಟಿ

ಈ ಜೋಡಿ ಕೂಡ ಎರಡನೇ ವಿಕೆಟ್‌ಗೆ ಉತ್ತಮ ಜೊತೆಯಾಟವನ್ನು ಪ್ರದರ್ಶಿಸುವ ಭರವಸೆ ಮೂಡಿಸಿದ್ದು ಈಗಾಗಲೇ 39 ರನ್‌ಗಳ ಜೊತೆಯಾಟವನ್ನು ನೀಡಿದೆ. ಆದರೆ ಬಳಿಕ ಪಂದ್ಯಕ್ಕೆ ಮಳೆ ಅಡ್ಡಿಯಾದ ಪರಿಣಾಮವಾಗಿ ಪಂದ್ಯ ಕೇವಲ ಮೊದಲ ದಿನ 44.1 ಓವರ್‌ಗಷ್ಟೇ ಸೀಮಿತವಾಯಿತು. ಬಳಿಕ ಪಂದ್ಯ ಮುಂದುವರಿಯಲು ಅವಕಾಶ ದೊರೆಯಲಿಲ್ಲ. ಈ ಸಂದರ್ಭದಲ್ಲಿ ಸ್ಮೃತಿ ಮಂಧಾನ 80 ರನ್‌ಗಳಿಸಿದ್ದು ಪೂನಮ್ ರಾವತ್ 16 ರನ್‌ಗಳಿಸಿ ಕ್ರೀಸ್ ಕಾಯ್ದಿರಿಸಿದ್ದಾರೆ.

ಆಸ್ಟ್ರೇಲಿಯಾ ಮಹಿಳೆಯರ ತಂಡದ ವಿರುದ್ಧ ಏಕದಿನ ಸರಣಿಯಲ್ಲಿ ಭಾರೀ ಹೋರಾಟನ್ನು ನೀಡಿ 1-2 ಅಂತರದಿಂದ ಸೋಲು ಕಂಡ ಭಾರತೀಯ ಮಹಿಳೆಯರ ತಂಡ ಈಗ ಏಕೈಕ ಪಂದ್ಯವನ್ನೊಳಗೊಂಡ ಟೆಸ್ಟ್ ಸರಣಿಯಲ್ಲಿ ಭಾಗಿದೆ. ಈ ಟೆಸ್ಟ್ ಪಂದ್ಯ ಭಾರತದ ಮಹಿಳಾ ತಂಡದ ಪ್ರಪ್ರಥಮ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿದೆ. ಏಕದಿನ ಸರಣಿಯಲ್ಲಿ ನೀಡಿದ ಗಮನಾರ್ಹ ಪ್ರದರ್ಶನದ ನಂತರ ಟೆಸ್ಟ್ ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡದ ಪ್ರದರ್ಶನ ಕುತೂಹಲ ಮೂಡಿಸಿದೆ. ಅದಕ್ಕೆ ಪೂರಕವಾಗಿ ಮೊದಲ ದಿನದಾಟದಲ್ಲಿ ಮೇಲುಗೈ ಸಾಧಿಸಲು ಭಾರತ ಯಶಸ್ವಿಯಾಗಿದೆ.

ಐಪಿಎಲ್ 2021: ಟಿ20 ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್‌ವೆಲ್ಐಪಿಎಲ್ 2021: ಟಿ20 ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್‌ವೆಲ್

ಭಾರತೀಯ ಮಹಿಳೆಯ ತಂಡ ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ತಂಡದ 26 ಏಕದಿನ ಪಂದ್ಯಗಳ ಗೆಲುವಿನ ಸರಪಳಿಯನ್ನು ತುಂಡರಿಸಲು ಯಶಸ್ವಿಯಾಗಿತ್ತು. ಇದೇ ಹುಮ್ಮಸ್ಸಿನೊಂದಿಗೆ ಈಗ ಟೆಸ್ಟ್ ಸರಣಿಯಲ್ಲೂ ಥಾಲಿ ರಾಜ್ ಬಳಗ ಕಣಕ್ಕಿಳಿದಿದೆ. ಹಾಗೆ ನೋಡಿದರೆ ಏಕದಿನ ಸರಣಿಯನ್ನು ಭಾರತ ಗೆಲ್ಲುವ ಸಂಪೂರ್ಣ ಅವಕಾಶವಿತ್ತು. ಎರಡನೇ ಏಕದಿನ ಪಮದ್ಯದಲ್ಲಿ ಭಾರತೀಯ ಮಹಿಳೆಯರ ತಂಡ ಗೆಲ್ಲುವ ಎಲ್ಲಾ ಅವಕಾಶವನ್ನು ಹೊಂದಿತ್ತು. ಆದರೆ ಕೊನೆಯ ಎಸೆತದಲ್ಲಿ ಈ ಪಂದ್ಯವನ್ನು ಸೋತ ಕಾರಣ ಸರಣಿಯನ್ನು ಕಳೆದುಕೊಂಡಿತ್ತು.

ಭಾರತ ಮಹಿಳೆಯರ ಆಡುವ ಬಳಗ:
ಸ್ಮೃತಿ ಮಂಧನ, ಶಫಾಲಿ ವರ್ಮಾ, ಪುನಮ್ ರಾವತ್, ಮಿಥಾಲಿ ರಾಜ್ (ನಾಯಕಿ), ಯಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್
ಸ್ನೇಹ್ ರಾಣಾ, ಏಕತಾ ಬಿಶ್ತ್, ಶಿಖಾ ಪಾಂಡೆ, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್, ಪೂನಂ ಯಾದವ್

Dhoni ಅವರ ಈ ಒಂದು ಹೊಡೆತಕ್ಕೆ ಅಭಿಮಾನಿಗಳು ಫುಲ್ ಖುಷ್ | Oneindia Kannada

ಆಸ್ಟ್ರೇಲಿಯಾ ಆಡುವ ಬಳಗ: ಅಲಿಸಾ ಹೀಲಿ (ವಿಕೆಟ್ ಕೀಪರ್), ಬೆತ್ ಮೂನಿ, ಮೆಗ್ ಲ್ಯಾನಿಂಗ್ (ನಾಯಕಿ), ಎಲಿಸ್ ಪೆರ್ರಿ, ತಹ್ಲಿಯಾ ಮೆಕ್‌ಗ್ರಾತ್, ಆಶ್ಲೇ ಗಾರ್ಡ್ನರ್, ಅನ್ನಾಬೆಲ್ ಸದರ್‌ಲ್ಯಾಂಡ್, ಸೋಫಿ ಮೊಲಿನಕ್ಸ್, ಜಾರ್ಜಿಯಾ ವೇರ್‌ಹ್ಯಾಮ್, ಡಾರ್ಸಿ ಬ್ರೌನ್, ಸ್ಟೆಲ್ಲಾ ಕ್ಯಾಂಪ್‌ಬೆಲ್
ನಿಕೋಲಾ ಕ್ಯಾರಿ, ಜಾರ್ಜಿಯಾ ರೆಡ್‌ಮೇನ್, ಮೈಟ್ಲಾನ್ ಬ್ರೌನ್, ಮೊಲಿ ಸ್ಟ್ರಾನೊ, ಟೇಲಾ ವ್ಲೆಮಿಂಕ್, ಹನ್ನಾ ಡಾರ್ಲಿಂಗ್ಟನ್

Story first published: Thursday, September 30, 2021, 18:32 [IST]
Other articles published on Sep 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X