ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ ಮಹಿಳಾ ಟಿ20 ಸರಣಿ: 2ನೇ ಪಂದ್ಯದಲ್ಲಿಯೂ ಭಾರತಕ್ಕೆ ಭರ್ಜರಿ ಜಯ; ಸರಣಿ ಗೆದ್ದ ಹರ್ಮನ್ ಪಡೆ

Ind W vs SL W 2nd T20I: India women win against Sri Lanka and clinch series by 2-0
Photo Credit: icc twitter

ಭಾರತ ಹಾಗೂ ಶ್ರೀಲಂಕಾ ಮಹಿಳಾ ತಂಡಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿಯೂ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ಮಹಿಳಾ ತಂಡ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಎರಡು ಪಂದ್ಯ ಗೆಲ್ಲುವ ಮೂಲಕ ಸರಣಿ ವಶಕ್ಕೆ ಪಡೆದುಕೊಂಡಿದೆ. ಅಂತಿಮ ಪಂದ್ಯ ಜೂನ್ 27ರಂದು ನಡೆಯಲಿದ್ದು ವೈಟ್‌ವಾಶ್ ಮೇಲೆ ಭಾರತೀಯ ತಂಡ ಕಣ್ಣಿಟ್ಟಿದೆ

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ದೊಡ್ಡ ಮೊತ್ತವನ್ನು ಗಳಿಸುವಲ್ಲಿ ವಿಫಲವಾಯಿತು. ಲಂಕಾ ಪಡೆಗೆ ಉತ್ತಮ ಆರಂಭ ದೊರೆತರೂ ನಂತರದ ಬ್ಯಾಟರ್‌ಗಳಿಮದ ದೊಡ್ಡ ಮೊತ್ತ ಬಾರಲಿಲ್ಲ. ಹೀಗಾಗಿ ಸಾಧಾರಣ ಗುರಿಯನ್ನು ಭಾರತದ ಮುಂದಿಟ್ಟಿತು. ಇದನ್ನು ಭಾರತೀಯ ತಂಡ ಸುಲಭವಾಗಿ ಬೆನ್ನಟ್ಟುವ ಮೂಲಕ ಎರಡನೇ ಜಯ ಸಾಧಿಸಿದೆ.

1983ರ ವಿಶ್ವಕಪ್ ವಿಜಯೋತ್ಸವಕ್ಕೆ 39 ವರ್ಷಗಳು: ಇಡೀ ದೇಶಕ್ಕೆ ಸ್ಫೂರ್ತಿ ನೀಡಿದ್ದ ಕಪಿಲ್ ದೇವ್ ತಂಡ!1983ರ ವಿಶ್ವಕಪ್ ವಿಜಯೋತ್ಸವಕ್ಕೆ 39 ವರ್ಷಗಳು: ಇಡೀ ದೇಶಕ್ಕೆ ಸ್ಫೂರ್ತಿ ನೀಡಿದ್ದ ಕಪಿಲ್ ದೇವ್ ತಂಡ!

126 ರನ್‌ಗಳ ಗುರಿ ನೀಡಿದ ಲಂಕಾ ವನಿತೆಯರು

126 ರನ್‌ಗಳ ಗುರಿ ನೀಡಿದ ಲಂಕಾ ವನಿತೆಯರು

ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಬ ದೊರೆಯಿತು. ಲಮಕಾ ತಂಡದ ಆರಂಭಿಕ ಆಟಗಾರ್ತಿಯರಾದ ವಿಶ್ಮಿ ಗುಣರತ್ನೆ (45 ರನ್)ಹಾಗೂ ನಾಯಕಿ ಚಾಮರಿ ಅತ್ತಪಟ್ಟು( 43 ರನ್) ಸೇರಿಕೊಂಡು 87 ರನ್‌ಗಳ ಜೊತೆಯಾಟ ನೀಡಿದರು. ಆದರೆ ಇದಕ್ಕಾಗಿ ಅವರು 13.5 ಓವರ್‌ಗಳನ್ನು ಬಳಸಿಕೊಂಡರು. ಆದರೆ ಈ ಜೋಟಿ ಬೇರ್ಪಟ್ಟ ಬಳಿಕ ಲಂಕಾ ತಂಡ ನಾಟಕೀಯ ಕುಸಿತ ಕಾಣುತ್ತಾ ಸಾಗಿತು. ಈ ಇಬ್ಬರು ಆಟಗಾರ್ತಿಯರು ಹೊರತುಪಡಿಸಿ ಮತ್ತೆ ಯಾವ ಬ್ಯಾಟರ್‌ಗಳು ಕೂಡ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಹೀಗಾಗಿ 7 ವಿಕೆಟ್ ಕಳೆದುಕೊಂಡು 125 ರನ್‌ಗಳಿಸಲಷ್ಟೇ ಶ್ರೀಲಂಕಾ ಶಕ್ತವಾಯಿತು.

ಭಾರತ vs ಶ್ರೀಲಂಕಾ ಮಹಿಳಾ ಟಿ20 ಸರಣಿ

ಭಾರತ vs ಶ್ರೀಲಂಕಾ ಮಹಿಳಾ ಟಿ20 ಸರಣಿ

ಇನ್ನು ಶ್ರೀಲಂಕಾ ನೀಡಿದ ಈ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಸಾಧಾರಣ ಆರಂಬ ದೊರೆಯಿತು. ಶಫಾಲಿ ವರ್ಮಾ 17 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಮೇಘನಾ ಕೂಡ 17 ರರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಹಾಗೂ 39 ರನ್‌ಗಳಿಸಿದರೆ ನಾಯಕಿ ಹರ್ಮನ್‌ಪ್ರೀತ್ ಕೌರ್ 31 ರನ್‌ಗಳ ಕೊಡುಗೆ ನೀಡಿದರು. ಅಂತಿಮವಾಗಿ ಭಾರತ ಮಹಿಳಾ ತಂಡ 19.1 ಓವರ್‌ಗಳಲ್ಲಿ ಶ್ರೀಲಂಕಾ ನೀಡಿದ ಗುರಿಯನ್ನು ಮೋಡಿ ನಿಂತಿತು.

ಭಾರತ vs ಶ್ರೀಲಂಕಾ ಮಹಿಳಾ ಟಿ20 ಸರಣಿ

ಭಾರತ vs ಶ್ರೀಲಂಕಾ ಮಹಿಳಾ ಟಿ20 ಸರಣಿ

ಇನ್ನು ಈ ಗೆಲುವಿನೊಂದಿಗೆ ಭಾರತ ತಂಡ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದಿಂದ ಗೆಲುವು ಸಾಧಿಸಿದ್ದು ಒಂದು ಪಂದ್ಯ ಬಾಕಿಯಿರುವಂತೆಯೇ ಸರಣಿಯನ್ನು ವಶಕ್ಕೆ ಪಡೆದಿದೆ. ಟಿ20 ಸರಣಿಯ ಅಂತಿಮ ಪಂದ್ಯ ಕೂಡ ದಾಂಬಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿಯೇ ನಡೆಯಲಿದೆ. ಅದಾದ ಬಳಿಕ ಭಾರತ ಹಾಗೂ ಶ್ರೀಲಂಕಾ ತಂಡಗಳು ಏಕದಿನ ಸರಣಿಗಾಗಿ ಸೆಣೆಸಾಟ ನಡೆಸಲಿದ್ದು ಈ ಸರಣಿಯ ಮೂರು ಪಂದ್ಯಗಳು ಕೂಡ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ. ಜುಲೈ 1, 4, ಹಾಗೂ 7ರಂದು ಈ ಪಂದ್ಯಗಳು ಆಯೋಜನೆಯಾಗಲಿದೆ.

ಎರಡು ತಂಡಗಳ ಪ್ಲೇಯಿಂಗ್ XI

ಎರಡು ತಂಡಗಳ ಪ್ಲೇಯಿಂಗ್ XI

ಶ್ರೀಲಂಕಾ: ವಿಶ್ಮಿ ಗುಣರತ್ನೆ, ಚಾಮರಿ ಅತ್ತಪಟ್ಟು (ನಾಯಕಿ), ಹರ್ಷಿತಾ ಮಾದವಿ, ಹಾಸಿನಿ ಪೆರೇರಾ, ಕವಿಶಾ ದಿಲ್ಹಾರಿ, ನೀಲಾಕ್ಷಿ ಡಿ ಸಿಲ್ವಾ, ಅನುಷ್ಕಾ ಸಂಜೀವನಿ (ವಿಕೆಟ್ ಕೀಪರ್), ಓಶದಿ ರಣಸಿಂಗ್, ಸುಗಂದಿಕಾ ಕುಮಾರಿ, ಇನೋಕಾ ರಣವೀರ, ಉದೇಶಿಕಾ ಪ್ರಬೋಧನಿ

ಭಾರತ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸಬ್ಬಿನೇನಿ ಮೇಘನಾ, ದೀಪ್ತಿ ಶರ್ಮಾ, ಸಿಮ್ರಾನ್ ಬಹದ್ದೂರ್, ಪೂಜಾ ವಸ್ತ್ರಾಕರ್, ರೇಣುಕಾ ಸಿಂಗ್, ರಾಧಾ ಯಾದವ್

Story first published: Saturday, June 25, 2022, 18:13 [IST]
Other articles published on Jun 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X