ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸಿಸ್ ವಿರುದ್ಧ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಸೆಣೆಸಲು ಭಾರತ ಮಹಿಳೆಯರು ಸಜ್ಜು: ಸಂಭಾವ್ಯ ತಂಡ ಇಲ್ಲಿದೆ

Ind Women vs Aus women: Indias probable playing XI for the pink-ball Test

ಆಸ್ಟ್ರೇಲಿಯಾ ಮಹಿಳೆಯರ ತಂಡದ ವಿರುದ್ಧ ಏಕದಿನ ಸರಣಿಯಲ್ಲಿ ಭಾರೀ ಹೋರಾಟನ್ನು ನೀಡಿ 1-2 ಅಂತರದಿಂದ ಸೋಲು ಕಂಡ ಭಾರತೀಯ ಮಹಿಳೆಯರ ತಂಡ ಈಗ ಏಕೈಕ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲು ಸಜ್ಜಾಗಿದೆ. ಗುರುವಾರ ಈ ಈ ಟೆಸ್ಟ್ ಪಂದ್ಯ ಆರಂಬವಾಗಲಿದ್ದು ಡೇ-ನೈಟ್ ಪಂದ್ಯವಾಗಿದೆ. ಭಾರತದಲ್ಲಿ ಬೆಳಿಗ್ಗೆ 11:30ಕ್ಕೆ ಆರಂಭವಾಗಲಿದೆ. ಭಾರತೀಯ ವನಿತೆಯರ ತಂಡದ ಪ್ರದರ್ಶನ ಕುತೂಹಲ ಮೂಡಿಸಿದೆ. ಈ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತೀಯ ಮಹಿಳೆಯರ ತಂಡಕ್ಕೆ ವಿಶ್ವದರ್ಜೆಯ ತಂಡ ಎಂಬುದನ್ನು ಸಾರಲು ಅದ್ಭುತವಾದ ಅವಕಾಶವೂ ಆಗಿದೆ.

ಭಾರತೀಯ ಮಹಿಳೆಯ ತಂಡ ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ತ,ಡದ 26 ಏಕದಿನ ಪಂದ್ಯಗಳ ಗೆಲುವಿನ ಸರಪಳಿಯನ್ನು ತುಂಡರಿಸಲು ಯಶಸ್ವಿಯಾಗಿತ್ತು. ಇದೇ ಹುಮ್ಮಸ್ಸಿನೊಂದಿಗೆ ಈಗ ಟೆಸ್ಟ್ ಸರಣಿಯಲ್ಲೂ ಆಡಲು ಮಿಥಾಲಿ ರಾಜ್ ಬಳಗ ಸಜ್ಜಾಗಿದೆ. ಹಾಗೆ ನೋಡಿದರೆ ಏಕದಿನ ಸರಣಿಯನ್ನು ಭಾರತ ಗೆಲ್ಲುವ ಸಂಪೂರ್ಣ ಅವಕಾಶವಿತ್ತು. ಎರಡನೇ ಏಕದಿನ ಪಮದ್ಯದಲ್ಲಿ ಭಾರತೀಯ ಮಹಿಳೆಯರ ತಂಡ ಗೆಲ್ಲುವ ಎಲ್ಲಾ ಅವಕಾಶವನ್ನು ಹೊಂದಿತ್ತು. ಆದರೆ ಕೊನೆಯ ಎಸೆತದಲ್ಲಿ ಈ ಪಂದ್ಯವನ್ನು ಸೋತ ಕಾರಣ ಸರಣಿಯನ್ನು ಕಳೆದುಕೊಂಡಿತ್ತು.

ಐಪಿಎಲ್ 2021: ಮುಂಬೈ ಇಂಡಿಯನ್ಸ್ ಪರ ದಾಖಲೆ ಬರೆದ ಕೃನಾಲ್ ಪಾಂಡ್ಯಐಪಿಎಲ್ 2021: ಮುಂಬೈ ಇಂಡಿಯನ್ಸ್ ಪರ ದಾಖಲೆ ಬರೆದ ಕೃನಾಲ್ ಪಾಂಡ್ಯ

ಆದರೆ ಟೆಸ್ಟ್ ಮಾದರಿಯಲ್ಲಿ ಆಸ್ಟ್ರೇಲಿಯಾ ಮಹಿಳೆಯರ ತಂಡ ಭಾರತಕ್ಕೆ ತಿರುಗೇಟು ನೀಡಲು ಹವಣಿಸುತ್ತಿದೆ. ಈ ಮಧ್ಯೆ ಭಾರತಕ್ಕೆ ಹಿನ್ನಡೆಯೊಂದು ಉಂಟಾಗಿದೆ. ಅನುಭವಿ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ಹೆಬ್ಬೆರಳಿಗೆ ಗಾಯವಾಗಿದ್ದು ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ.

ಭಾರತ ಮಹಿಳೆಯರ ಸಂಪೂರ್ಣ ಸ್ಕ್ವಾಡ್: ಮಿಥಾಲಿ ರಾಜ್ (ಕ್ಯಾಪ್ಟನ್), ಸ್ಮೃತಿ ಮಂಧನಾ, ಶಫಾಲಿ ವರ್ಮಾ, ಪೂನಮ್ ರಾವತ್, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ಸ್ನೇಹ್ ರಾಣಾ, ಯಾಸ್ತಿಕಾ ಭಾಟಿಯಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಶಿಖಾ ಪಾಂಡೆ, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್, ಪೂಜಾ ವಸ್ತ್ರಕರ್, ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್, ರಿಚಾ ಘೋಷ್ (ವಿಕೆಟ್ ಕೀಪರ್), ಏಕತಾ ಬಿಶ್ತ್

ಐಪಿಎಲ್ 2021: ಮೊದಲ ವಾರದ ಅತ್ಯುತ್ತಮ ತಂಡ ಪ್ರಕಟ; ಅತ್ಯುತ್ತಮ ನಾಯಕ ಧೋನಿಯಲ್ಲ!ಐಪಿಎಲ್ 2021: ಮೊದಲ ವಾರದ ಅತ್ಯುತ್ತಮ ತಂಡ ಪ್ರಕಟ; ಅತ್ಯುತ್ತಮ ನಾಯಕ ಧೋನಿಯಲ್ಲ!

ಆರಂಭಿಕ ಜೋಡಿ, ಶಫಾಲಿ ವರ್ಮಾ-ಸ್ಲೃತಿ ಮಂಧಾನ: ಭಾರತ ಮಹಿಳೆಯರ ತಂಡ ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ಸರಣಿಯಲ್ಲಿ ಭಾಗಿಯಾಗುವ ಮೂಲಕ ಸುದೀರ್ಘ ಕಾಲದ ನಂತರ ಟೆಸ್ಟ್ ಮಾದರಿಗೆ ಮರಳಿತ್ತು. ಈ ಪಂದ್ಯದಲ್ಲಿ ಭಾರತದ ಆರಂಭಿಕ ಜೋಡಿಯಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಮಿಂಚಿದ್ದಾರೆ. ಅದರಲ್ಲೂ ಶಫಾಲಿ ವರ್ಮಾ ಸೀಮಿತ ಓವರ್‌ಗಳಂತೆಯೇ ಟೆಸ್ಟ್‌ನಲ್ಲಿಯತೂ ಭರವಸೆಯನ್ನು ಮೂಡಿಸಿದ್ದಾರೆ.

ಮಧ್ಯಮ ಕ್ರಮಾಂಕ: ಮಧ್ಯಮ ಕ್ರಮಾಂಕದಲ್ಲಿ ಪೂನಮ್ ರಾವತ್, ಮಿಥಾಲಿ ರಾಜ್, ಯಶಿಕಾ ಬಾಟಿಯಾ, ತಾನಿಯಾ ಭಾಟಿಯಾ ಕಣಕ್ಕಿಳಿಯುವ ಸಾಧ್ಯತೆಯಿದೆ. ಮೂರನೇ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ ಇಂಗ್ಲೆಂಡ್ ಸರಣಿಯಲ್ಲಿ ಯಶಸ್ಸು ಸಾಧಿಸಿದ ನಂತರ ಪೂನಮ್ ರಾವತ್ ಸ್ಥಾನ ತೂಗುಯ್ಯಾಲೆಯಲ್ಲಿದೆ.

ಐಪಿಎಲ್ 2021: ಎಂಐಯ ಕ್ವಿಂಟನ್ ಡಿ ಕಾಕ್ ಹೆಸರಿಗೆ ವಿಶಿಷ್ಠ ದಾಖಲೆಐಪಿಎಲ್ 2021: ಎಂಐಯ ಕ್ವಿಂಟನ್ ಡಿ ಕಾಕ್ ಹೆಸರಿಗೆ ವಿಶಿಷ್ಠ ದಾಖಲೆ

ಆಲ್‌ರೌಂಡರ್‌ಗಳು: ಬಾಟಿಯಾದ್ವಯರು ಬ್ಯಾಟಿಂಗ್ ನಡೆಸಿದ ಬಳಿಕದ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ ಕಣಕ್ಕಿಳಿಯುವ ಸಾಧ್ಯತೆಯಿದೆ. ದೀಪ್ತಿ ಶರ್ಮಾ ಮೇಲೆ ಈ ಪಂದ್ಯದಲ್ಲಿ ಹೆಚ್ಚಿನ ನಿರೀಕ್ಷೆಯಿದೆ. ಸ್ಬೇನ್ ರಾಣಾ ಕೂಡ ಟೆಸ್ಟ್ ಸರಣಿಯಲ್ಲಿ ಮಿಂಚುವ ವಿಶ್ವಾಸವನ್ನು ಹೊಂದಿದ್ದಾರೆ.

ಐಪಿಎಲ್: ಸಾಲು ಸಾಲು ಪಂದ್ಯ ಸೋತ ಮುಂಬೈಗೆ ಪ್ಲೇ ಆಫ್ ಪ್ರವೇಶಿಸಲು ಇವೆ ಈ 2 ಮಾರ್ಗಗಳುಐಪಿಎಲ್: ಸಾಲು ಸಾಲು ಪಂದ್ಯ ಸೋತ ಮುಂಬೈಗೆ ಪ್ಲೇ ಆಫ್ ಪ್ರವೇಶಿಸಲು ಇವೆ ಈ 2 ಮಾರ್ಗಗಳು

ಬೌಲರ್‌ಗಳು: ಭಾರತದ ಅನುಭವಿ ಆಟಗಾರ್ತಿ ಜೂಲನ್ ಗೋಸ್ವಾಮಿ ಬೌಲಿಂಗ್ ವಿಭಾಗದ ನೇತೃತ್ವದ ವಹಿಸಿಕೊಳ್ಳಲಿದ್ದಾರೆ. ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗೆ ಹಿನ್ನಡೆಯುಂಟು ಮಾಡಬಲ್ಲ ಸಾಮರ್ಥ್ಯಹೊಂದಿರುವ ಮೇಘ್ನಾ ಸಿಂಗ್ ಪಿಂಕ್ ಚೆಂಡಿನಲ್ಲಿ ಕೂಚಳಕ ತೋರಿಸುವ ನಿರೀಕ್ಷೆಯಿದೆ. ಮತ್ತೊಂದೆಡೆ ಶಿಖಾ ಪಾಂಡೆ ಶ್ರೇಷ್ಠ ಫಾರ್ಮ್‌ನಲ್ಲಿಲ್ಲದಿದ್ದರೂ ಅನುಭವ ಆಸಿಸ್ ನೆಲದಲ್ಲಿ ಭಾರತ ತಂಡಕ್ಕೆ ನೆರವಾಗುವ ವಿಶ್ವಾಸವಿದೆ.

Story first published: Wednesday, September 29, 2021, 17:42 [IST]
Other articles published on Sep 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X