ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಎ ಪರ ಐವರ ಅರ್ಧಶತಕ: ನ್ಯೂಜಿಲೆಂಡ್ ವಿರುದ್ಧ ಉತ್ತಮ ಮೊತ್ತ

India A Vs New Zealand A 1st unofficial 4 days test 2nd day play report

ವೆಲ್ಲಿಂಗ್ಟನ್, ನವೆಂಬರ್ 17: ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಭಾರತ ಎ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ನಾಲ್ಕು ದಿನಗಳ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಎರಡನೆ ದಿನ ನ್ಯೂಜಿಲೆಂಡ್ ಮರುಹೋರಾಟ ನಡೆಸಿದೆ.

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ಕಳೆದುಕೊಂಡು 467 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಆತಿಥೇಯರು ಆರಂಭಿಕ ಆಟಗಾರ ಹಮೀಶ್ ರುದರ್‌ಫೋರ್ಡ್ ಅವರ ಅಜೇಯ ಶತಕದ ನೆರವಿನಿಂದ ಎರಡನೆಯ ದಿನದಾಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 170 ರನ್‌ ಪೇರಿಸಿದೆ.

ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್‌ರಿಂದ ರಂಗೇರಲಿದೆ ಐಪಿಎಲ್ 12ನೇ ಆವೃತ್ತಿ!ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್‌ರಿಂದ ರಂಗೇರಲಿದೆ ಐಪಿಎಲ್ 12ನೇ ಆವೃತ್ತಿ!

ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 340 ರನ್ ಗಳಿಸಿದ್ದ ಭಾರತ, ಪಾರ್ಥಿವ್ ಪಟೇಲ್, ವಿಜಯ್ ಶಂಕರ್ ಅವರ ಅರ್ಧ ಶತಕ ಮತ್ತು ಕೆ. ಗೌತಮ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ 467 ರನ್ ಕಲೆ ಹಾಕಿತು. ಬಳಿಕ ನಾಯಕ ಅಜಿಂಕ್ಯ ರಹಾನೆ ಇನ್ನಿಂಗ್‌ ಡಿಕ್ಲೇರ್ ಮಾಡಿಕೊಂಡರು.

ಕೋಲ್ಕತ್ತಾ ಶತಕಕ್ಕಿಂತ ಸಿಡ್ನಿಯ ಶತಕ ನನ್ನ ಪಾಲಿಗೆ ವೆರಿ ವೆರಿ ಸ್ಪೆಷಲ್: ಲಕ್ಷ್ಮಣ್ಕೋಲ್ಕತ್ತಾ ಶತಕಕ್ಕಿಂತ ಸಿಡ್ನಿಯ ಶತಕ ನನ್ನ ಪಾಲಿಗೆ ವೆರಿ ವೆರಿ ಸ್ಪೆಷಲ್: ಲಕ್ಷ್ಮಣ್

ಮೊದಲ ದಿನ ಭಾರತದ ಪರ ಪೃಥ್ವಿ ಶಾ, ಮಯಾಂಕ್ ಅಗರವಾಲ್ ಮತ್ತು ಹನುಮ ವಿಹಾರಿ ಅರ್ಧಶತಕ ಬಾರಿಸಿದ್ದರು.

ಸಂಕ್ಷಿಪ್ತ ಸ್ಕೋರ್
ಭಾರತ, ಮೊದಲ ಇನ್ನಿಂಗ್ಸ್: 467/8 (122.1). ಪೃಥ್ವಿ ಶಾ 62, ಮಯಾಂಕ್ ಅಗರವಾಲ್ 65, ಹನುಮ ವಿಹಾರಿ 86, ಪಾರ್ಥಿವ್ ಪಟೇಲ್ 94, ವಿಜಯ್ ಶಂಕರ್ 62, ಕೆ. ಗೌತಮ್ 47. ಮುರಳಿ ವಿಜಯ್ 28, ಅಜಿಂಕ್ಯ ರಹಾನೆ 12, ಬ್ಲೇರ್ ಟಿಕ್ನರ್ 80/4, ರವಿನ್ ರವೀಂದ್ರ 56/1

ನ್ಯೂಜಿಲೆಂಡ್, ಮೊದಲ ಇನ್ನಿಂಗ್ಸ್: 170/1 (51) ಹಮೀಶ್ ರುದರ್‌ಫೋರ್ಡ್ 100, ವಿಲ್ ಯಂಗ್ 49, ಕೆ. ಗೌತಮ್ 33/1.

Story first published: Saturday, November 17, 2018, 13:40 [IST]
Other articles published on Nov 17, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X