ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಕ್ರಿಕೆಟ್ ತಂಡಕ್ಕೆ ಶುಭ ಮಂಗಳವಾರ: ಎರಡು ಗೆಲುವು

India a and under 19 cricket teams won thier respective matches on Tuesday

ಬೆಂಗಳೂರು, ಆಗಸ್ಟ್ 7: ಭಾರತ ಕಿರಿಯರ ಕ್ರಿಕೆಟ್ ತಂಡಗಳ ಪಾಲಿಗೆ ಮಂಗಳವಾರ ಶುಭದಿನವಾಗಿ ಪರಿಣಮಿಸಿತ್ತು.

ಇತ್ತ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 'ಎ' ತಂಡದ ಯುವಕರು ಇನ್ನಿಂಗ್ಸ್ ಗೆಲುವಿನ ಸಂಭ್ರಮದಲ್ಲಿ ಮಿಂದರೆ, ನೆರೆಯ

ಶ್ರೀಲಂಕಾದಲ್ಲಿ 19 ವರ್ಷದೊಳಗಿನವರ ತಂಡ ಶ್ರೀಲಂಕಾ ವಿರುದ್ಧದ ಹಿಂದಿನ ಪಂದ್ಯದ ಸೇಡನ್ನು ತೀರಿಸಿಕೊಂಡು ಬೀಗಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ದಕ್ಷಿಣ ಆಫ್ರಿಕಾ 'ಎ' ತಂಡವು ಭಾರತ 'ಎ' ತಂಡದ ವಿರುದ್ಧ ಇನ್ನಿಂಗ್ಸ್ ಸೋಲು ಅನುಭವಿಸಿತು.

ತಂಡದ ಆಯ್ಕೆಗೆ ವಯಸ್ಸು ಮಾನದಂಡವಾಗಬಾರದು: ತೆಂಡೂಲ್ಕರ್ ತಂಡದ ಆಯ್ಕೆಗೆ ವಯಸ್ಸು ಮಾನದಂಡವಾಗಬಾರದು: ತೆಂಡೂಲ್ಕರ್

ಆದರೆ, ಕೊನೆಯ ದಿನ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತವನ್ನು ಹರಿಣದ ಯುವಪಡೆ ಸಾಕಷ್ಟು ಕಾಡಿಸಿತು.

ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗುವ ಮೂಲಕ ಡ್ರಾ ಮಾಡಿಕೊಳ್ಳಲು ಶತಪ್ರಯತ್ನ ನಡೆಸಿದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ಸಂಜೆವರೆಗೂ ಪಂದ್ಯವನ್ನು ಉಳಿಸಿಕೊಂಡಿದ್ದರು.

ಸೋಮವಾರ ದಿನದಾಂತ್ಯಕ್ಕೆ 99 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾಕ್ಕೆ ವಿಕೆಟ್ ಕೀಪರ್ ರೂಡಿ ಸೆಕಂಡ್ (94) ಆಸರೆಯಾದರು. ಸೇನುರನ್ ಮುತ್ತುಸ್ವಾಮಿ (23), ಶಾನ್ ವೊನ್ ಬೆರ್ಗ್ (15) ಹೆಚ್ಚು ಕಾಲ ಕ್ರೀಸ್‌ನಲ್ಲಿದ್ದು ಅವರಿಗೆ ಉತ್ತಮ ಸಾಥ್ ನೀಡಿದರು.

ಆದರೆ, ಕೊನೆಗೂ ಭಾರತ ಮೇಲುಗೈ ಪಡೆಯಿತು. ದಕ್ಷಿಣ ಆಫ್ರಿಕಾ 246 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಮತ್ತು 30 ರನ್‌ಗಳ ಸೋಲು ಅನುಭವಿಸಿತು.

ಕಪಿಲ್ ದೇವ್‌ ಜತೆ ಹಾರ್ದಿಕ್ ಪಾಂಡ್ಯಾ ಹೋಲಿಕೆ: ಕೆರಳಿದ ಗವಾಸ್ಕರ್‌ಕಪಿಲ್ ದೇವ್‌ ಜತೆ ಹಾರ್ದಿಕ್ ಪಾಂಡ್ಯಾ ಹೋಲಿಕೆ: ಕೆರಳಿದ ಗವಾಸ್ಕರ್‌

ಭಾರತದ ಪರ ಮೊಹಮ್ಮದ್ ಸಿರಾಜ್ 5, ನವದೀಪ್ ಸೈನಿ 2, ರಜನೀಶ್ ಗುರ್ಬಾನಿ 2 ಮಿಂಚಿನ ದಾಳಿ ನಡೆಸಿದರು.

ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ:308 & 246 (88.3): ರೂಡಿ ಸೆಕಂಡ್ 94, ಸರೆಲ್ ಎರ್ವೀ 47, ಖಾಯಾ ಜೊಂಡೋ 24, ಸೆನುರನ್ ಮುತ್ತುಸ್ವಾಮಿ 23. ಮೊಹಮ್ಮದ್ ಸಿರಾಜ್ 56/2, ನವದೀಪ್ ಸೈನಿ 47/2, ರಜನೀಶ್ ಗುರ್ಬಾನಿ 47/2

ಭಾರತ: 584/8 ಡಿಕ್ಲೇರ್ (129.4): ಮಯಂಕ್ ಅಗರ್ವಾಲ್ 220, ಪೃಥ್ವಿ ಶಾ 136, ಶ್ರೀಕರ್ ಭರತ್ 64, ಹನುಮ ವಿಹಾರಿ 54. ಹೆಂಡ್ರಿಕ್ಸ್ 98/3, ಒಲಿವರ್ 88/2, ಡೇನ್ ಪೀಡ್ತ್ 92/2.

ಫಲಿತಾಂಶ: ಭಾರತಕ್ಕೆ ಇನ್ನಿಂಗ್ಸ್ ಮತ್ತು 30 ರನ್‌ಗಳ ಗೆಲುವು. ಎರಡು ಪಂದ್ಯಗಳ ಸರಣಿ 1-0 ಮುನ್ನಡೆ.

ಕಿರಿಯರ ತಂಡಕ್ಕೆ ಗೆಲುವು

ಶ್ರೀಲಂಕಾದ ಮೊರಾಟುವಾದಲ್ಲಿ ನಡೆದ ಅಂಡರ್ 19 ಏಕದಿನ ಸರಣಿಯ ನಾಲ್ಕನೆಯ ಪಂದ್ಯವನ್ನು ಗೆಲ್ಲುವ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಭಾರತ ಸಮಬಲ ಸಾಧಿಸಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 278 ರನ್ ಗಳಿಸಿತು.

ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ ಆರಂಭದಿಂದಲೇ ಕುಸಿತ ಅನುಭವಿಸಿತು. ಕೇವಲ 143 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ 135 ರನ್‌ಗಳ ಸೋಲು ಅನುಭವಿಸಿತು.

ಸಂಕ್ಷಿಪ್ತ ಸ್ಕೋರ್
ಭಾರತ: 278/6 (50) ದೇವದತ್ ಪಡಿಕ್ಕಲ್ 71, ಆರ್ಯನ್ ಜುಯಾಲ್ 60, ಯಶ್ ರಾಥೋಡ್ 56, ಪವನ್ ಶಾ 36. ಅವಿಷ್ಕಾ ಲಕ್ಷಣ್ 48/2, ಸಂಡುನ್ ಮೆಂಡಿಸ್ 37/2.

ಶ್ರೀಲಂಕಾ: 143/10 (37.2) ನವೋದ್ ಪರಣವಿತನ 45, ನಿಪುನ್ ಧನಂಜಯ 36, ಆಯುಷ್ ಬದೋನಿ 35/3, ಹರ್ಷ್ ತ್ಯಾಗಿ 37/3.

ಫಲಿತಾಂಶ: ಭಾರತಕ್ಕೆ 135 ರನ್‌ಗಳ ಜಯ. ಐದು ಪಂದ್ಯಗಳ ಸರಣಿ 2-2 ರಿಂದ ಸಮ.

Story first published: Tuesday, August 7, 2018, 20:47 [IST]
Other articles published on Aug 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X