ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಡೊ-ಪಾಕ್‌ ಪಂದ್ಯದಲ್ಲಿ ಗೆಲ್ಲೊದ್ಯಾರಂತ ಭವಿಷ್ಯ ನುಡಿದ ಕಪಿಲ್‌ ದೇವ್‌!

India are favourites against Pakistan: Kapil Dev

ಹೊಸದಿಲ್ಲಿ, ಜೂನ್‌ 12: ಇಡೀ ಕ್ರಿಕೆಟ್‌ ಜಗತ್ತೇ ಕಾದು ಕುಳಿತಿರುವ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ವಿಶ್ವಕಪ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಸಾರಥ್ಯದ ಟೀಮ್‌ ಇಂಡಿಯಾ ಪ್ರಶಸ್ತಿ ಗೆಲ್ಲಲಿದೆ ಎಂದು 1983ರಲ್ಲಿ ಭಾರತಕ್ಕೆ ಚೊಚ್ಚಲ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದುಕೊಟ್ಟ ನಾಯಕ ಕಪಿಲ್‌ ದೇವ್‌ ಭವಿಷ್ಯ ನುಡಿದಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

"ನಮ್ಮ ತಂಡ ಮೊದಲ ಎರಡು ಪಂದ್ಯಗಳನ್ನು ಗೆದ್ದು ವಿಶ್ವಕಪ್‌ನಲ್ಲಿ ಉತ್ತಮ ಆರಂಭ ಪಡೆದಿದೆ. ಹವಾಮಾನ ಯಾವುದೇ ತೊಂದರೆ ಕೊಡೆದೆ, ಭಾರತ ತಂಡ ಇಂಥದ್ದೇ ಪ್ರದರ್ಶನ ಮುಂದುವರಿಸಲಿ ಎಂದು ಆಶಿಸುತ್ತೇನೆ,'' ಎಂದು ಕಪಿಲ್‌ ದೇವ್‌ ಹೇಳಿದ್ದಾರೆ.

ಕೋಚ್‌ ಶಾಸ್ತ್ರಿ ಮತ್ತು ತಂಡದ ಸೇವೆ ವಿಶ್ವಕಪ್‌ ನಂತರ ವಿಸ್ತರಣೆ!ಕೋಚ್‌ ಶಾಸ್ತ್ರಿ ಮತ್ತು ತಂಡದ ಸೇವೆ ವಿಶ್ವಕಪ್‌ ನಂತರ ವಿಸ್ತರಣೆ!

ಭಾರತ ತಂಡ ಜೂನ್‌ 16ರಂದು ಪಾಕಿಸ್ತಾನ ವಿರುದ್ಧ ತನ್ನ ನಾಲ್ಕನೇ ಲೀಗ್‌ ಪಂದ್ಯವನ್ನಾಡಲಿದ್ದು, ಇದಕ್ಕೂ ಮುನ್ನ ಗುರುವಾರ ನ್ಯೂಜಿಲೆಂಡ್‌ ಎದುರು ಮೂರನೇ ಲೀಗ್‌ ಪಂದ್ಯದಲ್ಲಿ ಪೈಪೋಟಿ ನಡೆಸಲಿದೆ. ಈಗಾಗಲೇ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಮಣಿಸಿರುವ ವಿರಾಟ್‌ ಕೊಹ್ಲಿ ಬಳಗ ಮುಂದಿನ ಎರಡು ಪಂದ್ಯಗಳಲ್ಲೂ ಗೆಲ್ಲುವ ಫೇವರಿಟ್‌ ಎನಿಸಿದೆ.

ಧವನ್‌ ಬಗ್ಗೆ ಸಹಾಯಕ ಕೋಚ್‌ ಸಂಜಯ್‌ ಬಾಂಗರ್‌ ಹೇಳಿದ್ದಿದು!ಧವನ್‌ ಬಗ್ಗೆ ಸಹಾಯಕ ಕೋಚ್‌ ಸಂಜಯ್‌ ಬಾಂಗರ್‌ ಹೇಳಿದ್ದಿದು!

"ನನ್ನ ಕಾಲದಲ್ಲಿ ಇಂಡೊ-ಪಾಕ್‌ ಪಂದ್ಯಗಳಲ್ಲಿ ಪಾಕಿಸ್ತಾನವನ್ನೇ ಗೆಲ್ಲುವ ಫೇವರಿಟ್‌ ಎಂದು ಕರೆಯಲಾಗುತ್ತಿತ್ತು. ಆದರೀಗ ಭಾರತ ತಂಡ ಅತ್ಯುತ್ತಮವಾಗಿದೆ. ಶ್ರೇಯಾಂಕದಲ್ಲೂ ನಮ್ಮ ತಂಡ ಉನ್ನತ ಸ್ಥಾನದಲ್ಲಿದ್ದು, ಅತ್ಯುತ್ತಮ ಕ್ರಿಕೆಟ್‌ ಆಡುತ್ತಿದೆ,'' ಎಂದು ಹರಿಯಾಣ ಹರಿಕೇನ್‌ ಖ್ಯಾತಿಯ ಮಾಜಿ ಆಲ್‌ರೌಂಡರ್‌ 60 ವರ್ಷದ ಕಪಿಲ್‌ ಟೀಮ್‌ ಇಂಡಿಯಾ ಗೆಲ್ಲುವ ಫೇವರಿಟ್‌ ಎಂದು ಸೂಚಿಸಿದ್ದಾರೆ.

ಆಮಿರ್‌ಗೆ ಸ್ಪಾಟ್‌ ಫಿಕ್ಸಿಂಗ್‌ ಒಪ್ಪಿಕೊಳ್ಳುವಂತೆ ಮಾಡಿದ್ದು ಯಾರು ಗೊತ್ತಾ?ಆಮಿರ್‌ಗೆ ಸ್ಪಾಟ್‌ ಫಿಕ್ಸಿಂಗ್‌ ಒಪ್ಪಿಕೊಳ್ಳುವಂತೆ ಮಾಡಿದ್ದು ಯಾರು ಗೊತ್ತಾ?

ಇದೇ ವೇಳೆ ಸೋಮವಾರವಷ್ಟೇ ನಿವೃತ್ತಿ ಘೋಷಿಸಿದ ಟೀಮ್‌ ಇಂಡಿಯಾದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಅವರನ್ನು ಮತ್ತೊಮ್ಮೆ ಟೀಮ್‌ ಇಂಡಿದ ಜರ್ಸಿಯಲ್ಲಿ ನೋಡಬೇಕು ಎಂಬ ಬಯಕೆಯನ್ನೂ ಕಪಿಲ್‌ ವ್ಯಕ್ತ ಪಡಿಸಿದ್ದಾರೆ.

ವಿಶ್ವಕಪ್‌: ಶಿಖರ್‌ ಧವನ್‌ ಇಂಜುರಿ ಬಗ್ಗೆ ಬಿಸಿಸಿಐ ಹೇಳೋದೇನು?ವಿಶ್ವಕಪ್‌: ಶಿಖರ್‌ ಧವನ್‌ ಇಂಜುರಿ ಬಗ್ಗೆ ಬಿಸಿಸಿಐ ಹೇಳೋದೇನು?

"ಯುವರಾಜ್‌ ಸಿಂಗ್‌ ಅವರಂತಹ ಆಟಗಾರನಿಗೆ ಕ್ರಿಕೆಟ್‌ ಅಂಗಣದಲ್ಲೇ ವಿದಾಯ ನೀಡಬೇಕು. ತಮ್ಮ ವೃತ್ತಿ ಬದುಕಿನಲ್ಲಿ ಅವರು ಅದ್ಭುತ ಕ್ರಿಕೆಟ್‌ ಆಡಿದ್ದಾರೆ. ಹೀಗಾಗಿ ಕೊನೆಯ ಬಾರಿ ಒಂದು ಪಂದ್ಯದಲ್ಲಿ ಅವರು ಆಡುವುದನ್ನು ನಾನು ನೋಡಬೇಕು. ಆದರೂ ಅವರ ಅದ್ಭುತ ವೃತ್ತಿ ಬದುಕಿಗೆ ಶುಭಾಶಯಗಳನ್ನು ಹೇಳಲು ಬಯಸುತ್ತೇನೆ,'' ಎಂದಿದ್ದಾರೆ.

{headtohead_cricket_3_5}

Story first published: Wednesday, June 12, 2019, 22:26 [IST]
Other articles published on Jun 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X