ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಅಗಲಿದ ಆಸಿಸ್ ಮಾಜಿ ಕ್ರಿಕೆಟಿಗ ಡೀನ್ ಜಾನ್ಸ್‌ಗೆ ಇತ್ತಂಡಗಳಿಂದ ಗೌರವ

India, Australia players to wear armbands during 1st ODI in honour of Dean Jones

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಶುಕ್ರವಾರ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಈ ಎರಡು ತಂಡಗಳ ಆಟಗಾರರು ಕೈಗೆ ಕಪ್ಪುಪಟ್ಟಿಯನ್ನು ಧರಿಸಿಕೊಂಡು ಕಣಕ್ಕಿಳಿಯಲಿದೆ. ಇತ್ತೀಚೆಗೆ ಅಗಲಿದ ಆಸ್ಟ್ರೇಲಿಯಾ ಕ್ರಿಕೆಟ್‌ನ ಮಾಜಿ ಆಟಗಾರನಿಗೆ ಈ ಮೂಲಕ ಎರಡು ತಂಡಗಳು ಗೌರವ ಸಲ್ಲಿಸಲಿದೆ.

ಆಸ್ಟ್ರೇಲಿಯಾ ಕ್ರಿಕೆಟ್‌ನ ಮಾಜಿ ಆಟಗಾರ ಡೀನ್ ಜಾನ್ಸ್ ಸೆಪ್ಟೆಂಬರ್‌ತಿಂಗಳಿನಲ್ಲಿ ಐಪಿಎಲ್ ಮಧ್ಯೆಯೇ ವಿಧಿವಶರಾದರು. ಅವರ ಅಗಲಿಕೆಗೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರು ಕಪ್ಪು ಪಟ್ಟಿಧರಿಸುವ ಮೂಲಕ ಗೌರವ ಸಲ್ಲಿಸಲು ನಿರ್ಧರಿಸಲಾಗಿದೆ.

ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಏಕದಿನ ಆಟಗಾರ ಎಂದ ಆಸಿಸ್ ಕ್ಯಾಪ್ಟನ್ ಫಿಂಚ್ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಏಕದಿನ ಆಟಗಾರ ಎಂದ ಆಸಿಸ್ ಕ್ಯಾಪ್ಟನ್ ಫಿಂಚ್

ಡೀನ್ ಜಾನ್ಸ್ ಆಸ್ಟ್ರೇಲಿಯಾ ತಂಡದ ಪರವಾಗಿ 52 ಟೆಸ್ಟ್ ಹಾಗೂ 164 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಐಪಿಎಲ್‌ನಲ್ಲಿ ಅಧಿಕೃತ ಪ್ರಸಾರಕರ ಕಾಮೆಂಟೇಟರಿ ಪಟ್ಟಿಯಲ್ಲಿದ್ದ ಜಾನ್ಸ್ ಮುಂಬೈನಲ್ಲಿದ್ದರು. ಸೆಪ್ಟೆಂಬರ್ 24ರಮದು ಹೃದಯಾಘಾತವಾಗಿ ಡೀನ್ ಜಾನ್ಸ್ ಮೃತಪಟ್ಟಿದ್ದರು.

"ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯಕ್ಕೂ ಮುನ್ನ ಡೀನ್ ಜಾನ್ಸ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಒಂದು ನಿಮಿಷಗಳ ಮೌನಾಚರಣೆಯನ್ನು ಮಾಡಲಾಗುತ್ತದೆ. ಎರಡು ತಂಡಗಳು ಕಪ್ಪುಪಟ್ಟಿಯೊಂದಿಗೆ ಕಣಕ್ಕಿಳಿಯಲಿದೆ. ಡೀನ್ ಜಾನ್ಸ್ ಅವರ ವೃತ್ತಿ ಜೀವನದ ಕೆಲ ಪ್ರಮುಖ ವಿಡಿಯೋಗಳನ್ನು ಬೃಹತ್ ಪರದೆಯಲ್ಲಿ ತೋರಿಸಲಾಗುತ್ತದೆ" ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆಯಲ್ಲಿನ ವರದಿಯಲ್ಲಿ ತಿಳಿಸಲಾಗಿದೆ.

Story first published: Thursday, November 26, 2020, 17:38 [IST]
Other articles published on Nov 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X