ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಏಕದಿನ ಪಂದ್ಯದ ಆರಂಭಕ್ಕೂ ಮುನ್ನ ಫಿಲಿಪ್ ಹ್ಯೂಸ್‌ಗೆ ಗೌರವಾರ್ಪಣೆ

India, Australia to pay homage to Phil Hughes ahead of 1st ODI

ಶುಕ್ರವಾರ ಆಸ್ಟ್ರೇಲಿಯಾ ವಿರುದ್ದದ ಸರಣಿ ಆರಂಭವಾಗಲಿದೆ. ಏಕದಿನ ಪಂದ್ಯದ ಮೂಲಕ ಸುದೀರ್ಘ ಸರಣಿಗೆ ಚಾಲನೆ ದೊರೆಯುತ್ತಿದೆ. ಮೊದಲ ಏಕದಿನ ಪಂದ್ಯದ ಆರಂಭಕ್ಕೂ ಮುನ್ನ ಭಾರತ ಹಾಗೂ ಆಸ್ಟ್ರೇಲಿಯಾ ಎರಡೂ ತಂಡಗಳು 6 ವರ್ಷಗಳ ಹಿಂದೆ ಬೌನ್ಸರ್ ದಾಳಿಯಿಂದ ಮೃತಪಟ್ಟ ಆಸ್ಟ್ರೇಲಿಯಾದ ಕ್ರಿಕೆಟಿಗ ಫಿಲಿಪ್ ಹ್ಯೂಸ್‌ಗೆ ಗೌರವಾರ್ಪಣೆಯನ್ನು ಸಲ್ಲಿಸಲಿದೆ.

ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಏಕದಿನ ಪಂದ್ಯ ನಡೆಯುವ ದಿನವೇ ಫಿಲಿಫ್ ಹ್ಯೂಸ್ ಅವರ ಆರನೇ ವರ್ಷದ ಪುಣ್ಯತಿಥಿಯಾಗಲಿದೆ. ಹೀಗಾಗಿ ಈ ದಿನದಂದು ಅಗಲಿದ ಆಟಗಾರನಿಗೆ ಗೌರವ ಸಲ್ಲಿಸಲು ನಿರ್ಧರಿಸಲಾಗಿದೆ. 2014ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗಲೇ ಈ ದುರಂತ ನಡೆದಿತ್ತು.

India vs Australia: ಕನ್ನಡ ಕಾಮೆಂಟರಿಗೆ ಅಭಿಮಾನಿಗಳ ಒತ್ತಾಯIndia vs Australia: ಕನ್ನಡ ಕಾಮೆಂಟರಿಗೆ ಅಭಿಮಾನಿಗಳ ಒತ್ತಾಯ

ಆಸ್ಟ್ರೇಲಿಯಾದ ಪ್ರಥಮದರ್ಜೆ ಕ್ರಿಕೆಟ್ ಶೆಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ಸೌತ್ ಆಸ್ಟ್ರೇಲಿಯಾವನ್ನು ಫಿಲಿಫ್ ಹ್ಯೂಸ್ ಪ್ರತಿನಿಧಿಸುತ್ತಿದ್ದರು. 2014ರ ನವೆಂಬರ್ 25ರಂದು ನ್ಯೂ ಸೌಥ್‌ವೇಲ್ಸ್ ತಂಡದ ವಿರುದ್ದ ಪಂದ್ಯ ನಡೆಯುತ್ತಿತ್ತು. ಈ ಪಂದ್ಯದಲ್ಲಿ ಬೌನ್ಸರ್ ತಲೆಯ ಹಿಂಬಾಗಕ್ಕೆ ಬಡಿದು ಫಿಲಿಫ್ ಹ್ಯೂಸ್ ಅಲ್ಲೇ ಕುಸಿದು ಬಿದ್ದಿದ್ದರು. ತಕ್ಷಣವೇ ಆಸ್ಪ್ತ್ರೆಗೆ ದಾಖಲಿಸಲಾಯಿತಾದರೂ ಗಂಭೀರವಾಗಿ ತಲೆಗೆ ಪೆಟ್ಟು ಬಿದ್ದಿದ್ದ ಕಾರಣ ಮಿದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಎರಡು ಡಿನಗಳ ಬಳಿಕ ಅಂದರೆ ನವೆಂಬರ್ 27ರಂದು ಹ್ಯೂಸ್ ಮೃತಪಟ್ಟಿದ್ದರು.

ಕೋವಿಡ್ ಪರೀಕ್ಷೆಯಲ್ಲಿ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಆಟಗಾರರು ಪಾಸ್ಕೋವಿಡ್ ಪರೀಕ್ಷೆಯಲ್ಲಿ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಆಟಗಾರರು ಪಾಸ್

ಫಿಲಿಫ್ ಹ್ಯೂಸ್ ತಮ್ಮ 26ನೇ ಹುಟ್ಟುಹಬ್ಬಕ್ಕಿಂತ ಮೂರೇ ದಿನಗಳ ಹಿಂದೆ ಉಸಿರು ನಿಲ್ಲಿಸಿದ್ದರು. 2009ರಲ್ಲಿ ಆಸ್ಟ್ರೇಲಿಯಾ ಪರವಾಗಿ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಫಿಲಿಫ್ ಹ್ಯೂಸ್ 26 ಟೆಸ್ಟ್ ಹಾಗೂ 24 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.

ಮೊದಲನೇ ಏಕದಿನ ಪಂದ್ಯಕ್ಕೂ ಮುನ್ನ ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರು ಫಿಲಿಫ್ ಹ್ಯೂಸ್ ನೆನಪಿನಲ್ಲಿ 63 ಸೆಕೆಂಡ್‌ಗಳ ಕಾಲ ಚಪ್ಪಾಳೆ ತಟ್ಟುವ ನಿರೀಕ್ಷೆಯಿದೆ. ಫಿಲಿಫ್ ಹ್ಯೂಸ್ ತಮ್ಮ ತಂಡದ ಪರವಾಗಿ ಅಂತಿಮ ಪಂದ್ಯದಲ್ಲಿ 63 ರನ್ ಗಳಿಸಿ ಔಟಾಗದೆ ಉಳಿದಿದ್ದರು.

Story first published: Wednesday, November 25, 2020, 16:49 [IST]
Other articles published on Nov 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X