ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫುಟ್ಬಾಲ್: 4 ದಶಕದ ಬಳಿಕ ಭಾರತದಲ್ಲಿ ನಡೆಯಲಿದೆ ಮಹಿಳಾ ಏಷ್ಯನ್ ಕಪ್

India bags right to host Womens Asian Cup 2022

ಬರೊಬ್ಬರಿ 4 ದಶಕದ ನಂತರ ಭಾರತ ಪ್ರಮುಖ ಫುಟ್ಬಾಲ್ ಕ್ರೀಡಾಕೂಟವೊಂದನ್ನು ಆಯೋಜನೆ ಮಾಡಲಿದೆ. 2022 ರ ಮಹಿಳಾ ಏಷ್ಯನ್ ಕಪ್ ಆತಿಥ್ಯ ಭಾರತಕ್ಕೆ ಸಿಕ್ಕಿದೆ. 1979ರಲ್ಲಿ ಮೊದಲ ಬಾರಿಗೆ ಇದೇ ಟೂರ್ನಿಯನ್ನು ಭಾರತ ಆಯೋಜನೆ ಮಾಡಿತ್ತು. ಶುಕ್ರವಾರ ನಡೆದ ಏಷ್ಯನ್ ಫುಟ್ಬಾಲ್ ಒಕ್ಕೂಟ(ಎಎಫ್‌ಸಿ )ಮಹಿಳಾ ಫುಟ್‌ಬಾಲ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

"ಎಎಫ್‌ಸಿ ಮಹಿಳಾ ಏಷ್ಯನ್ ಕಪ್ 2022 ಫೈನಲ್‌ಗಳ ಆತಿಥೇಯ ಹಕ್ಕುಗಳನ್ನು ಸಮಿತಿಯು ಅಖಿಲ ಭಾರತ ಫುಟ್‌ಬಾಲ್ ಒಕ್ಕೂಟಕ್ಕೆ ನೀಡಿದೆ" ಪತ್ರದ ಮೂಲಕ ಸ್ಪಷ್ಟಪಡಿಸಲಾಗಿದೆ. ಅಖಿಲ ಭಾರತ ಫುಟ್ಬಾಲ್ ಒಕ್ಕೂಟಕ್ಕೆ ಬರೆದ ಪತ್ರದಲ್ಲಿ, ಎಎಫ್‌ಸಿಯ ಪ್ರಧಾನ ಕಾರ್ಯದರ್ಶಿ ಡಾಟೊ ವಿಂಡ್ಸರ್ ಜಾನ್ ಇದನ್ನು ತಿಳಿಸಿದ್ದಾರೆ. ಪಂದ್ಯಾವಳಿಯು 2022ರ ದ್ವಿತೀಯಾರ್ಧದಲ್ಲಿ ನಡೆಯಲಿದೆ.

ಟೆನಿಸ್ ದಿಗ್ಗಜ ಪೇಸ್‌ಗೆ 100ನೇ ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲಿ ಪಾಲ್ಗೊಳ್ಳುವಾಸೆಟೆನಿಸ್ ದಿಗ್ಗಜ ಪೇಸ್‌ಗೆ 100ನೇ ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲಿ ಪಾಲ್ಗೊಳ್ಳುವಾಸೆ

ಭಾರತಕ್ಕೆ ಮಹಿಳಾ ಏಷ್ಯನ್ ಕಪ್ ಆಯೋಜನೆಯ ಆತಿಥ್ಯ ಸಿಕ್ಕಿದ್ದಕ್ಕೆ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್(ಎಐಎಫ್‌ಎಫ್)ನ ಅಧ್ಯಕ್ಷ ಪ್ರಂಉಲ್ ಪಟೇಲ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಟೂರ್ನಿ ಆಯೋಜನೆಗೆ ಭಾರತವನ್ನು ಆಯ್ಕೆ ಮಾಡಿದ್ದಕ್ಕೆ ಏಷ್ಯನ್ ಒಕ್ಕೂಟಕ್ಕೆ ಧನ್ಯವಾದ ತಿಳಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಈ ಪಂದ್ಯಾವಳಿಯಲ್ಲಿ 8 ತಂಡಗಳು ಭಾಗವಹಿಸುತ್ತಿತ್ತು. ಆದರೆ ಈ ಬಾರಿ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. 12 ತಂಡಗಳು ಪ್ರಶಸ್ತಿಗಾಗಿ ಕಾದಾಟವನ್ನು ನಡೆಸಲಿದೆ. 1979ರಲ್ಲಿ ಭಾರತದಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾರತ ರನ್ನರ್ಸ್ ಅಪ್ ಸ್ಥಾನವನ್ನು ಪಡೆದುಕೊಂಡಿತ್ತು.

Story first published: Saturday, June 6, 2020, 10:14 [IST]
Other articles published on Jun 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X