ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಬೌಂಡರಿ ಕೌಂಟ್' ಟೀಕಿಸಿ ಬೇರೆಯೇ ಸಲಹೆಯಿತ್ತ ಭಾರತದ ಬೌಲಿಂಗ್ ಕೋಚ್

India bowling coach Bharat Arun criticises boundary count rule

ನವದೆಹಲಿ, ಜುಲೈ 22: ಐಸಿಸಿ ವಿಶ್ವಕಪ್ 2019ರ ಫೈನಲ್ ಪಂದ್ಯದಲ್ಲಿ ಬೌಂಡರಿ ಸಂಖ್ಯೆಗಳ ಆಧಾರದಲ್ಲಿ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಆಗಿ ಘೋಷಿಸಿದ್ದನ್ನು ಭಾರತದ ಬೌಲಿಂಗ್ ಕೋಚ್ ಭರತ್ ಅರುಣ್ ಟೀಕಿಸಿದ್ದಾರೆ. ಇಂಥ ಸಂದರ್ಭಗಳಲ್ಲಿ ವಿಜೇತ ತಂಡ ಗುರುತಿಸಲು ಬೇರೆ ವಿಧಾನ ಪಾಲಿಸಲು ಅವರು ಸಲಹೆ ನೀಡಿದ್ದಾರೆ.

ರುತುರಾಜ್‌, ಶುಭ್‌ಮಾನ್‌ ಜೊತೆಯಾಟಕ್ಕೆ ಶರಣೆಂದ ವೆಸ್ಟ್ ಇಂಡೀಸ್ 'ಎ'ರುತುರಾಜ್‌, ಶುಭ್‌ಮಾನ್‌ ಜೊತೆಯಾಟಕ್ಕೆ ಶರಣೆಂದ ವೆಸ್ಟ್ ಇಂಡೀಸ್ 'ಎ'

ಕ್ರಿಕೆಟ್ ಕಾಶಿ ಎಂದು ಕರೆಯಲ್ಪಡುವ ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಎರಡೂ ತಂಡಗಳೂ 241 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿಕೊಂಡಿದ್ದವು. ಅನಂತರ ನಡೆದ ಸೂಪರ್ ಓವರ್‌ನಲ್ಲೂ ಇತ್ತಂಡಗಳು 15 ರನ್‌ಗಳ ಸಮಬಲ ಸಾಧಿಸಿದ್ದವು.

ಕ್ರಿಕೆಟ್‌: ವಿಂಡೀಸ್‌ ಪ್ರವಾಸಕ್ಕೆ ಆಯ್ಕೆಯಾಗದ ನತದೃಷ್ಟರಲ್ಲಿ ಕನ್ನಡಿಗರಿಬ್ಬರು!ಕ್ರಿಕೆಟ್‌: ವಿಂಡೀಸ್‌ ಪ್ರವಾಸಕ್ಕೆ ಆಯ್ಕೆಯಾಗದ ನತದೃಷ್ಟರಲ್ಲಿ ಕನ್ನಡಿಗರಿಬ್ಬರು!

ಆದರೆ ಬೌಂಡಿರಿ ಸಂಖ್ಯೆಗಳ ನಿಯಮವನ್ನು ಅನುಸರಿಸಿ ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡನ್ನು ವಿಜೇತ ತಂಡವೆಂದು ಘೋಷಿಸಲಾಯ್ತು. ಇಂಗ್ಲೆಂಡ್ ಚೊಚ್ಚಲ ಟ್ರೋಫಿ ಗೆದ್ದು ಇತಿಹಾಸ ಬರೆಯಿತಾದರೂ ಕೇನ್ ವಿಲಿಯಮ್ಸನ್ ಬಳಗದ ಚೊಚ್ಚಲ ವಿಶ್ವಕಪ್ ಟ್ರೋಫಿಯ ಕನಸು ಮಣ್ಣುಪಾಲಾಗಿತ್ತು. ಹೀಗಾಗಿ ಬೌಂಡರಿ ಕೌಂಟ್ ನಿಯಮಕ್ಕೆ ಕ್ರಿಕೆಟ್ ವಲಯದಿಂದ ಟೀಕೆಯೂ ವ್ಯಕ್ತವಾಗಿತ್ತು.

ಆರ್ಮಿಯಲ್ಲಿ ಸೇವೆ ಸಲ್ಲಿಸುವ ಧೋನಿ ಕೋರಿಕೆಗೆ ಪ್ರತಿಕ್ರಿಯಿಸಿದ ಸೇನೆಆರ್ಮಿಯಲ್ಲಿ ಸೇವೆ ಸಲ್ಲಿಸುವ ಧೋನಿ ಕೋರಿಕೆಗೆ ಪ್ರತಿಕ್ರಿಯಿಸಿದ ಸೇನೆ

'ಸಚಿನ್ ತೆಂಡೂಲ್ಕರ್ ಹೇಳಿದ ಒಂದು ಹೆಚ್ಚುವರಿ ಓವರ್‌ ವಿಧಾನವನ್ನು ನಾನು ಒಪ್ಪಿದ್ದೇನೆ. ರನ್ ಮೂಲಕ ವಿಜೇತ ತಂಡ ಗುರುತಿಸಲು ಇನ್ನೂ ಅನೇಕ ವಿಧಾನಗಳಿರುವಾಗಲೂ ಯಾಕೆ ಬೌಂಡರಿ ಕೌಂಟ್ ವಿಧಾನವನ್ನು ನೆಚ್ಚಿಕೊಂಡಿದ್ದಾರೆ? ವಿಕೆಟ್ ಪತನದ ಮೂಲಕ ವಿಜೇತರನ್ನು ಗುರುತಿಸೋದೂ ಅತ್ಯುತ್ತಮ ವಿಧಾನ,' ಎಂದು ಭರತ್ ಅರುಣ್ ಸ್ಪೋರ್ಟ್ಸ್ ಸ್ಟಾರ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ವಿಶ್ವಕಪ್: ಧವನ್ ಜಾಗಕ್ಕೆ ಪಂತ್‌ ತಂದಿದ್ದೇಕೆಂದು ಬಾಯ್ಬಿಟ್ಟ ಎಂಎಸ್‌ಕೆ ಪ್ರಸಾದ್ವಿಶ್ವಕಪ್: ಧವನ್ ಜಾಗಕ್ಕೆ ಪಂತ್‌ ತಂದಿದ್ದೇಕೆಂದು ಬಾಯ್ಬಿಟ್ಟ ಎಂಎಸ್‌ಕೆ ಪ್ರಸಾದ್

ಸೆಮಿಫೈನಲ್ ಹಂತದಲ್ಲಿ ಟೂರ್ನಿಯ ಅಂಕಪಟ್ಟಿಯ ಅಗ್ರ ಎರಡರಲ್ಲಿ ಗುರುತಿಸಿಕೊಂಡ ತಂಡಗಳಿಗೆ ಹೆಚ್ಚಿನ ಅನುಕೂಲ ಒದಗಿಸಬೇಕು. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಅಗ್ರ ಎರಡು ಸ್ಥಾನಿಗಳಿಗೆ ಹೆಚ್ಚಿನ ಅವಕಾಶಗವಿರುವಂತೆ ವಿಶ್ವಕಪ್‌ನಲ್ಲೂ ನಿಯಮ ತರಬೇಕೆಂದು ಭರತ್ ಸಲಹೆ ನೀಡಿದ್ದಾರೆ.

Story first published: Monday, July 22, 2019, 15:29 [IST]
Other articles published on Jul 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X