ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ನಿರ್ಮಿಸಿದ್ದ ಟಿ20ಐ ವಿಶ್ವದಾಖಲೆ ಮುರಿದ ಟೀಮ್ ಇಂಡಿಯಾ!

India break Australia’s world record with massive win over Bangladesh

ರಾಜ್‌ಕೋಟ್‌, ನವೆಂಬರ್ 9: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ದೆಹಲಿಯಲ್ಲಿ ನಡೆದಿದ್ದ ಟಿ20ಐ ಪಂದ್ಯದಲ್ಲಿ ಭಾರತ ಸೋತಿದ್ದರಿಂದ, ಬಾಂಗ್ಲಾದೇಶ ತಂಡ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಚೊಚ್ಚಲ ಟಿ20 ಪಂದ್ಯ ಗೆದ್ದ ಇತಿಹಾಸ ನಿರ್ಮಿಸಿತ್ತು.

ಈ ದಿನಗಳ 'ಸಿಕ್ಸರ್ ಕಿಂಗ್' ರೋಹಿತ್ ಶರ್ಮಾ ಎನ್ನುತ್ತಿವೆ ಅಂಕಿ-ಅಂಶಗಳು!ಈ ದಿನಗಳ 'ಸಿಕ್ಸರ್ ಕಿಂಗ್' ರೋಹಿತ್ ಶರ್ಮಾ ಎನ್ನುತ್ತಿವೆ ಅಂಕಿ-ಅಂಶಗಳು!

ರಾಜ್‌ಕೋಟ್‌ನಲ್ಲಿ ನಡೆದಿದ್ದ ಇತ್ತಂಡಗಳ ದ್ವಿತೀಯ ಪಂದ್ಯವನ್ನೂ ಟೀಮ್ ಇಂಡಿಯಾ ಸೋತಿದ್ದರೆ, ರೋಹಿತ್ ಶರ್ಮಾ ಪಡೆ 3 ಪಂದ್ಯಗಳ ಟಿ20 ಸರಣಿ ಸೋಲಿನ ಮುಖಭಂಗ ಅನುಭವಿಸಬೇಕಾಗಿತ್ತು. ಆದರೆ ಶರ್ಮಾ ಸ್ಫೋಟಕ ಬ್ಯಾಟಿಂಗ್‌, ತಂಡವನ್ನು ಗೆಲ್ಲಿಸಿಕೊಟ್ಟಿತ್ತು.

ಅಂಪೈರ್ ಎಡವಟ್ಟಿಗೆ ತಾಳ್ಮೆ ಕಳೆದುಕೊಂಡ ರೋಹಿತ್ ಶರ್ಮಾ: ವಿಡಿಯೋಅಂಪೈರ್ ಎಡವಟ್ಟಿಗೆ ತಾಳ್ಮೆ ಕಳೆದುಕೊಂಡ ರೋಹಿತ್ ಶರ್ಮಾ: ವಿಡಿಯೋ

ದ್ವಿತೀಯ ಪಂದ್ಯದಲ್ಲಿ ಬಾಂಗ್ಲಾವನ್ನು 8 ವಿಕೆಟ್‌ಗಳಿಂದ ಮಣಿಸಿರುವ ಭಾರತ, ಆಸ್ಟ್ರೇಲಿಯಾ ಹೆಸರಿನಲ್ಲಿದ್ದ ಟಿ20ಐ ವಿಶ್ವದಾಖಲೆಯೊಂದನ್ನು ಮುರಿದಿದೆ.

ರೋಹಿತ್ ಆಕರ್ಷಕ ಆಟ

ರೋಹಿತ್ ಆಕರ್ಷಕ ಆಟ

ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ ಬದಲಾಗಿ ಭಾರತದ ನಾಯಕತ್ವ ವಹಿಸಿದ್ದ ರೋಹಿತ್ ಶರ್ಮಾ, ರಾಜ್‌ಕೋಟ್‌ನಲ್ಲಿ ಸ್ಫೋಟಕ ಅರ್ಧ ಶತಕ (85 ರನ್, 43 ಎಸೆತ) ಬಾರಿಸಿದ್ದರು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಬಾಂಗ್ಲಾ 20 ಓವರ್‌ಗೆ 6 ವಿಕೆಟ್ ಕಳೆದು 153 ರನ್ ಬಾರಿಸಿದ್ದರೆ, ಭಾರತ 14.4 ಓವರ್‌ಗೆ 2 ವಿಕೆಟ್‌ ಕಳೆದು 154 ರನ್ ಮಾಡಿತ್ತು.

ಚೇಸಿಂಗ್‌ನಲ್ಲಿ 41ನೇ ಜಯ

ಚೇಸಿಂಗ್‌ನಲ್ಲಿ 41ನೇ ಜಯ

ದೆಹಲಿ ಪಂದ್ಯವನ್ನು ಗೆದ್ದಿದ್ದ ಬಾಂಗ್ಲಾ, ಅದಕ್ಕೂ ಹಿಂದೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತದ ವಿರುದ್ಧ ಲಭಿಸಿದ್ದ ಸತತ 8 ಸೋಲುಗಳ ಕೆಟ್ಟ ದಾಖಲೆಯನ್ನು ಕೊನೆಗೊಳಿಸಿತ್ತು. ರಾಜ್‌ಕೋಟ್‌ನಲ್ಲಿ ಭಾರತ ದಾಖಲಿಸಿದ್ದು ಅಂತಾರಾಷ್ಟ್ರೀಯ ಟಿ20ಯಲ್ಲಿ ಚೇಸಿಂಗ್‌ನಲ್ಲಿ ಲಭಿಸಿದ 41ನೇ ಜಯ.

ಆಸೀಸ್ ದಾಖಲೆ ಬದಿಗೆ

ಆಸೀಸ್ ದಾಖಲೆ ಬದಿಗೆ

ಅಂತಾರಾಷ್ಟ್ರೀಯ ಟಿ20ಯಲ್ಲಿ ಚೇಸಿಂಗ್‌ ವೇಳೆ ಹೆಚ್ಚಿನ ಪಂದ್ಯ ಗೆದ್ದ ದಾಖಲೆಯನ್ನು ಈ ಹಿಂದೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಹಂಚಿಕೊಂಡಿದ್ದವು. ಎರಡೂ ತಂಡಗಳು 40 ಪಂದ್ಯಗಳನ್ನು ಚೇಸಿಂಗ್‌ನಲ್ಲಿ ಗೆದ್ದಿದ್ದವು. ಬಾಂಗ್ಲಾ ವಿರುದ್ಧದ ದ್ವಿತೀಯ ಟಿ20 ಗೆಲುವಿನೊಂದಿಗೆ ಭಾರತ ಒಟ್ಟು 41 ಟಿ20ಐ ಚೇಸಿಂಗ್‌ ಗೆಲುವುಗಳನ್ನು ದಾಖಲಿಸಿದೆ. ಹೀಗಾಗಿ ಆಸ್ಟ್ರೇಲಿಯಾ ದಾಖಲೆ ಬದಿಗೆ ಸರಿದಿದೆ.

ಚೇಸಿಂಗ್‌ನಲ್ಲಿ ಭಾರತ ಬೆಸ್ಟ್

ಚೇಸಿಂಗ್‌ನಲ್ಲಿ ಭಾರತ ಬೆಸ್ಟ್

ಟಿ20ಐ ಚೇಸಿಂಗ್‌ನಲ್ಲಿ ಅತ್ಯಧಿಕ ಪಂದ್ಯಗಳನ್ನು ಗೆದ್ದು ಭಾರತ, ಆಸ್ಟ್ರೇಲಿಯಾವನ್ನು ಹಿಂದಿಕ್ಕಿದ್ದಷ್ಟೇ ಅಲ್ಲ, ಟಿ20ಐ ಚೇಸಿಂಗ್‌ನಲ್ಲಿ ಗೆಲುವಿನ ಅತ್ಯುತ್ತಮ ಶೇಕಡಕ್ಕಾಗಿಯೂ ದಾಖಲೆ ನಿರ್ಮಿಸಿದೆ. ಭಾರತ 61 ಚೇಸಿಂಗ್ ಪಂದ್ಯಗಳಲ್ಲಿ 41 ಗೆಲುವು ಕಂಡಿದ್ದರೆ, ಆಸ್ಟ್ರೇಲಿಯಾ 69 ಪಂದ್ಯಗಳಲ್ಲಿ 40 ಜಯದ ದಾಖಲೆ ಹೊಂದಿದೆ.

Story first published: Friday, November 8, 2019, 19:23 [IST]
Other articles published on Nov 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X