ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದಿನ 5 ವರ್ಷಗಳ ಕಾಲ ಪಾಂಡ್ಯ ಭಾರತ ತಂಡದಲ್ಲಿರಬಲ್ಲರು: ಕೊಹ್ಲಿ

India can bank on match-winner Pandya for next five years: Virat Kohli

ಸಿಡ್ನಿ: ಮುಂದಿನ 4-5 ವರ್ಷಗಳ ಕಾಲ ತಂಡದಲ್ಲಿ ಉಳಿಸಿಕೊಳ್ಳಬೇಕಾದ ಪ್ರತಿಭಾನ್ವಿತ ಆಟಗಾರ ಹಾರ್ದಿಕ್ ಪಾಂಡ್ಯ ಅನ್ನೋದನ್ನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅರಿತುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟಿ20ಐನಲ್ಲಿ ಭಾರತ ತಂಡ ರೋಚಕ ಗೆಲುವು ದಾಖಲಿಸುವಲ್ಲಿ ಪ್ರಮುಖ ಕಾರಣರಾದ ಪಾಂಡ್ಯ ಅವರನ್ನು ಕೊಹ್ಲಿ ಶ್ಲಾಘಿಸಿದ್ದಾರೆ.

ಆಸ್ಟ್ರೇಲಿಯಾ ನೆಲದಲ್ಲಿ ಯಾರೂ ಮಾಡದ ವಿಶಿಷ್ಠ ದಾಖಲೆ ಬರೆದ ಕೊಹ್ಲಿ!ಆಸ್ಟ್ರೇಲಿಯಾ ನೆಲದಲ್ಲಿ ಯಾರೂ ಮಾಡದ ವಿಶಿಷ್ಠ ದಾಖಲೆ ಬರೆದ ಕೊಹ್ಲಿ!

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾನುವಾರ (ಡಿಸೆಂಬರ್ 6) ನಡೆದ ಪಂದ್ಯದಲ್ಲಿ ಭಾರತದ ಗೆಲುವಿಗೆ ಕೊನೇ ಎರಡು ಓವರ್‌ಗಳಲ್ಲಿ 25 ರನ್‌ಗಳು ಬೇಕಿತ್ತು. ಅಂತಿಮ ಓವರ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಚಚ್ಚಿದ್ದ ಆಲ್ ರೌಂಡರ್ ಪಾಂಡ್ಯ ಭಾರತದ ಗೆಲುವನ್ನು ಬರೆದಿದ್ದರು. ಕೊಹ್ಲಿ ಪಡೆ ಪಂದ್ಯದಲ್ಲಿ 2 ಎಸೆತ ಬಾಕಿಯಿರುವಾಗಲೇ 6 ವಿಕೆಟ್‌ ಗೆಲುವನ್ನಾಚರಿಸಿತ್ತು.

'ಹಾರ್ದಿಕ್ ಪಾಂಡ್ಯ ಒಬ್ಬ ನೈಸರ್ಗಿಕ ಪ್ರತಿಭೆ. ಕೆಲವು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಪಂದ್ಯಗಳು ಮತ್ತು ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವುದರಿಂದ ಕೊಂಚ ಅನುಭವಿಯಾಗಿದ್ದಾರೆ. ಮುಂದಿನ ನಾಲ್ಕು-ಐದು ವರ್ಷಗಳ ಕಾಲ ತಂಡದಲ್ಲೇ ಉಳಿಸಿಕೊಳ್ಳಬಲ್ಲ ಮಧ್ಯಮ ಕ್ರಮಾಂಕದ ಆಟಗಾರ ಅವರನ್ನೋದು ಅವರಿಗೆ ಗೊತ್ತಾಗಿದೆ,' ಎಂದು ಕೊಹ್ಲಿ ಹೇಳಿದ್ದಾರೆ.

ಎಂಎಸ್ ಧೋನಿ ನೆನಪಿಸಿದ ಮ್ಯಾಥ್ಯೂ ವೇಡ್: ವೈರಲ್ ವಿಡಿಯೋಎಂಎಸ್ ಧೋನಿ ನೆನಪಿಸಿದ ಮ್ಯಾಥ್ಯೂ ವೇಡ್: ವೈರಲ್ ವಿಡಿಯೋ

ಭಾನುವಾರದ ಪಂದ್ಯದಲ್ಲಿ 22 ಎಸೆತಗಳನ್ನು ಎದುರಿಸಿದ ಹಾರ್ದಿಕ್ 42 ರನ್ ಕೊಡುಗೆ ನೀಡಿದ್ದರು. ಆಸ್ಟ್ರೇಲಿಯಾ ನೀಡಿದ್ದ 194 ರನ್ ಗುರಿ ಬೆನ್ನಟ್ಟಿದ್ದ ಭಾರತ 19.4ನೇ ಓವರ್‌ಗೆ 195 ರನ್ ಬಾರಿಸಿ ಸರಣಿ ವಶವಾಗಿಸಿಕೊಂಡಿತ್ತು. ಹಾರ್ದಿಕ್ ಪಂದ್ಯಶ್ರೇಷ್ಠರೆನಿಸಿದ್ದರು.

Story first published: Monday, December 7, 2020, 18:10 [IST]
Other articles published on Dec 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X