ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final : ನ್ಯೂಜಿಲೆಂಡ್‌ಗೆ ಮುಂಚಿತವಾಗಿ ಎಚ್ಚರಿಕೆ ನೀಡಿದ ಪೂಜಾರ

 India can beat any side anywhere says Cheteshwar Pujara
Pujara WTC ಫೈನಲ್ ಪಂದ್ಯದ ಬಗ್ಗೆ ಹೇಳಿದ್ದೇನು | Oneindia Kannada

ಜೂನ್ 18ರಿಂದ ಇಂಗ್ಲೆಂಡ್‌ನ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಬಿಸಿಸಿಐ ಈಗಾಗಲೇ 20 ಆಟಗಾರರ ಭಾರತ ತಂಡವನ್ನು ಪ್ರಕಟಿಸಿದೆ. ಅತ್ತ 20 ಆಟಗಾರರನ್ನೊಳಗೊಂಡ ನ್ಯೂಜಿಲೆಂಡ್ ತಂಡ ಈಗಾಗಲೇ ಇಂಗ್ಲೆಂಡ್ ತಲುಪಿದೆ.

ಸಿಹಿಸುದ್ದಿ: ಟೀಮ್ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್!ಸಿಹಿಸುದ್ದಿ: ಟೀಮ್ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್!

ಈ ನಡುವೆ ಭಾರತ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿ ಕುರಿತು ಮಾತನಾಡಿದ್ದಾರೆ. ಕಳೆದ ಬಾರಿ ಆಸ್ಟ್ರೇಲಿಯ ವಿರುದ್ಧ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಳನ್ನು ಜಯಗಳಿಸುವುದರ ಮೂಲಕ ಟೀಮ್ ಇಂಡಿಯಾ ತನ್ನ ಬಲಿಷ್ಠತೆಯನ್ನು ತೋರಿಸಿತ್ತು. ಈ ಎರಡೂ ಸರಣಿಗಳಲ್ಲಿ ಭಾರತದ ಪರ ಚೇತೇಶ್ವರ ಪೂಜಾರ ಉತ್ತಮ ಪ್ರದರ್ಶನವನ್ನು ನೀಡಿ ಮಿಂಚಿದ್ದರು.

 'ಇದೆಲ್ಲಾ ಬೇಡ ಸುಮ್ಮನೆ ಬೌಲಿಂಗ್ ಮಾಡು' ; ಶ್ರೀಶಾಂತ್‌ - ಧೋನಿ ನಡುವೆ ನಡೆದಿದ್ದ ಘಟನೆ ಬಿಚ್ಚಿಟ್ಟ ಉತ್ತಪ್ಪ 'ಇದೆಲ್ಲಾ ಬೇಡ ಸುಮ್ಮನೆ ಬೌಲಿಂಗ್ ಮಾಡು' ; ಶ್ರೀಶಾಂತ್‌ - ಧೋನಿ ನಡುವೆ ನಡೆದಿದ್ದ ಘಟನೆ ಬಿಚ್ಚಿಟ್ಟ ಉತ್ತಪ್ಪ

ಇದೀಗ ಮುಂಬರುವ ಟೆಸ್ಟ್ ಪಂದ್ಯಗಳ ಕುರಿತು ಮಾತನಾಡಿರುವ ಚೇತೇಶ್ವರ್ ಪೂಜಾರ ನ್ಯೂಜಿಲೆಂಡ್ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. 'ನಮ್ಮ ತಂಡ ತನ್ನದೇ ಆದ ಸಾಮರ್ಥ್ಯವನ್ನು ಹೊಂದಿದೆ, ಆ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನವನ್ನು ನೀಡಿದರೆ ಯಾವುದೇ ತಂಡದ ವಿರುದ್ಧವಾಗಲಿ ಹಾಗೂ ಯಾವುದೇ ದೇಶದಲ್ಲಾಗಲಿ ನಾವು ಗೆಲುವನ್ನು ಸಾಧಿಸುತ್ತೇವೆ' ಎಂದು ಚೇತೇಶ್ವರ್ ಪೂಜಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿದ ಅವರು ಟೀಮ್ ಇಂಡಿಯಾ ಇತ್ತೀಚೆಗೆ ನಡೆದ ಟೆಸ್ಟ್ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಜಯಗಳಿಸಿದೆ, ಹೀಗಾಗಿ ತಂಡದಲ್ಲಿನ ಎಲ್ಲಾ ಆಟಗಾರರಿಗೂ ಉತ್ತಮ ಅನುಭವವಿದ್ದು ಮುಂಬರುವ ಪಂದ್ಯಗಳಲ್ಲಿಯೂ ಸಹ ಗೆಲುವು ಸಾಧಿಸುತ್ತೇವೆ ಎಂದು ಪೂಜಾರಾ ಹೇಳಿದ್ದಾರೆ.

Story first published: Thursday, May 20, 2021, 16:49 [IST]
Other articles published on May 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X