ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ: ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ಟೀಮ್ ಇಂಡಿಯಾ

India create world record after 2nd match win over Sri Lanka in 2 match ODI series

ಶ್ರೀಲಂಕಾ ವಿರುದ್ಧದ ಏಕದಿನ ಎರಡನೇ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸುವ ಮೂಲಕ ಕೆಲ ವಿಶೇಷ ಮೈಲಿಗಲ್ಲುಗಳು ದಾಖಲಾಗಿವೆ. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ಶಿಖರ್ ಧವನ್ ನೇತೃತ್ವದ ಭಾರತ ತಂಡ ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ ಭಾರತೀಯ ಕ್ರಿಕೆಟ್ ತಂಡ ಸತತ 9ನೇ ದ್ವಿಪಕ್ಷೀಯ ಸರಣಿಯನ್ನು ಗೆದ್ದುಕೊಂಡಂತಾಗಿದೆ.

ಇನ್ನು ಶ್ರೀಲಂಕಾ ಭಾರತ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಮಂಗಳವಾರ ಶ್ರೀಲಂಕಾ ತಂಡದ ವಿರುದ್ಧ ಭಾರತ ಸತತ 10ನೇ ಗೆಲುವನ್ನು ಸಾಧಿಸಿದೆ. ಈ ಗೆಲುವಿನ ಮೂಲಕ ವಿಶ್ವದಾಖಲೆಯೊಂದನ್ನು ಭಾರತೀಯ ಕ್ರಿಕೆಟ್ ತಂಡ ಬರೆದಿದೆ. ಇದು ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಭಾರತ ದಾಖಲಿಸಿದ 93ನೇ ಗೆಲುವಾಗಿದೆ. ಯಾವುದೇ ಒಂದು ಎದುರಾಳಿಯ ವಿರುದ್ಧ ಕ್ರಿಕೆಟ್ ತಂಡವೊಂದು ದಾಖಲಿಸಿದ ಅತಿ ಹೆಚ್ಚಿನ ಗೆಲುವು ಇದಾಗಿದೆ.

ಟೀಮ್ ಇಂಡಿಯಾ ಗೆಲುವಿನ ಸ್ಟಾರ್ ದೀಪಕ್ ಚಾಹರ್ ಹೊಸ ದಾಖಲೆ!ಟೀಮ್ ಇಂಡಿಯಾ ಗೆಲುವಿನ ಸ್ಟಾರ್ ದೀಪಕ್ ಚಾಹರ್ ಹೊಸ ದಾಖಲೆ!

Shikhar Dhawan ಈ ಆಟದಿಂದ ಕಲಿತ ಪಾಠ ಇದೇ | Oneindia Kannada

ಈವರೆಗೆ ಈ ದಾಖಲೆಯನ್ನು ಆಸ್ಟ್ರೇಲಿಯಾ ತನ್ನ ಹೆಸರಿನಲ್ಲಿ ಹೊಂದಿತ್ತು. ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ವಿರುದ್ಧ 92 ಏಕದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಈಗ ಭಾರತೀಯ ಕ್ರಿಕೆಟ್ ತಂಡ ಈ ದಾಖಲೆಯನ್ನು ಹಿಂದಿಕ್ಕಿ ತನ್ನ ಹೆಸರಿಗೆ ಬರೆಯುವಲ್ಲಿ ಯಶಸ್ವಿಯಾಗಿದೆ.

ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಟಾಸ್ ಗೆದ್ದು ಉತ್ತಮ ಆರಂಭವನ್ನು ಪಡೆದುಕೊಂಡಿತ್ತು. ಆದರೆ ಮಧ್ಯಮ ಕ್ರಮಾಂಕದ ಕೆಲ ಬ್ಯಾಟ್ಸ್‌ಮನ್‌ಗಳು ಮತ್ತೆ ವಿಫಲರಾದರು. ಆದರೆ ಕೆಳ ಕ್ರಮಾಂಕದಿಂದ ಮತ್ತೊಂದು ಉಪಯುಕ್ತ ಕೊಡುಗೆ ಶ್ರೀಲಂಕಾ ತಂಡಕ್ಕೆ ದೊರೆತ ಕಾರಣ ಭಾರತದ ವಿರುದ್ಧ 275 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತಿ.

ಶ್ರೀಲಂಕಾ ತಂಡ ನೀಡಿದ ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ಈ ಬಾರಿ ಆಘಾತ ಅನುಭವಿಸಿತು. ಶ್ರೀಲಂಕಾದ ಬೌಲಿಂಗ್‌ ದಾಳಿಗೆ ಭಾರತ ತಂಡ 116 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ನಂತರ ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ ಮತ್ತು ಕೆಳ ಕ್ರಮಾಂಕದಲ್ಲಿ ದೀಪಕ್ ಚಾಹರ್ ಹಾಗೂ ಭುವನೇಶ್ವರ್ ಕುಮಾರ್ ನೀಡಿದ ಪ್ರದರ್ಶನದಿಂದಾಗಿ ಭಾರತ ತಂಡ ಅಸಾಧ್ಯ ಗೆಲುವನ್ನು ಸಾಧ್ಯವಾಗಿಸಿತ್ತು.

Story first published: Wednesday, July 21, 2021, 16:40 [IST]
Other articles published on Jul 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X