"ಮಹತ್ವದ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸತತವಾಗಿ ವಿಫಲವಾಗುತ್ತಿದೆ"

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಟೂರ್ನಿಯುದ್ಧಕ್ಕೂ ಅದ್ಭುತವಾಗಿ ಪ್ರದರ್ಶನ ನೀಡಿ ನಂಬರ್ 1 ತಂಡವಾಗಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿತ್ತು ಟೀಮ್ ಇಂಡಿಯಾ. ಆದರೆ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಿದ ವಿರಾಟ್ ಕೊಹ್ಲಿ ಬಳಗ ಸೋಲನ್ನು ಕಂಡಿತು. ಈ ಮೂಲಕ ಮತ್ತೊಂದು ಪ್ರಮುಖ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಹಂತದಲ್ಲಿ ಹಿನ್ನೆಡೆ ಅನುಭವಿಸಿತು. ಈ ಬಗ್ಗೆ ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಆಟಗಾರ ಕಾರ್ಟ್ಲಿ ಆಂಬ್ರೋಸ್ ಪ್ರತಿಕ್ರಿಯೆ ನೀಡಿದ್ದಾರೆ.

"ಕಳೆದ 6-7 ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಫೈನಲ್ ಪಂದ್ಯಗಳಲ್ಲಿ ಅಥವಾ ಸೆಮಿ ಫೈನಲ್‌ನಲ್ಲಿ ಸೋಲು ಕಾಣುತ್ತಿದೆ. ಇದು ಯಾಕೆ ಎಂದು ನನಗೆ ಅಚ್ಚರಿಯಾಗುತ್ತದೆ, ಯಾಕೆಂದರೆ ಅವರು ಅದ್ಭುತವಾಗಿ ಪ್ರದರ್ಶನವನ್ನು ನೀಡುತ್ತಿದ್ದಾರೆ. ಆದರೆ ಮಹತ್ವದ ಘಟ್ಟಗಳಲ್ಲಿ ನಿರಂತರವಾಗಿ ವಿಫಲರಾಗುತ್ತಿದ್ದಾರೆ" ಎಂದು ಕಾರ್ಟ್ಲಿ ಆಂಬ್ರೋಸ್ ಯೂಟ್ಯೂಬ್ ಚಾನೆಲ್‌ನ ಕಾರ್ಯಕ್ರಮದಲ್ಲಿ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

ಮಿಥಾಲಿ ರಾಜ್, ಆರ್‌ ಅಶ್ವಿನ್ ಹೆಸರು ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಶಿಫಾರಸುಮಿಥಾಲಿ ರಾಜ್, ಆರ್‌ ಅಶ್ವಿನ್ ಹೆಸರು ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಶಿಫಾರಸು

"ಫೈನಲ್ ಅಥವಾ ಸೆಮಿ ಫೈನಲ್ ಎಂಬ ಕಾರಣಕ್ಕಾಗಿ ಅವರೇನಾದರೂ ತಮ್ಮ ಕಾರ್ಯತಂತ್ರಗಳಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುತ್ತಾರೆಯೇ? ಈ ಮೂಲಕ ತಮ್ಮನ್ನು ತಾವು ಒತ್ತಡಕ್ಕೆ ದೂಡಿಕೊಳ್ಳುವ ಸಂದರ್ಭವಿದೆಯೇ? ಹಾಗೇನಾದರು ಆಗುತ್ತಿದ್ದರೆ ಅದು ತಪ್ಪು. ಮಾಜಿ ಕ್ರಿಕೆಟಿಗನಾಗಿ ನಾನು ಹೇಳುವುದೇನೆಂದರೆ ನೀವು ಆ ಹಂತದವರೆಗೆ ಯಶಸ್ವಿಯಾಗಲು ನಿಮ್ಮ ಯೋಜನೆಗಳು ಕಾರಣ. ಅವುಗಳು ನಿಮ್ಮನ್ನು ಆ ಹಂತಕ್ಕೆ ತಲುಪಿಸುತ್ತವೆ. ಅದನ್ನೇ ನೀವು ಮುಂದುವರಿಸಬೇಕು ಹಾಗೂ ಅದನ್ನು ಉತ್ತಮಪಡಿಸಿಕೊಳ್ಳಬೇಕು" ಎಂದಿದ್ದಾರೆ ಕಾರ್ಟ್ಲಿ ಆಂಬ್ರೋಸ್

ಸೆಮಿ ಫೈನಲ್ ಅಥವಾ ಫೈನಲ್ ಪಂದ್ಯ ಎಂಬ ಕಾರಣಕ್ಕೆ ನೀವು ನಿಮ್ಮ ಆಟದ ಯೋಜನೆಗಳನ್ನು ಬದಲಾಯಿಸುವುದು ಬೇಕಾಗಿಲ್ಲ. ಹಾಗೆ ಮಾಡಿದರೆ ಅದು ಅವರಿಗಾಗುವ ನಷ್ಟ. ನೀವು ಅಲ್ಲಿಯವರೆಗೆ ಮಾಡಿದ್ದನ್ನು ಮುಂದುವರಿಸಿ. ಅದು ನಿಮಗೆ ಯಶಸ್ಸನ್ನು ನೀಡುತ್ತದೆ" ಎಂದು ವೆಸ್ಟ್ ಇಂಡೀಸ್‌ನ ದಿಗ್ಗಜ ಆಟಗಾರ ಸಲಹೆಯನ್ನು ನೀಡಿದ್ದಾರೆ.

ಕಣ್ಣೀರಿನೊಂದಿಗೆ ಮೈದಾನದಿಂದ ಹೊರ ನಡೆದ ಸೆರೆನಾ ವಿಲಿಯಮ್ಸ್: ವಿಡಿಯೋಕಣ್ಣೀರಿನೊಂದಿಗೆ ಮೈದಾನದಿಂದ ಹೊರ ನಡೆದ ಸೆರೆನಾ ವಿಲಿಯಮ್ಸ್: ವಿಡಿಯೋ

ಐಸಿಸಿ ವರ್ಲ್ಡ್ ಟಿ20 2014, ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2017 ಹಾಗೂ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಈ ಮೂರು ಮಹತ್ವದ ಟೂರ್ನಿಗಳಲ್ಲಿ ಭಾರತ ಫೈನಲ್ ಪ್ರವೇಶವನ್ನು ಮಾಡಿತ್ತು. ಆದರೆ ಈ ಮೂರು ಟೂರ್ನಿಯಲ್ಲಿಯೂ ಭಾರತ ರನ್ನರ್‌ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. 2013ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಭಾರತ ಯಾವುದೇ ಐಸಿಸಿ ಟ್ರೋಫಿಯನ್ನು ಗೆಲ್ಲಿವಲ್ಲಿ ಸಫಲವಾಗಿಲ್ಲ.

For Quick Alerts
ALLOW NOTIFICATIONS
For Daily Alerts
Story first published: Wednesday, June 30, 2021, 14:30 [IST]
Other articles published on Jun 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X