ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಮಾಧ್ಯಮಗಳ ಅಸಲಿಯತ್ತು ಬಿಚ್ಚಿಟ್ಟ ಕೆವಿನ್ ಪೀಟರ್ಸನ್!

India have put themselves in a position to secure a famous series win, says Kevin Pietersen

ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ನಾಲ್ಕನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತ ಗೆದ್ದರೂ ಡ್ರಾ ಮಾಡಿಕೊಂಡರೂ ಜನಪ್ರಿಯ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ. ಹಿಂದಿನ ಬಾರಿ ಅಂದರೆ 2018-19ರ ಸೀಸನ್‌ನಲ್ಲಿ ಈ ಟೆಸ್ಟ್ ಸರಣಿಯನ್ನು ಭಾರತ ಗೆದ್ದಿತ್ತು. ಹೀಗಾಗಿ ಈ ಬಾರಿಯೂ ಟ್ರೋಫಿ ತನ್ನಲ್ಲೇ ಉಳಿಸಿಕೊಳ್ಳುವತ್ತ ಭಾರತ ಎದುರು ನೋಡುತ್ತಿದೆ.

ಭಾರತ vs ಆಸ್ಟ್ರೇಲಿಯಾ: ಟೆಸ್ಟ್‌ನಲ್ಲೂ ಸ್ಮರಣೀಯ ಆರಂಭ ಮಾಡಿದ ಟಿ ನಟರಾಜನ್ಭಾರತ vs ಆಸ್ಟ್ರೇಲಿಯಾ: ಟೆಸ್ಟ್‌ನಲ್ಲೂ ಸ್ಮರಣೀಯ ಆರಂಭ ಮಾಡಿದ ಟಿ ನಟರಾಜನ್

ಸರಣಿಯ ಆರಂಭದಲ್ಲಿ ಮೊದಲ ಪಂದ್ಯದಲ್ಲಿ ಭಾರತದ ಪ್ರದರ್ಶನ ನೋಡಿದರೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ 4-0ಯಿಂದ ಆಸ್ಟ್ರೇಲಿಯಾದ ವಶವಾಗುತ್ತದೆ ಎಂದು ನಂಬಲಾಗಿತ್ತು. ಆದರೆ ಮೆಲ್ಬರ್ನ್ ಸ್ಟೇಡಿಯಂನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್‌ನಲ್ಲಿ ಭಾರತ 8 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿತ್ತು.

ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?

ಆ ಬಳಿಕ ಸಿಡ್ನಿಯಲ್ಲಿ ನಡೆದ ತೃತೀಯ ಪಂದ್ಯದಲ್ಲಿ ಭಾರತ ನೀಡಿದ್ದ ಪ್ರದರ್ಶನವಂತೂ ಎಂಥದ್ದೇ ಸಂದರ್ಭದಲ್ಲೂ ಟೀಮ್ ಇಂಡಿಯಾ ಸುಲಭಕ್ಕೆ ಬಿಟ್ಟುಕೊಡಲಾರದು ಎಂಬುದನ್ನು ಸಾರಿ ಹೇಳಿತ್ತು. ಆ ಪಂದ್ಯ ಡ್ರಾ ಆಗಿತ್ತು.

ಆಸ್ಟ್ರೇಲಿಯಾ ಗೆಲ್ಲುತ್ತದೆ ಅಂದುಕೊಂಡಿದ್ದರು

ಆಸ್ಟ್ರೇಲಿಯಾ ಗೆಲ್ಲುತ್ತದೆ ಅಂದುಕೊಂಡಿದ್ದರು

ಅದ್ಭುತ ಪ್ರದರ್ಶನದ ಬಳಿಕ ಸರಣಿಯ ಗತಿಯನ್ನೇ ಬದಲಿಸುತ್ತಿರುವ ಭಾರತೀಯರ ಪ್ರದರ್ಶನಕ್ಕೆ ಇಂಗ್ಲೆಂಡ್‌ನ ಮಾಜಿ ಕ್ರಿಕೆಟರ್ ಕೆವಿನ್ ಪೀಟರ್ಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಸರಣಿ ಆರಂಭದಲ್ಲಿ ಹೆಚ್ಚಿನ ಮಂದಿ ಸರಣಿಯನ್ನು 4-0ಯಿಂದ ಆಸ್ಟ್ರೇಲಿಯಾ ಗೆಲ್ಲುತ್ತದೆ ಎಂದು ಊಹಿಸುತ್ತಿದ್ದುದನ್ನು ನೋಡಿದ್ದೆ. ಮುಖ್ಯವಾಗಿ ಕೊಹ್ಲಿ ಮೊದಲ ಟೆಸ್ಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ ಎಂದು ತಿಳಿದ ಬಳಿಕ ಹೆಚ್ಚಿನ ಜನ ಸರಣಿಯಲ್ಲಿ ಆಸ್ಟ್ರೇಲಿಯಾ ಗೆಲ್ಲುತ್ತದೆ ಎಂದೇ ಹೇಳುತ್ತಿದ್ದರು,' ಎಂದು ಪೀಟರ್ಸನ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಮಾಧ್ಯಮಗಳ ಅಸಲಿಯತ್ತು

ಆಸ್ಟ್ರೇಲಿಯಾ ಮಾಧ್ಯಮಗಳ ಅಸಲಿಯತ್ತು

ಮಾತು ಮುಂದುವರೆಸಿದ ಪೀಟರ್ಸನ್, 'ಆದರೆ ಭಾರತೀಯರು ಜನಪ್ರಿಯ ಸರಣಿಯನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಆಸ್ಟ್ರೇಲಿಯನ್ನರ ಬಾಯಿ ಮುಚ್ಚಿಸಬೇಕಾದರೆ ಭಾರತ ಸರಣಿ ಗೆಲ್ಲಬೇಕು. ನಾವಿದನ್ನು ಕಳೆದ ಒಂದಿಷ್ಟು ಸೀಸನ್‌ಗಳಲ್ಲಿ ಮಾಡಿದ್ದೇವೆ. ಆಸ್ಟ್ರೇಲಿಯಾ ತಂಡ ಸೋಲಲಾರಂಭಿಸಿದ ಕೂಡಲೇ ಅಲ್ಲಿನ ಮೀಡಿಯಾಗಳು ತನ್ನದೇ ದೇಶದ ಆಟಗಾರರ ವಿರುದ್ಧ ಬರೆಯುವುದನ್ನು ನೋಡಲು ಅದ್ಭುತವಾಗಿರುತ್ತದೆ,' ಎಂದಿದ್ದಾರೆ.

ಟೀಮ್ ಇಂಡಿಯಾ ಗೆಲ್ಲುತ್ತದೆಯೇ?

ಟೀಮ್ ಇಂಡಿಯಾ ಗೆಲ್ಲುತ್ತದೆಯೇ?

ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದ ತೃತೀಯ ಟೆಸ್ಟ್‌ನಲ್ಲಿ ಭಾರತದ ಅದ್ಭುತ ಪ್ರದರ್ಶನದ ಬಳಿಕ ಈಗಾಗಲೇ ಟಿಮ್ ಪೈನ್ ಮತ್ತು ಬಳಗ ದೂರಲ್ಪಡಲಾರಂಭಿಸಿದೆ. ಕೊನೇಯ ಟೆಸ್ಟ್ ನಡೆಯುವ ಬ್ರಿಸ್ಬೇನ್‌ ಪಿಚ್ ಕೊಂಚ ಬೌನ್ಸಿ ಆಗಿದೆ. ಅದು ಆಸ್ಟ್ರೇಲಿಯಾದ ವೇಗಿಗಳ ದಾಳಿಗೆ ಹೆಚ್ಚು ಅನುಕೂಲಕರವಾಗಿದೆ. ಆದರೆ ಈಗಲೂ ಭಾರತ ಸರಣಿ ಗೆಲ್ಲಲು ಅವಕಾಶವಿದೆ ಎಂದು ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ. ನಾಲ್ಕನೇ ಟೆಸ್ಟ್‌ನಲ್ಲಿ ಮೊದಲನೇ ದಿನದಾಟದ ಅಂತ್ಯಕ್ಕೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ 87 ಓವರ್‌ಗೆ 5 ವಿಕೆಟ್ ಕಳೆದು 274 ರನ್ ಗಳಿಸಿತ್ತು.

Story first published: Friday, January 15, 2021, 17:46 [IST]
Other articles published on Jan 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X