ಗಾಬಾ ಕೋಟೆ ಭೇದಿಸಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ಟೀಮ್ ಇಂಡಿಯಾ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವನ್ನು ಸಾಧಿಸಿ ಐತಿಹಾಸಿಕ ಸರಣಿ ಗೆಲುವು ಸಾಧಿಸಿದೆ. ಈ ಮೂಲಕ ಕಳೆದ ಮೂರು ದಶಕಗಳಿಂದ ಅಬೇಧ್ಯವಾಗಿದ್ದ ಗಾಬಾದಲ್ಲಿ ಆಸ್ಟ್ರೇಲಿಯನ್ನರಿಗೆ ಮರೆಯಲಾಗದ ಸೋಲುಣಿಸಿದೆ.

1-1 ರಿಂದ ಸಮಬಲಗೊಂಡಿದ್ದ ಈ ಸರಣಿಯನ್ನು ಗೆಲ್ಲಬೇಕಾದರೆ ಎರಡು ತಂಡಗಳಿಗೂ ಈ ಪಂದ್ಯದ ಗೆಲುವು ಮುಖ್ಯವಾಗಿತ್ತು. ಆದರೆ ಈ ಪಂದ್ಯದಲ್ಲಿ ಸಂಪೂರ್ಣ ಹಿಡಿತವನ್ನು ಸಾಧಿಸಿದ ಟೀಮ್ ಇಂಡಿಯಾ ಅಂತಿಮ ಹಂತದವರೆಗೂ ಪಟ್ಟು ಸಡಿಲಿಸದೆ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಅಜಿಂಕ್ಯ ರಹಾನೆ ನೇತೃತ್ವದ ಟೀಮ್ ಇಂಡಿಯಾ ಗಾಬಾ ಅಂಗಳದಲ್ಲಿ ಆಸ್ಟ್ರೇಲಿಯಾ ಗೆಲುವಿನ ಸರಪಳಿಯನ್ನು ತುಂಡರಿಸಿದೆ.

ಪಂತ್, ಗಿಲ್, ಪೂಜಾರ ಅದ್ಭುತ ಬ್ಯಾಟಿಂಗ್ ಪ್ರದರ್ಶನ

ಪಂತ್, ಗಿಲ್, ಪೂಜಾರ ಅದ್ಭುತ ಬ್ಯಾಟಿಂಗ್ ಪ್ರದರ್ಶನ

ಟೀಮ್ ಇಂಡಿಯಾದ ಪರವಾಗಿ ರಿಷಭ್ ಪಂತ್, ಶುಬ್ಮನ್ ಗಿಲ್ ಚೇತೇಶ್ವರ್ ಪೂಜಾರ ತೋರಿದ ಬ್ಯಾಟಿಂಗ್ ಪ್ರದರ್ಶನ ಟೀಮ್ ಇಂಡಿಯಾದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಅದರಲ್ಲೂ ರಿಷಬ್ ಪಂತ್ ಪ್ರದರ್ಶಿಸಿದ ಸಮಯೋಚಿತ ಪ್ರದರ್ಶನ ಗೆಲುವನ್ನು ಖಾತ್ರಿ ಪಡಿಸಿತು.

ಶತಕದಂಚಿನಲ್ಲಿ ಎಡವಿದ ಗಿಲ್

ಶತಕದಂಚಿನಲ್ಲಿ ಎಡವಿದ ಗಿಲ್

ಅಂತಿಮ ದಿನದಾಟದಲ್ಲಿ ಭಾರತದ ಗೆಲುವಿಗೆ 324 ರನ್‌ಗಳ ಅಗತ್ಯವಿತ್ತು. ಇದನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ರೋಹಿತ್ ಶರ್ಮಾ ವಿಕೆಟನ್ನು ಅಗ್ಗಕ್ಕೆ ಕಳೆದುಕೊಂಡಿತು. ಆದರೆ ಬಳಿಕ ಜೊತೆಯಾದ ಶುಬ್ಮನ್ ಗಿಲ್ ಹಾಗೂ ಚೇತೇಶ್ವರ್ ಪೂಜಾರ ಎಚ್ಚರಿಕೆಯ ಆಟವನ್ನು ಪ್ರದರ್ಶಿಸಿದರು. ಈ ಜೋಡಿ 114 ರನ್‌ಗಳ ಜೊತೆಯಾಟವನ್ನು ನೀಡುವ ಮೂಲಕ ತಂಡವನ್ನು ಕುಸಿತದಿಂದ ಪಾರು ಮಾಡಿದರು. ಈ ಸಂದರ್ಭದಲ್ಲಿ ಶುಬ್ಮನ್ ಗಿಲ್ ಶತಕದಂಚಿನಲ್ಲಿ ಎಡವಿ 91 ರನ್‌ಗೆ ವಿಕೆಟ್ ಕಲೆದುಕೊಂಡರು.

ಪೂಜಾರ-ಪಂತ್ ಜುಗಲ್‌ಬಂದಿ

ಪೂಜಾರ-ಪಂತ್ ಜುಗಲ್‌ಬಂದಿ

ಬಳಿಕ ಅಜಿಂಕ್ಯ ರಹಾನೆ ಹಾಗೂ ಪೂಜಾರ ಉತ್ತಮ ಜೊತೆಯಾಟವನ್ನು ಪ್ರದರ್ಶಿಸಿದರು. ಈ ವೇಳೆ ರನ್ ಗತಿ ಏರಿಸುವ ಭರದಲ್ಲಿ ಅಜಿಂಕ್ಯ ರಹಾನೆ ತಮ್ಮ ವಿಕೆಟ್‌ಅನ್ನು ಕಳೆದುಕೊಂಡರು. ಬಳಿಕ ರಿಷಭ್ ಪಂತ್ ಹಾಗೂ ಚೇತೇಶ್ವರ್ ಮತ್ತೊಂದು ಉತ್ತಮ ಜೊತೆಯಾಟವನ್ನು ನೀಡುವಲ್ಲಿ ಯಶಸ್ವಿಯಾದರು. ಈ ವೇಳೆ ತಾಳ್ಮೆಯಿಂದ ಆಡುತ್ತಿದ್ದ ಪೂಜಾರ ತಮ್ಮ ವಿಕೆಟ್ ಕಳೆದುಕೊಂಡರು.

ಪಂತ್ ಸುಂದರ ಆಟ

ಪಂತ್ ಸುಂದರ ಆಟ

ಪೂಜಾರ ವಿಕೆಟ್ ಒಪ್ಪಿಸಿದ ಬಳಿಕ ಮಯಾಂಕ್ ಅಗರ್ವಾಲ್ ಪಂತ್ ಜೊತೆ ಸೇರಿಕೊಂಡರು. ಆದರೆ ಅಗರ್ವಾಲ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆದರೆ ನಂತರ ಬಂದ ವಾಶಿಂಗ್ಟನ್ ಸುಂದರ್ ತಂಡವನ್ನು ಪಂತ್ ಜೊತೆಗೆ ಸೇರಿ ಜಯದತ್ತ ಮುನ್ನಡೆಸಿದರು. ಈ ವೇಳೆ ಸುಂದರ್ ವಿಕೆಟ್ ಕಳೆದುಕೊಂದರು.

ಐತಿಹಾಸಿಕ ಗೆಲುವು

ಐತಿಹಾಸಿಕ ಗೆಲುವು

ಸುಂದರ್ ವಿಕೆಟ್ ಕಳೆದುಕೊಂಡ ಬಳಿಕ ಶಾರ್ದೂಲ್ ಠಾಕೂರ್ ಕೂಡ 2 ರನ್‌ಗಳಿಸಿ ಔಟ್ ಆದರು ಕೂಡ ಔಟಾದರೂ ಅದಾಗಲೇ ತಂಡ ಗೆಲುವಿನಂಚಿನಲ್ಲಿತ್ತು. ಅಂತ್ಯದಲ್ಲಿ ಬೌಂಡರಿ ಸಿಡಿಸುವ ಮೂಲಕ ರಿಷಭ್ ಪಂತ್ ಗೆಲುವನ್ನು ಘೋಷಿಸಿದರು. ರಿಷಭ್ ಪಂತ್ 89 ರನ್ ಗಳಿಸಿ ಭಾರತ ತಂಡದ ಜಯದಲ್ಲಿ ಮಹತ್ವದ ಪಾತ್ರವಹಿಸಿದರು. ಈ ಮೂಲಕ ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಸರಣಿ ಗೆಲುವು ಸಾಧಿಸಿ ಗೆದ್ದು ಬೀಗಿದೆ.

ಸುಂದರ್ ವಿಕೆಟ್ ಕಳೆದುಕೊಂಡ ಬಳಿಕ ಶಾರ್ದೂಲ್ ಠಾಕೂರ್ ಕೂಡ 2 ರನ್‌ಗಳಿಸಿ ಔಟ್ ಆದರು ಕೂಡ ಔಟಾದರೂ ಅದಾಗಲೇ ತಂಡ ಗೆಲುವಿನಂಚಿನಲ್ಲಿತ್ತು. ಅಂತ್ಯದಲ್ಲಿ ಬೌಂಡರಿ ಸಿಡಿಸುವ ಮೂಲಕ ರಿಷಭ್ ಪಂತ್ ಗೆಲುವನ್ನು ಘೋಷಿಸಿದರು. ರಿಷಭ್ ಪಂತ್ 89 ರನ್ ಗಳಿಸಿ ಭಾರತ ತಂಡದ ಜಯದಲ್ಲಿ ಮಹತ್ವದ ಪಾತ್ರವಹಿಸಿದರು. ಈ ಮೂಲಕ ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಸರಣಿ ಗೆಲುವು ಸಾಧಿಸಿ ಗೆದ್ದು ಬೀಗಿದೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, January 19, 2021, 13:08 [IST]
Other articles published on Jan 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X