ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ನೂತನ ಜೆರ್ಸಿಯಲ್ಲಿ 'ಬೈಜುಸ್' ಲೋಗೋ ವಿವಾದ

India in Australia 2020: ‘Byjus’ Logo Issue On New Indian Team Jersey

ಸಿಡ್ನಿ: ಭಾರತ-ಆಸ್ಟ್ರೇಲಿಯಾ ಸರಣಿಯ ವೇಳೆ ಟೀಮ್ ಇಂಡಿಯಾ ಹೊಸ ಜೆರ್ಸಿ ಧರಿಸಿ ಮೈದಾನಕ್ಕಿಳಿಯಲಿದೆ. 1992ರ ವಿಶ್ವಕಪ್‌ ವೇಳೆ ಭಾರತ ತಂಡ ಧರಿಸಿದ್ದ ರೀತಿಯ ಜೆರ್ಸಿಯನ್ನೇ ಭಾರತ ಈ ಬಾರಿ ಧರಿಸಲಿದೆ. ಆದರೆ ಈ ಜೆರ್ಸಿಗೆ ಸಂಬಂಧಿಸಿ ವಿವಾದವೂ ಕಾಣಿಸಿಕೊಂಡಿದೆ.

ದ.ಆಫ್ರಿಕಾ ಗೆಲ್ಲಲು 6ಕ್ಕೆ 6 ರನ್ ಬೇಕು, ಸಚಿನ್ ಓವರ್ ಎಸೀತೀನಿ ಅಂದ್ರು!ದ.ಆಫ್ರಿಕಾ ಗೆಲ್ಲಲು 6ಕ್ಕೆ 6 ರನ್ ಬೇಕು, ಸಚಿನ್ ಓವರ್ ಎಸೀತೀನಿ ಅಂದ್ರು!

ಇತ್ತೀಚೆಗೆ ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ವೇಳೆ ಧರಿಸಲಿದ್ದ ಹೊಸ ಜೆರ್ಸಿಯನ್ನು ಪ್ರದರ್ಶಿಸಿದ್ದರು. ಆದರಲ್ಲಿ ಹಳೆ ಜೆರ್ಸಿಯಲ್ಲಿದ್ದಂತೆ ಮುಂಭಾಗದಲ್ಲಿ 'ಭಾರತ' ಅಂತ ದೊಡ್ಡದಾಗಿ ಬರೆದಿದ್ದ ಪ್ರಿಂಟ್ ಇರಲಿಲ್ಲ. ಬದಲಿಗೆ ಟೀಮ್ ಇಂಡಿಯಾ ಕಿಟ್ ಸ್ಪಾನ್ಸರ್ 'ಬೈಜುಸ್' ಲೋಗೋ ಇತ್ತು. ಇದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

India in Australia 2020: ‘Byjus’ Logo Issue On New Indian Team Jersey

ಭಾರತದ ಹೊಸ ಕಿಟ್ ಪ್ರಯೋಜಕ ಎಂಪಿಎಲ್‌ನ ಲೋಗೋ ಕೂಡ ಜೆರ್ಸಿಯಲ್ಲಿ ಎದ್ದು ಕಾಣುತ್ತಿತ್ತು. ಭಾರತದ ಜೆರ್ಸಿ ಇಷ್ಟರಮಟ್ಟಿಗೆ ವಾಣಿಜ್ಯಮಯವಾಗಿದ್ದಕ್ಕೆ ಕ್ರಿಕೆಟ್ ಅಭಿಮಾನಿಗಳು ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ ಜೆರ್ಸಿ ಬದಲಾಗುವ ಸಾಧ್ಯತೆಯಿಲ್ಲ.

ಟೀಮ್ ಇಂಡಿಯಾದ ಈಗಿನ ಜೆರ್ಸಿಗೆ ಪ್ರಾಯೋಜಕರಾಗಿರುವ ಬೈಜುಸ್, ಇಂಡಿಯಾ ಪ್ರಿಂಟ್‌ನ ಬಗ್ಗೆ ತಕಾರಾರು ತೆಗೆಯಬಹುದು ಎನ್ನುವ ಕಾರಣಕ್ಕೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವೇ ಶೀಘ್ರ ಸಭೆ ನಡೆಸಿ, ಭಾರತದ ಬದಲಿಗೆ ಬೈಜುಸ್ ಲೋಗೋ ದೊಡ್ಡದಾಗಿ ಪ್ರಿಂಟ್ ಹಾಕುವಂತೆ ಕೋರಿಕೊಂಡಿತ್ತು ಎಂದು ತಿಳಿದುಬಂದಿದೆ.

Story first published: Wednesday, November 25, 2020, 18:44 [IST]
Other articles published on Nov 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X