ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹತ್ವದ ಆಸಿಸ್ ವಿರುದ್ಧದ ಸರಣಿಗೆ ಭಾರತದ ಮಾಜಿ ಸ್ಟ್ರೆಂತ್‌ & ಕಂಡೀಶನಿಂಗ್ ಕೋಚ್ ಸಲಹೆ

India in Australia: Cricketers should have to adapt to the new normal with smart adaptable training

ಐಪಿಎಲ್ ಮುಕ್ತಾಯದ ಬಳಿಕ ಭಾರತ ಕ್ರಿಕೆಟ್ ತಂಡ ಮಹತ್ವದ ಸರಣಿಯೊಂದಕ್ಕೆ ಸಜ್ಜಾಗಲಿದೆ. ಐಪಿಎಲ್‌ಗಾಗಿ ಸುದೀರ್ಘ ಕಾಲ ಕುಟುಂಬದಿಂದ ದೂರ ಉಳಿದಿರುವ ಆಟಗಾರರು ಆಸಿಸ್ ವಿರುದ್ಧದ ಸರಣಿಗಾಗಿ ಮತ್ತೊಂದು ಬಯೋ ಬಬಲ್‌ಗೆ ಸೇರಿಕೊಳ್ಳುವುದರಿಂದ ಆಟಗಾರರು ಈ ಟೂರ್ನಿಯ ಅಂತ್ಯದವರೆಗೆ ಕುಟುಂಬದಿಂದ ದೂರವೇ ಇರಬೇಕಾಗುತ್ತದೆ.

ಭಾರತದಂತಾ ಕ್ರಿಕೆಟ್ ತಂಡದ ಆಟಗಾರರಿಗೆ ಸುದೀರ್ಘ ಟೂರ್ನಿಗಳಲ್ಲಿ ಪಾಲ್ಗೊಳ್ಳುವುದು ಹೊಸತೇನಲ್ಲ. ಆದರೆ ಈ ಬಾರಿಯ ಟೂರ್ನಿ ಹಿಂದಿನಂತಿಲ್ಲ ಎಂಬುದು ಕ್ರಿಕೆಟ್ ಪ್ರಿಯರಿಗೆ ತಿಳಿದಿದೆ. ಅದರಲ್ಲೂ ಕೋವಿಡ್ ನಿಯಮಗಳು ಕಠಿಣವಾಗಿರುವುದು ಆಟಗಾರರು ಅನುವಾರ್ಯವಾಗಿ ಪಾಲಿಸಲೇಬೇಕಿದೆ. ಇಂತಾ ಕಠಿಣ ಟೂರ್ನಿಗಾಗಿ ಆಟಗಾರರು ಹಾಗೂ ಮ್ಯಾನೇಜ್‌ಮೆಂಟ್ ದೈಹಿಕವಾಗಿ ಹಾಗೂ ಮಾನಸಿಕವಾಗಿ ಯಾವ ರೀತಿಯ ಸಿದ್ಧತೆಗಳನ್ನು ನಡೆಸಬೇಕು ಎಂಬುದಕ್ಕೆ ಟೀಮ್ ಇಂಡಿಯಾದ ಮಾಜಿ ಸ್ಟ್ರೆಂತ್‌ & ಕಂಡಿಶನಿಂಗ್ ಕೋಚ್ ರಾಮ್‌ಜಿ ಶ್ರೀನಿವಾಸನ್ ಸಲಹೆಗಳನ್ನು ನೀಡಿದ್ದಾರೆ.

ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಆಯ್ಕೆ ಮಾಡದಿದ್ದಕ್ಕೆ ಸ್ಪಷ್ಟನೆ ಕೇಳಿದ ಸುನಿಲ್ ಗವಾಸ್ಕರ್ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಆಯ್ಕೆ ಮಾಡದಿದ್ದಕ್ಕೆ ಸ್ಪಷ್ಟನೆ ಕೇಳಿದ ಸುನಿಲ್ ಗವಾಸ್ಕರ್

"ಆಟಗಾರರು ಬಯೋ ಸೆಕ್ಯೂರ್ ಬಬಲ್ ಪ್ರವೇಶಿಸುವ ಮುನ್ನವೇ ತಮ್ಮ ತರಭೇತಿಯನ್ನು ನಡೆಸಿಕೊಳ್ಳುತ್ತಿದ್ದರು. ಆದರೆ ಇಂತಾ ಸಂದರ್ಭದಲ್ಲಿ ಒಟ್ಟಾರೆಯಾಗಿ ಫಿಟ್‌ನೆಸ್ ಅಳವಡಿಕೆ ಮಾಡಿಕೊಳ್ಳುವುದು ಆಟಗಾರರಿಗೆ ಸಹಾಯ ಮಾಡಲಾರದು. ಅದು ನಿಯಮಬದ್ಧವಾಗಿದ್ದು, ಬುದ್ಧಿವಂತಿಕೆಯ ಹಾಗೂ ಸುಲಭವಾಗಿ ಅಳವಡಿಸಿಕೊಳ್ಳವುಂತಾಗಿರಬೇಕು" ಎಂದು ಮೈಖೇಲ್.ಕಾಮ್ ಜೊತೆಗೆ ವಿಶೇಷ ಸಂದರ್ಶನವನ್ನು ನೀಡಿದ ರಾಮ್‌ಜಿ ಶ್ರೀನಿವಾಸನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ದೈಹಿಕವಾಗಿ ಮತ್ತು ಮಾನಸಿಕವಾಗಿ ಸೂಕ್ತ ರೀತಿಯಲ್ಲಿ ಆಟಗಾರರಿಗೆ ಈ ಮೂಲಕ ತರಬೇತಿ ಸಿಗುವಂತಾಗಬೇಕು. ಇಂತಾ ಸಂದರ್ಭಗಳಲ್ಲಿ ಈ ಪರಿಸ್ಥಿತಿಗಳನ್ನು ಅಳವಡಿಸಿಕೊಳ್ಳಲು ಆಟಗಾರರ ವೈಯಕ್ತಿಕ ಪಾತ್ರಗಳು ಕೂಡ ಬಹಳ ಮುಖ್ಯವಾಗುತ್ತದೆ" ಎಂದು ಶ್ರೀನಿವಾಸನ್ ಹೇಳಿಕೆ ನೀಡಿದ್ದಾರೆ.

ಅಭಿಮಾನಿಗಳನ್ನ ಗೊಂದಲಕ್ಕೀಡುಮಾಡಿದ ರೋಹಿತ್ ಶರ್ಮಾ ಫೋಟೋಅಭಿಮಾನಿಗಳನ್ನ ಗೊಂದಲಕ್ಕೀಡುಮಾಡಿದ ರೋಹಿತ್ ಶರ್ಮಾ ಫೋಟೋ

ಇನ್ನು ಇದೇ ಸಂದರ್ಭದಲ್ಲಿ ಬಯೋ ಬಬಲ್‌ನ ಒಳಗೆ ಆಟಗಾರರು ಒತ್ತಡಕ್ಕೆ ಒಳಗಾಗುವ ಸಂದರ್ಭ ಬರಬಹುದು ಎಂದಿದ್ದಾರೆ. "ಸುದೀರ್ಘ ಕಾಲದವರೆಗೆ ಸೀಮಿತ ವಲಯದಲ್ಲಿರುವುದು ಆಟಗಾರರ ಒತ್ತಡಕ್ಕೆ ಕಾರಣವಾಗಬಹುದು. ಹೋಟೆಲ್‌ಗಳಲ್ಲಿ ಪ್ರತಿಯೊಂದು ಸುವ್ಯವಸ್ಥಿತವಾಗಿದೆಯೆಂದು ನೀವು ಹೇಳಿದರೂ ಅದೊಂದು ಬಂಧನ. ಹಾಗಾಗಿ ಏಕಾಂಗಿತನದಿಂದ ದೂರವಾಗಿರುವಂತೆ ಕಾಪಾಡಿಕೊಳ್ಳಬೇಕು. ಜೊತೆಗೆ ಸಕಾರಾತ್ಮಕವಾಗಿರುವ ವ್ಯಕ್ತಿಗಳೊಂದಿಗೆ ಬೆರೆಯಬೇಕು. ಜೊತೆಗೆ ನ್ಯೂರೋ ಫೀಡ್‌ಬ್ಯಾಕ್, ಅಥವಾ ಬಯೋ ಫೀಡ್‌ಬ್ಯಾಕ್ ರೀತಿಯ ಮಾನಸಿಕ ಒತ್ತಡಗಳಿಂದ ದೂರವಿರಬಲ್ಲ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು" ಎಂದು ರಾಮ್‌ಜೀ ಶ್ರೀನಿವಾಸನ್ ಹೇಳಿದ್ದಾರೆ.

Story first published: Tuesday, October 27, 2020, 18:58 [IST]
Other articles published on Oct 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X