ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಬಾರಿ ಟೀಮ್ ಇಂಡಿಯಾ ಜರ್ಸಿ ತೊಟ್ಟು ಸಂಭ್ರಮಿಸಿದ ನಟರಾಜನ್

India in Australia: T Natarajan shares glimpse of Indias retro jersey

ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಟೀಮ್ ಇಂಡಿಯಾ ವಿಶೇಷ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ. ರೆಟ್ರೋ ಮಾದರಿಯ ಜರ್ಸಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಬುಧವಾರ ಟೀಮ್ ಇಂಡಿಯಾಗೆ ಹೊಸದಾಗಿ ಆಯ್ಕೆಯಾಗಿರುವ ವೇಗಿ ಟಿ ನಟರಾಜನ್ ಟೀಮ್ ಇಂಡಿಯಾದ ಈ ಹೊಸ ಜರ್ಸಿಯನ್ನು ತೊಟ್ಟು ಸಂಭ್ರಮಿಸಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ನಿಖರ ಬೌಲಿಂಗ್ ದಾಳಿಯ ಮೂಲಕ ಗಮನ ಸೆಳೆದ ಆಟಗಾರ ಟಿ ನಟರಾಜನ್. ತೀಕ್ಷ್ಣ ಯಾರ್ಕರ್‌ಗಳ ಮೂಲಕ ದಿಗ್ಗಜ ಆಟಗಾರರಿಂದ ಶ್ಲಾಘನೆಗೆ ಪಾತ್ರರಾದರು. ಈ ಉತ್ತಮದ ಪ್ರದರ್ಶನದ ಕಾರಣಕ್ಕಾಗಿ ಮೊದಲ ಬಾರಿಗೆ ಟೀಮ್ ಇಂಡಿಯಾದಲ್ಲೂ ಸ್ಥಾನವನ್ನು ಸಂಪಾದಿಸಿದ್ದಾರೆ ಟಿ ನಟರಾಜನ್.

3 ವಿಶ್ವಕಪ್‌ಗಳಲ್ಲಿ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯುವ ಆಶಯ ವ್ಯಕ್ತಪಡಿಸಿದ ರಾಹುಲ್3 ವಿಶ್ವಕಪ್‌ಗಳಲ್ಲಿ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯುವ ಆಶಯ ವ್ಯಕ್ತಪಡಿಸಿದ ರಾಹುಲ್

ಡಿಸೆಂಬರ್ 4 ರಿಂದ ಆರಂಭವಾಗಲಿರುವ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ಭಾಗವಾಗಲಿದ್ದಾರೆ ಟಿ ನಟರಾಜನ್. ಮೊದಲಿಗೆ ವರುಣ್ ಚಕ್ರವರ್ತಿ ಈ ಈ ಸರಣಿಗೆ ಆಯ್ಕೆಯಾಗಿದ್ದರು. ಆದರೆ ಅವರು ಗಾಯಗೊಂಡ ಕಾರಣ ನಟರಾಜನ್‌ಗೆ ಈ ಅವಕಾಶ ದೊರೆಯಿತು.

"ಈ ಹೊಸ ಜರ್ಸಿಯನ್ನು ತೊಡಲು ವಿಶೇಷ ಅನುಭವವಾಗುತ್ತಿದೆ. ಎಂದು ಟೀಮ್ ಇಂಡಿಯಾ ಹಾಗೂ ಟ್ರಸ್ಟ್ ಇನ್ ಡ್ರೀಮ್ ಎಂದು ಹ್ಯಾಶ್ ಟ್ಯಾಗ್‌ ಸೇರಿಸಿಕೊಂಡಿದ್ದಾರೆ ಟಿ ನಟರಾಜನ್. ಕಠಿಣ ಪರಿಶ್ರಮದ ಮೂಲಕ ಟೀಮ್ ಇಂಡಿಯಾದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡ ನಟರಾಜನ್ ಭಾರತದ ಪರವಾಗು ಮಿಂಚುವ ವಿಶ್ವಾಸವನ್ನು ಹೊಂದಿದ್ದಾರೆ.

ಟೀಮ್ ಇಂಡಿಯಾ ನೂತನ ಜೆರ್ಸಿಯಲ್ಲಿ 'ಬೈಜುಸ್' ಲೋಗೋ ವಿವಾದಟೀಮ್ ಇಂಡಿಯಾ ನೂತನ ಜೆರ್ಸಿಯಲ್ಲಿ 'ಬೈಜುಸ್' ಲೋಗೋ ವಿವಾದ

ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿ 27ನೇ ತಾರೀಕಿನಿಂದ ಆರಂಭವಾಗಲಿದೆ. ಮೂರು ಏಕದಿನ ಹಾಗೂ ಮೂರು ಟಿ20 ಪಮದ್ಯಗಳು ಮೊದಲಿಗೆ ನಡೆಯಲಿದ್ದು ಬಳಿಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಸೀಮಿತ ಓವರ್‌ಗಳ ಸರಣಿಯಲ್ಲಿ ಭಾರತ 1992 ವಿಶ್ವಕಪ್‌ನಲ್ಲಿ ಧರಿಸಿದ್ದ ಮಾದರಿಯ ಜರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ.

Story first published: Thursday, November 26, 2020, 10:07 [IST]
Other articles published on Nov 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X