ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂಪರ್ ಓವರ್‌ ಇತಿಹಾಸದಲ್ಲಿ ಅದೃಷ್ಟವೇ ಇಲ್ಲದ ನ್ಯೂಜಿಲ್ಯಾಂಡ್!

Ind vs Nz Superover :New Zealand and their Super over heartbreaks | New Zealand | India | superover
India Inflict Super Over Heartbreak on New Zealand

ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಸೂಪರ್ ಓವರನ್ನು ಟೈ ಮಾಡಿಕೊಂಡು ಬೌಂಡರಿಗಳ ಆಧಾರದಲ್ಲಿ ಸೋತ ಆರೇ ತಿಂಗಳಲ್ಲಿ ಮತ್ತೊಂದು ಸೂಪರ್ ಓವರ್ ಆಘಾತಕ್ಕೆ ಕೀವಿಸ್ ಪಡೆ ತುತ್ತಾಗಿದೆ. ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ನ್ಯೂಜಿಲ್ಯಾಂಡ್ ತಂಡ ಟೈ ಮಾಡಿಕೊಂಡು ಸೂಪರ್ ಓವರ್‌ನಲ್ಲಿ ಭಾರತಕ್ಕೆ ಕೊನೆಯ ಎಸೆತದಲ್ಲಿ ಶರಣಾಗಿದೆ. ಈ ಮೂಲಕ ನ್ಯೂಜಿಲ್ಯಾಂಡ್ ತಂಡ ಮತ್ತೊಮ್ಮೆ ತಾನು ಸೂಪರ್ ಓವರ್‌ನಲ್ಲಿ ದುರದೃಷ್ಟವಂತ ತಂಡ ಎಂಬ ಹಣೆಪಟ್ಟಿಗೆ ಒಳಗಾಗಿದೆ.

ಅಂತಿಮ ಓವರ್‌ವರೆಗೂ ನ್ಯೂಜಿಲ್ಯಾಂಡ್ ಇಂದಿನ ಪಂದ್ಯವನ್ನು ತನ್ನ ಹಿಡಿತದಲ್ಲೇ ಇಡ್ಡುಕೊಂಡಿತ್ತು. ಆದರೆ ಕೊನೆಯ ಓವರ್‌ನಲ್ಲಿ ಉಂಟಾದ ನಾಟಕೀಯ ತಿರುವು ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿತು. ಬಳಿಕ ಸೂಪರ್ ಓವರ್‌ನಲ್ಲೂ ಇದೇ ರೀತಿಯ ಹಿಡಿತದಲ್ಲಿದ್ದ್ ಪಂದ್ಯವನ್ನು ಕೊನೆಯ ಎಸೆತದಲ್ಲಿ ಸಿಕ್ಸರ್ ನೀಡಿ ಟೀಮ್ ಇಂಡಿಯಾಗೆ ಶರಣಾಯಿತು.

ಟಿ20ಐ: ಸೂಪರ್ ಓವರ್‌ನಲ್ಲಿ ರೋ'ಹಿಟ್‌' ತಂದುಕೊಟ್ಟ ಸೂಪರ್ ಗೆಲುವು!ಟಿ20ಐ: ಸೂಪರ್ ಓವರ್‌ನಲ್ಲಿ ರೋ'ಹಿಟ್‌' ತಂದುಕೊಟ್ಟ ಸೂಪರ್ ಗೆಲುವು!

ನ್ಯೂಜಿಲ್ಯಾಂಡ್‌ಗೆ ಸೂಪರ್ ಓವರ್ ಸೋಲು ಮೊದಲೇನೂ ಅಲ್ಲ. ಟೈ ಮಾಡಿಕೊಂಡ ಪಂದ್ಯಗಳಲ್ಲಿ ಸೋಲೇ ಗತಿ ಎಂಬಂತಾಗಿದೆ ಕೀವಿಸ್ ಪರಿಸ್ಥಿತಿ. ಆಡಿರುವ ಏಳು ಸೂಪರ್ ಓವರ್ ಪಂದ್ಯಗಳಲ್ಲಿ ನ್ಯೂಜಿಲ್ಯಾಂಡ್ ಗೆದ್ದಿದ್ದು ಕೇವಲ ಒಂದು ಮಾತ್ರ. ಉಳಿದ ಆರು ಪಂದ್ಯಗಳಲ್ಲಿ ಸೋಲು ಕಂಡಿದೆ.

ಉತ್ತಮ ಮೊತ್ತದ ಟಾರ್ಗೆಟ್ ಕೊಟ್ಟರೂ ಸೋಲೆ ಗತಿ:

ಉತ್ತಮ ಮೊತ್ತದ ಟಾರ್ಗೆಟ್ ಕೊಟ್ಟರೂ ಸೋಲೆ ಗತಿ:

ಇಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಸೂಪರ್ ಓವರ್‌ನಲ್ಲಿ ಅತ್ಯುತ್ತಮ ಮೊತ್ತವನ್ನು ಟಾರ್ಗೆಟ್ ನೀಡಿತ್ತು. ಆರು ಎಸೆತಗಳಲ್ಲಿ ನ್ಯೂಜಿಲ್ಯಾಂಡ್ 17 ರನ್ ಗಳಿಸಿತ್ತು. ಆದರೆ ಇಷ್ಟು ಉತ್ತಮ ಮೊತ್ತವನ್ನು ಉಳಿಸಿಕೊಳ್ಳಲು ನ್ಯೂಜಿಲ್ಯಾಂಡ್ ಸಾಧ್ಯವಾಗಲಿಲ್ಲ.

ವಿಶ್ವಕಪ್ ಫೈನಲ್‌ನಲ್ಲೂ ಕೈಕೊಟ್ಟ ಅದೃಷ್ಟ:

ವಿಶ್ವಕಪ್ ಫೈನಲ್‌ನಲ್ಲೂ ಕೈಕೊಟ್ಟ ಅದೃಷ್ಟ:

ಇಂಗ್ಲೆಂಡ್ ವಿರುದ್ಧ ಫೈನಲ್ ಪಂದ್ಯವನ್ನಾಡಿದ ನ್ಯೂಜಿಲ್ಯಾಂಡ್ ರೋಚಕ ಟೈನಲ್ಲಿ ಅಂತ್ಯವಾಯಿತು. ಬಳಿಕ ಸೂಪರ್ ಓವರ್‌ನಲ್ಲೂ ನ್ಯೂಜಿಲ್ಯಾಂಡ್‌ಗೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಮತ್ತೆ ಟೈ ಕಂಡ ಪಂದ್ಯವನ್ನು ಬೌಂಡರಿಗಳ ಆಧಾರದಲ್ಲಿ ಇಂಗ್ಲೆಂಡ್ ತಂಡ ವಿಜಯಿ ಎಂದು ಘೋಷಿಸಲಾಯಿತು.

ಬಾಲ್ ಔಟ್‌ನಲ್ಲಿ ಸೋಲಿನ ಸರಪಳಿ ಆರಂಭ:

ಬಾಲ್ ಔಟ್‌ನಲ್ಲಿ ಸೋಲಿನ ಸರಪಳಿ ಆರಂಭ:

ನ್ಯೂಜಿಲ್ಯಾಂಡ್ ತನ್ನ ಮೊದಲ ಸೂಪರ್ ಓವರ್ ಆಡಿದ್ದು 2006ರಲ್ಲಿ. ವೆಸ್ಟ್‌ ಇಂಡೀಸ್ ವಿರುದ್ಧ ಆಕ್ಲೆಂಡ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಎರಡೂ ತಂಡಗಳು 126 ರನ್‌ಗಳಿಸಿತ್ತು. ಆದರೆ ಆಗ ಬಾಲ್ ಔಟ್‌ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುತ್ತಿತ್ತು. ಅಂದರೆ ಬೌಲರ್‌ಗಳು ವಿಕೆಟನ್ನು ಗುರಿಯಾಗಿಟ್ಟು(ಬ್ಯಾಟ್ಸ್‌ಮನ್‌ ಇಲ್ಲದೆ) ವಿಕೆಟ್‌ಗೆ ಗುರಿಯಿಡಬೇಕಿತ್ತು. ಆದರೆ ಇಲ್ಲಿ ನ್ಯೂಜಿಲ್ಯಾಂಡ್ ವೆಸ್ಟ್ ಇಂಡೀಸ್‌ಗೆ ಶರಣಾಗಿತ್ತು.

ಸೂಪರ್ ಓವರ್‌ಗಳಲ್ಲಿ ನ್ಯೂಜಿಲ್ಯಾಂಡ್ ಫಲಿತಾಂಶ

ಸೂಪರ್ ಓವರ್‌ಗಳಲ್ಲಿ ನ್ಯೂಜಿಲ್ಯಾಂಡ್ ಫಲಿತಾಂಶ

ಟಿ20 ವೆಸ್ಟ್ ಇಂಡೀಸ್ ವಿರುದ್ಧ ಆಕ್ಲೆಂಡ್ 2008 (ಸೋಲು)

ಟಿ20 ಆಸ್ಟ್ರೇಲಿಯಾ ವಿರುದ್ಧ ಕ್ರೈಸ್ಟ್‌ಚರ್ಚ್ 2010 (ಗೆಲುವು)

ಟಿ20 ಶ್ರೀಲಂಕಾ ವಿರುದ್ಧ ಪಲ್ಲಕೆಲೆ 2012 (ಸೋಲು)

ಟಿ20 ಶ್ರೀಲಂಕಾ ಪಲ್ಲಕೆಲೆ 2012 (ಸೋಲು)

ಏಕದಿನ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ 2019 (ಸೋಲು)

ಟಿ20 ಇಂಗ್ಲೆಂಡ್ ವಿರುದ್ಧ ಆಕ್ಲೆಂಡ್ 2019 (ಸೋಲು)

ಟಿ20 ಭಾರತದ ವಿರುದ್ಧ 2020 (ಸೋಲು)

Story first published: Wednesday, January 29, 2020, 21:26 [IST]
Other articles published on Jan 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X