ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಕೋವಿಡ್-19ನಿಂದ ನಲುಗುತ್ತಿರುವ ಭಾರತಕ್ಕೆ ಜಾಗತಿಕ ಬೆಂಬಲ ಬೇಕು'

India is really struggling with Covid-19, global support needed, says Shoaib Akhtar

ಕರಾಚಿ: ಕೋವಿಡ್-19 ಸೋಂಕಿತರ ಸಂಖ್ಯೆ ಭಾರತದಲ್ಲಿ ಹೆಚ್ಚಾಗುತ್ತಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸಮಸ್ಯೆಯಾಗುತ್ತಿದೆ. ಆಮ್ಲಜನಕದ ಕೊರತೆ ಎದುರಾಗುತ್ತಿದೆ. ಕೊರೊನಾ ಸಮಸ್ಯೆಯಲ್ಲಿರುವ ಭಾರತದ ಪರ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಧ್ವನಿಯೆತ್ತಿದ್ದಾರೆ.

2022ರ ವಿಶ್ವಕಪ್‌ ನನ್ನ 'ಹಂಸಗೀತೆ'ಯಾಗಲಿದೆ: ಮಿಥಾಲಿ ರಾಜ್2022ರ ವಿಶ್ವಕಪ್‌ ನನ್ನ 'ಹಂಸಗೀತೆ'ಯಾಗಲಿದೆ: ಮಿಥಾಲಿ ರಾಜ್

ಭಾರತದಲ್ಲಿ ಶನಿವಾರ (ಏಪ್ರಿಲ್ 24) ಕೊರೊನಾವೈರಸ್ ಹೊಸ ಸೋಂಕಿತರ ಸಂಖ್ಯೆ 3,46,786 ಇತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಭಾರತದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಆತಂಕಕಾರಿಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 2,624ರಷ್ಟಿದೆ.

'ಈಗ ನಡೆಯುತ್ತಿರುವ ಪಿಡುಗಿನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳೋದು ಯಾವುದೇ ಸರ್ಕಾರಕ್ಕೂ ಸವಾಲಿನ ಸಂಗತಿ. ನಾನು ಈ ಮೂಲಕ ನಮ್ಮ ಸರ್ಕಾರ ಮತ್ತು ಅಭಿಮಾನಿಗಳಲ್ಲಿ ಭಾರತಕ್ಕೆ ಬೆಂಬಲ ನೀಡುವಂತೆ ಕೋರಿಕೊಳ್ಳುತ್ತೇನೆ,' ಎಂದು ಅಖ್ತರ್ ಹೇಳಿದ್ದಾರೆ.

ಮೆಟ್ಟಿಲುಗಳ ಮೇಲೆ ಕುಸಿದು ಕುಳಿತಿದ್ದರ ಹಿಂದಿನ ಕಾರಣ ಬಾಯ್ಬಿಟ್ಟ ರಸೆಲ್!ಮೆಟ್ಟಿಲುಗಳ ಮೇಲೆ ಕುಸಿದು ಕುಳಿತಿದ್ದರ ಹಿಂದಿನ ಕಾರಣ ಬಾಯ್ಬಿಟ್ಟ ರಸೆಲ್!

ಯೂಟ್ಯೂಬ್ ಚಾನೆಲ್‌ನಲ್ಲಿ ಮಾತು ಮುಂದುವರೆಸಿದ ಅಖ್ತರ್, 'ಭಾರತಕ್ಕೆ ಬಹಳಷ್ಟು ಆಮ್ಲಜನಕದ ಟ್ಯಾಂಕ್‌ಗಳು ಬೇಕಿವೆ. ಹೀಗಾಗಿ ಅವರಿಗೆ ಆಮ್ಲಜನಕದ ಟ್ಯಾಂಕ್‌ಗಳನ್ನು ನೀಡಲು ದೇಣಿಗೆ ಸಂಗ್ರಹಿಸುವಂತೆ ನಿಮ್ಮೆಲ್ಲರಲ್ಲಿ ನಾನು ಕೋರಿಕೊಳ್ಳುತ್ತೇನೆ,' ಎಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಕೋರಿಕೊಂಡಿದ್ದಾರೆ.

Story first published: Sunday, April 25, 2021, 0:28 [IST]
Other articles published on Apr 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X