ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಆಸ್ಟ್ರೇಲಿಯಾವನ್ನು ಸತತವಾಗಿ ಒತ್ತಡದಲ್ಲಿರುವಂತೆ ನೋಡಿಕೊಂಡಿತು: ಲ್ಯಾಬುಶೈನ್

India kept Australia under pressure, admits Marnus Labuschagne

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಅದ್ಭುತ ಪ್ರದರ್ಶನವನ್ನು ನೀಡಿ ಟೀಮ್ ಇಂಡಿಯಾಗೆ ಮೇಲುಗೈ ಒದಗಿಸಿದರು. ಭಾರತೀಯ ಬೌಲರ್‌ಗಳ ಈ ಸಾಧನೆಗೆ ಎದುರಾಳಿ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್ ಮರ್ನಾಸ್ ಲ್ಯಾಬುಶೈನ್ ಕೂಡ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾ ಬೌಲರ್‌ಗಳು ಆಸ್ಟ್ರೇಲಿಯಾ ವಿರುದ್ಧ ಹೊಸ ರಣತಂತ್ರದೊಂದಿಗೆ ಕಣಕ್ಕಿಳಿದಿದ್ದಾರೆ. ಮೊದಲ ಹಂತದಲ್ಲ ತಮ್ಮ ಪಾಳೆಯದ ಪ್ರದರ್ಶನ ನಿರಾಶಾದಾಯಕವಾಗಿತ್ತು ಎಂಬುದನ್ನು ಲ್ಯಾಬುಶೈನ್ ಒಪ್ಪಿಕೊಂಡಿದ್ದಾರೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 195 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.

ಭಾರತ vs ಆಸ್ಟ್ರೇಲಿಯಾ: ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ನಲುಗಿದ ಆಸ್ಟ್ರೇಲಿಯಾಭಾರತ vs ಆಸ್ಟ್ರೇಲಿಯಾ: ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ನಲುಗಿದ ಆಸ್ಟ್ರೇಲಿಯಾ

"ನಾವು ಇಂದು ನೀಡಿದ ಪ್ರದರ್ಶನಕ್ಕಿಂತ ಉತ್ತಮವಾದ ಆಟವನ್ನು ಪ್ರದರ್ಶಿಸಬಹುದಾಗಿತ್ತು. ನಾವು ಅನಗತ್ಯವಾಗಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡೆವು" ಎಂದು ಲ್ಯಾಬುಶೈನ್ ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ. ಲ್ಯಾಬುಶೈನ್ ಆಸ್ಟ್ರೇ;ಒಯಾ ತಂಡದ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. 48 ರನ್‌ಗಳಿಸಿದ್ದ ವೇಳೆ ಅವರು ಆರ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡರು.

"ಅವರು(ಟೀಮ್ ಇಂಡಿಯಾ) ನೇರವಾಗಿ ಬೌಲಿಂಗ್ ಮಾಡುತ್ತಿದ್ದರು. ಹಾಗಾಗಿ ನಾವು ಆಫ್‌ಸೈಡ್‌ನಿಂದ ಹೆಚ್ಚಿನ ರನ್ ಗಳಿಸಲು ಅಸಾಧ್ಯವಾಯಿತು. ಭಾರತೀಯ ಬೌಲರ್‌ಗಳು ಹೊಸ ತಂತ್ರದೊಂಧಿಗೆ ಕಣಕ್ಕಿಳಿದಿದ್ದರು. ರನ್‌ಗಳಿಸದಂತೆ ಮಾಡಿ ನಮ್ಮ ಮೇಲೆ ಒತ್ತಡವನ್ನು ಹೇರಿದರು" ಎಂದು ಲ್ಯಾಬುಶೈನ್ ಹೇಳಿದರು.

ಅಜಿಂಕ್ಯ ರಹಾನೆ ನಾಯಕತ್ವಕ್ಕೆ ಮೊದಲ ಸೆಶನ್‌ನಲ್ಲೇ ಮೆಕ್‌ಗ್ರಾಥ್ ಪ್ರಶಂಸೆಅಜಿಂಕ್ಯ ರಹಾನೆ ನಾಯಕತ್ವಕ್ಕೆ ಮೊದಲ ಸೆಶನ್‌ನಲ್ಲೇ ಮೆಕ್‌ಗ್ರಾಥ್ ಪ್ರಶಂಸೆ

ಮೊದಲ ಇನ್ನಿಂಗ್ಸ್‌ನಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಂಡು ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ದೊಡ್ಡ ಮೊತ್ತವನ್ನು ಗಳಿಸಬೇಕಿದೆ ಎಂದು 22ರ ಹರೆಯದ ಆಟಗಾರ ಲ್ಯಾಬುಶೈನ್ ಹೇಳಿದರು. ಪ್ರತಿ ಬಾರಿಯೂ ಆರು ಮಂದಿ ಬ್ಯಾಟ್ಸ್‌ಮನ್‌ಗಳು ಕೂಡ ರನ್‌ಗಳಿಸಬೇಕಾದ ಅಗತ್ಯವಿಲ್ಲ. ಕೆಲವೊಮ್ಮೆ ಒಬ್ಬರು ಅಥವಾ ಇಬ್ಬರು ರನ್ ಗಳಿಸಿದರು ಸಾಕಾಗುತ್ತದೆ ಎಂದು ಆಸಿಸ್ ಬ್ಯಾಟ್ಸ್‌ಮನ್ ಹೇಳಿದ್ದಾರೆ.

Story first published: Saturday, December 26, 2020, 22:03 [IST]
Other articles published on Dec 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X