ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಡ್‌ ಸೇಫ್ಟಿ ಸೀರೀಸ್: ಸಚಿನ್, ಯುವಿ ಅಬ್ಬರದ ಆಟಕ್ಕೆ ಬೆದರಿದ ದಕ್ಷಿಣ ಆಫ್ರಿಕಾ ದಿಗ್ಗಜರು

India Legends won the match by 56 runs against South Africa Legends

ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್ ತಂಡ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ 56 ರನ್‌ಗಳ ಅಂತರದ ಗೆಲುವು ಸಾಧಿಸುವ ಮೂಲಕ ಸಚಿನ್ ತೆಂಡೂಲ್ಕರ್ ಪಡೆ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಇಂಡಿಯಾ ಲೆಜೆಂಡ್ಸ್ ಭರ್ಜರಿ 204 ರನ್‌ಗಳನ್ನು ಕಲೆ ಹಾಕಿತ್ತು.

ಇಂಡಿಯಾ ಲೆಜೆಂಡ್ಸ್ ತಂಡ ಸ್ಪೋಟಕ ಆಟವನ್ನು ಪ್ರದರ್ಶಿಸಿ ಅಭಿಮಾನಿಗಳನ್ನು ರಂಜಿಸಿದರು. ಸೆಹ್ವಾಗ್ ವಿಕೆಟ್ ಆರಂಭದಲ್ಲಿಯೇ ಕಳೆದುಕೊಂಡರೂ ಸಚಿನ್ ತೆಂಡೂಲ್ಕರ್ ತಮ್ಮ ಭರ್ಜರಿ ಪ್ರದರ್ಶನವನ್ನು ನೀಡಿ ಅರ್ಧ ಶತಕವನ್ನು ಗಳಿಸಿದರು. 37 ಎಸೆತಗಳಲ್ಲಿ ಸಚಿನ್ ತೆಂಡೂಲ್ಕರ್ 60 ರನ್ ಬಾರಿಸಿದ್ದಲ್ಲದೆ ಬದ್ರಿನಾಥ್ ಜೊತೆಗೆ 2ನೇ ವಿಕೆಟ್‌ಗೆ ಅರ್ಧ ಶತಕದ ಜೊತೆಯಾಟವನ್ನು ನೀಡಿದರು. ಬದ್ರಿನಾಥ್ ಗಾಯಗೊಂಡು ನಿವೃತ್ತಿ ಪಡೆದರೆ ಸಚಿನ್ ಕ್ಯಾಚ್ ನೀಡಿ ನಿರ್ಗಮಿಸಿದರು.

ಆರ್ಚರ್ ಎಸೆತಕ್ಕೆ ರಿವರ್ಸ್‌ಸ್ವೀಪ್ ಸಿಕ್ಸರ್ ಬಾರಿಸಿದ ರಿಷಭ್ ಪಂತ್: ವಿಡಿಯೋಆರ್ಚರ್ ಎಸೆತಕ್ಕೆ ರಿವರ್ಸ್‌ಸ್ವೀಪ್ ಸಿಕ್ಸರ್ ಬಾರಿಸಿದ ರಿಷಭ್ ಪಂತ್: ವಿಡಿಯೋ

ಬಳಿಕ ಬ್ಯಾಟಿಂಗ್‌ಗೆ ಇಳಿದ ಯುವರಾಜ್ ಸಿಂಗ್ ತಮ್ಮ ಸ್ಪೋಟಕ ಆಟವನ್ನು ಪ್ರದರ್ಶಿಸಿದರು. ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸಿದ ಯುವಿ ವೃತ್ತಿ ಜೀವನದ ಅತ್ಯುನ್ನದ ದಿನಗಳನ್ನು ಅಭಿಮಾನಿಗಳಿಗೆ ನೆನಪಿಸಿದರು. ಒಂದು ಓವರ್‌ನಲ್ಲಂತೂ ಸತತ ನಾಲ್ಕು ಸಿಕ್ಸರ್ ಬಾರಿಸುವ ಮೂಲಕ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಯುವರಾಜ್ ಸಿಂಗ್ ಕೇವಲ 22 ಎಸೆತಗಳಲ್ಲಿ 52 ರನ್‌ ಬಾರಿಸಿದರು. ಇದರಲ್ಲಿ ಆರು ಸಿಕ್ಸರ್ ಹಾಗೂ 2 ಬೌಂಡರಿ ಸೇರಿತ್ತು. ಯೂಸೂಫ್ ಪಠಾಣ್ 10 ಎಸೆತಗಳಲ್ಲಿ 23 ರನ್ ಬಾರಿಸಿದರೆ ಮನ್‌ಪ್ರೀತ್ ಗೋನಿ 16 ರನ್‌ ಬಾರಿಸಿ ಯುವರಾಜ್ ಸಿಂಗ್ ಜೊತೆಗೆ ಅಜೇಯವಾಗುಳಿದರು. ಯುವಿ ಜೊತೆಗೆ ಗೋನಿ ಅರ್ಧ ಶತಕದ ಜೊತೆಯಾಟದಲ್ಲೂ ಭಾಗಿಯಾಗುವ ಮೂಲಕ 200 ಗಡಿ ದಾಟಲು ಕಾರಣರಾದರು.

ಇನ್ನು ಭಾರತ ನೀಡಿದ ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಆರಂಭಿಕರು ಉತ್ತಮ ಪ್ರದರ್ಶನವನ್ನು ನೀಡಿದರು. ಮೊದಲ ವಿಕೆಟ್‌ಗೆ 87 ರನ್‌ಗಳ ಜೊತೆಯಾಟವನ್ನು ನೀಡಿದ ಆಂಡ್ರೋ ಪುಟಿಕ್ ಹಾಗೂ ಮಾರ್ನೆ ವಾನ್ ವ್ಯಾಕ್ ಜೋಡಿಯನ್ನು ಬೇರ್ಪಡಿಸಿದ ಬಳಿಕ ಇಂಡಿಯಾ ಲೆಜೆಂಡ್ಸ್ ತಂಡ ವಿಕೆ್ ಗಳಿಸಲು ಆರಂಬಿಸಿತು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 148 ರನ್‌ಗಳಿಸಲಷ್ಟೇ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ಶಕ್ತರಾದರು. ಈ ಮೂಲಕ ಭಾರತ ಲೆಜೆಂಡ್ಸ್ 56 ರನ್‌ಗಳ ಗೆಲುವು ಸಾಧಿಸಿದೆ.

Story first published: Sunday, March 14, 2021, 0:06 [IST]
Other articles published on Mar 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X