ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: 17 ವರ್ಷಗಳ ಬಳಿಕ ಸೋಲಿನಲ್ಲಿ ಕೆಟ್ಟ ದಾಖಲೆ ಬರೆದ ಭಾರತ

India lose 6 straight intl matches for 1st time in 17 years

9 ತಿಂಗಳ ಸುದೀರ್ಘ ವಿರಾಮದ ನಂತರ ಭಾರತ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದೆ. ಆದರೆ ಈ ಪುನರಾಗಮನ ಭಾರತ ಕ್ರಿಕೆಟ್ ತಂಡಕ್ಕೆ ಸ್ಮರಣೀಯವಾಗಿಯೇನು ಆಗಿಲ್ಲ. ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ತಂಡಕ್ಕೆ ಶರಣಾಗುವ ಮೂಲಕ ಈ ಸರಣಿಯಲ್ಲಿ ಆರೋನ್ ಫಿಂಚ್ ಪಡೆಗೆ 1-0 ಅಂತರದ ಮುನ್ನಡೆಯನ್ನು ಒದಗಿಸಿದೆ.

ಈ ಹಿನ್ನೆಡೆಯ ಜೊತೆಗೆ ವಿರಾಟ್ ಪಡೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತವಾಗಿ ಸೋಲು ಕಾಣುತ್ತಿರುವುದನ್ನು ಮುಂದುವರಿಸಿದೆ. ಗೆಲುವಿನ ಮೇಲೆ ಗೆಲುವು ಕಂಡು ಸಾಧನೆ ಮಾಡುತ್ತಿದ್ದ ಭಾರತ ತಂಡ ಅತ್ಯುತ್ತಮ ತಂಡವನ್ನು ಹೊಂದಿದ ಹೊರತಾಗಿಯೂ ಸೋಲಿನಲ್ಲಿ ಕೆಟ್ಟ ದಾಖಲೆಯೊಂದನ್ನು ಬರೆದಿದೆ.

ಭಾರತ vs ಆಸ್ಟ್ರೇಲಿಯಾ: ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಬೇಡದ ದಾಖಲೆ ಬರೆದ ಚಾಹಲ್ಭಾರತ vs ಆಸ್ಟ್ರೇಲಿಯಾ: ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಬೇಡದ ದಾಖಲೆ ಬರೆದ ಚಾಹಲ್

ಹಾಗಾದರೆ ಆ ದಾಖಲೆ ಯಾವುದು? ಆಸಿಸ್ ವಿರುದ್ಧದ ಒಂದು ಸೋಲು ಎಂತಾ ಭಾರತದ ಯಾವ ಕೆಟ್ಟ ದಾಖಲೆಗೆ ಕಾರಣವಾಯಿತು ಮುಂದೆ ಓದಿ..

ಸತತ ಸೋಲಿನ ಕೆಟ್ಟ ದಾಖಲೆ

ಸತತ ಸೋಲಿನ ಕೆಟ್ಟ ದಾಖಲೆ

ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಯಲ್ಲಿ ಸತತ ಆರನೇ ಸೋಲನ್ನು ಕಂಡಂತಾಗಿದೆ. ಭಾರತ ಕಳೆದ 17 ವರ್ಷಗಳಲ್ಲಿ ಸತತವಾಗಿ ಇಷ್ಟು ಸೋಲು ಕಂಡ ಉದಾಹರಣೆಯಿಲ್ಲ. ಈ ಮೂಲಕ ವಿರಾಟ್ ಪಡೆ ಕೆಟ್ಟ ದಾಖಲೆ ಬರೆದುಕೊಂಡಿದೆ.

2002-03ರಲ್ಲಿ ಸತತ ಸೋಲು

2002-03ರಲ್ಲಿ ಸತತ ಸೋಲು

ಟೀಮ್ ಇಂಡಿಯಾ ಇದಕ್ಕೂ ಮುನ್ನ ಅಂತಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತವಾಗಿ ಆರು ಪಂದ್ಯಗಳಲ್ಲಿ ಸೋಲು 17 ವರ್ಷಗಳ ಹಿಂದೆ ಕಂಡಿತ್ತು. ಸೌರವ್ ಗಂಗೂಲಿ ನಾಯಕನಾಗಿದ್ದ ಆ ಸಂದರ್ಭದಲ್ಲಿ ಭಾರತ ಸತತವಾಗಿ ಆರು ಸೋಲು ಕಂಡಿತ್ತು, ಆದರೆ ಬಳಿಕ ಇಂತಾ ಸಂದರ್ಭವನ್ನು ಎದುರಿಸುತ್ತಿರುವುದು ಇದೇ ಮೊದಲು.

ವಿರಾಟ್ ಕೊಹ್ಲಿಯ ಸೋಲು

ವಿರಾಟ್ ಕೊಹ್ಲಿಯ ಸೋಲು

ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಸೋಲು ಕಾಣುವ ಮುನ್ನ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಮೂರು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋಲು ಕಂಡಿತ್ತು. ಈಗ ಆರನೇ ಸೋಲಿಗೆ ಒಳಗಾಗಿದೆ.ಸದ್ಯ ಟೀಮ್ ಇಂಡಿಯಾ ಆಸಿಸ್ ವಿರುದ್ಧದ ಸರಣಿಯಲ್ಲಿ 0-1 ಅಂತರದಿಂದ ಹಿನ್ನೆಡೆಯಲ್ಲಿದೆ.

Story first published: Friday, November 27, 2020, 20:10 [IST]
Other articles published on Nov 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X