ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಸುಧಾರಣೆಗೆ ಕ್ಲೈವ್‌ ಲಾಯ್ಡ್‌ ಸಲಹೆ!

India need to bolster its lower batting order, feels Clive Lloyd
West

ಬರ್ಮಿಂಗ್‌ಹ್ಯಾಮ್‌, ಜುಲೈ 02: ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವಾಗಿರುವ ಟೀಮ್‌ ಇಂಡಿಯಾಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯ ಬಹುದೊಡ್ಡ ಸಮಸ್ಯೆಯಯಾಗಿ ಪರಿಣಮಿಸಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಕಳೆದ ಮೂರು ಪಂದ್ಯಗಳಲ್ಲಿ ಭಾರತ ತಂಡದ ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟಿಂಗ್‌ ಮೇಲೆ ಎಲ್ಲರ ಕಣ್ಣಿದ್ದು, ಈ ಸಂದರ್ಭದಲ್ಲಿ ವೆಸ್ಟ್‌ ಇಂಡೀಸ್‌ ತಂಡದ ಮಾಜಿ ನಾಯಕ ಕ್ಲೈವ್‌ ಲಾಯ್ಡ್‌ ಮೆನ್‌ ಇನ್‌ ಬ್ಲೂ ಪಡೆಯ ಬ್ಯಾಟಿಂಗ್‌ ಗೊಂದಲಕ್ಕೆ ಪರಿಹಾರ ಸೂಚಿಸಿದ್ದಾರೆ.

ಸದ್ಯ ವಿಶ್ವಕಪ್‌ನಲ್ಲಿ ಆಡಿದ 7 ಪಂದ್ಯಗಳಿಂದ 11 ಅಂಕಗಳನ್ನು ಗಳಿಸಿರುವ ಭಾರತ ತಂಡ 10 ತಂಗಳನ್ನು ಒಳಗೊಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್ಸ್‌ ಆಸ್ಟ್ರೇಲಿಯಾ ತಂಡ 14 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಸೆಮಿಫೈನಲ್ಸ್‌ ತಲುಪಿದ ಮೊದಲ ತಂಡವೆನಿಸಿದೆ.

ಲಾರಾ, ತೆಂಡೂಲ್ಕರ್‌ಗೆ ಸಡ್ಡು ಹೊಡೆದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ!ಲಾರಾ, ತೆಂಡೂಲ್ಕರ್‌ಗೆ ಸಡ್ಡು ಹೊಡೆದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ!

ಟೂರ್ನಿಯಲ್ಲಿ ಅಜೇಯ ಗೆಲುವಿನ ಓಟ ನಡೆಸಿದ್ದ ಭಾರತ ತಂಡಕ್ಕೆ ಕಳೆದ ಭಾನುವಾರ ಇಂಗ್ಲೆಂಡ್‌ ತಂಡದ ಎದುರು ನಿರಾಸೆ ಎದುರಾಯಿತು. ಭಾರತಕ್ಕೆ ಇಂಗ್ಲೆಂಡ್‌ ವಿರುದ್ಧ ಗೆಲ್ಲಲು ಕೊನೆಯ 5 ಓವರ್‌ಗಳಲ್ಲಿ 71 ರನ್‌ಗಳನ್ನು ಗಳಿಸುವ ಅಗತ್ಯವಿತ್ತು. ಕ್ರೀಸ್‌ನಲ್ಲಿ ಇದ್ದ ಎಂ.ಎಸ್‌ ಧೋನಿ ಮತ್ತು ಕೇದಾರ್‌ ಜಾಧವ್‌ ಕೇವಲ 39 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತರಾದರು. ಇದರ ಬೆನ್ನಲ್ಲೇ ಟೀಮ್‌ ಇಂಡಿಯಾದ ತಾಳ್ಮೆಯ ಬ್ಯಾಟಿಂಗ್‌ ಕುರಿತಾಗಿ ಸಾಕಷ್ಟು ಟೀಕೆಗಳು ಹೊರಬಿದ್ದವು.

ದಾಖಲೆಗಳ ಮೇಲೆ ದಾಖಲೆ ಬರೆದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ!ದಾಖಲೆಗಳ ಮೇಲೆ ದಾಖಲೆ ಬರೆದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ!

"ಟೀಮ್‌ ಇಂಡಿಯಾಗೆ ಆಟಗಾರರನ್ನು ಆಯ್ಕೆ ಮಾಡುವ ಗೊಂದಲ ಕಾಡುತ್ತಿದೆ. ಸ್ಪಿನ್ನರ್‌ಗಳ ವಿರುದ್ಧ ಆಕ್ರಮಣಕಾರಿ ಆಟವಾಡುವ ಮೂಲಕ ಇಂಗ್ಲೆಂಡ್‌ ಅತ್ಯುತ್ತಮ ಕ್ರಿಕೆಟ್‌ ಪ್ರದರ್ಶಿಸಿತು. ಭಾರತ ತಂಡಕ್ಕೆ ತನ್ನ ಬ್ಯಾಟಿಂಗ್‌ ವೈಫಲ್ಯದ ಸುಧಾರಣೆ ಆಗಬೇಕಾದರೆ, ಮೊದಲಿಗೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಲ ಒದಗಿಸಬೇಕು,'' ಎಂದು 1975 ಮತ್ತು 1979ರಲ್ಲಿ ವೆಸ್ಟ್‌ ಇಂಡೀಸ್‌ ತಂಡಕ್ಕೆ ಎರಡು ವಿಶ್ವಕಪ್‌ಗಳನ್ನು ಗೆದ್ದುಕೊಟ್ಟ ನಾಯಕ ಲಾಯ್ಡ್‌ ಟೀಮ್‌ ಇಂಡಿಯಾಗೆ ಸಲಹೆ ನೀಡಿದ್ದಾರೆ.

Story first published: Tuesday, July 2, 2019, 22:20 [IST]
Other articles published on Jul 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X