ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಕಳೆದ ವರ್ಷದಿಂದ ಕೊರೋನಾವೈರಸ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಆರಂಭದಲ್ಲಿ ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಿದ್ದ ಟೀಮ್ ಇಂಡಿಯಾ ನಾಲ್ಕನೇ ದಿನದಾಟ ಮುಕ್ತಾಯವಾಗುವ ಸಮಯಕ್ಕೆ ಹಿನ್ನಡೆಯನ್ನು ಅನುಭವಿಸಿದೆ.
IND vs ENG 5ನೇ ಟೆಸ್ಟ್: 'ಚೀರಿಯೋ ವಿರಾಟ್'; ಇಂಗ್ಲೆಂಡ್ ಪ್ರೇಕ್ಷಕರಿಂದ ಕೊಹ್ಲಿಗೆ ಅವಮಾನ
ಹೌದು, ಪಂದ್ಯದ ಮೊದಲನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಅವರ ಆಕರ್ಷಕ ಶತಕಗಳ ನೆರವಿನಿಂದ 416 ರನ್ ಕಲೆಹಾಕಿತ್ತು ಹಾಗೂ ಇಂಗ್ಲೆಂಡ್ ಮೊದಲನೇ ಇನ್ನಿಂಗ್ಸ್ನಲ್ಲಿ 284 ರನ್ಗಳಿಗೆ ಆಲ್ ಔಟ್ ಆಯಿತು ಹಾಗೂ ಟೀಮ್ ಇಂಡಿಯಾ 132 ರನ್ಗಳ ಮುನ್ನಡೆಯನ್ನು ಕೂಡ ಕಂಡಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್ನಲ್ಲಿ 245 ರನ್ಗಳನ್ನು ಮಾತ್ರ ಕಲೆಹಾಕಿ ಆಲ್ ಔಟ್ ಆದ ಟೀಮ್ ಇಂಡಿಯಾ ಎದುರಾಳಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 378 ರನ್ಗಳ ಬೃಹತ್ ಗುರಿಯನ್ನೇ ನೀಡಿತು.
ನೆಟ್ ಅಭ್ಯಾಸ ಆರಂಭಿಸಿದ ರೋಹಿತ್; ಆದರೂ ಇಂಗ್ಲೆಂಡ್ ವಿರುದ್ಧ ಟಿ20 ಆಡುವುದು ಅನುಮಾನ ಎಂದ ಬಿಸಿಸಿಐ!
ಇನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಷ್ಟು ದೊಡ್ಡ ಮೊತ್ತದ ರನ್ ಚೇಸ್ ಮಾಡಿ ಗೆಲುವು ಸಾಧಿಸದೇ ಇರುವ ಇಂಗ್ಲೆಂಡ್ ತಂಡ ಈ ಮೊತ್ತವನ್ನು ಚೇಸ್ ಮಾಡುವುದು ಅಸಾಧ್ಯ ಎಂಬ ಅಭಿಪ್ರಾಯಗಳೇ ಕ್ರಿಕೆಟ್ ಅಭಿಮಾನಿಗಳ ಬಳಗದಲ್ಲಿ ಹೆಚ್ಚಾಗಿ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೆ ಮೊದಲ ಇನ್ನಿಂಗ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಭಾರತದ ಬೌಲಿಂಗ್ ಪಡೆ ಕ್ರಿಕೆಟ್ ಅಭಿಮಾನಿಗಳಲ್ಲಿ ಭರವಸೆ ಮೂಡಿಸಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಬೌಲಿಂಗ್ ಮಂಕಾಗಿದ್ದು, ನಾಲ್ಕನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 259 ರನ್ ಕಲೆಹಾಕಿ ಗೆಲ್ಲಲು ಇನ್ನು 119 ರನ್ ಬಾರಿಸಬೇಕಿದೆ ಹಾಗೂ ಇಂಗ್ಲೆಂಡ್ ಕೈನಲ್ಲಿ 7 ವಿಕೆಟ್ ಹಾಗೂ 1 ಸಂಪೂರ್ಣ ದಿನದ ಕಾಲಾವಕಾಶವಿದೆ. ಹೀಗೆ ಟೀಮ್ ಇಂಡಿಯಾ ಸೋಲಿನ ಸನಿಹಕ್ಕೆ ತಲುಪುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ರಿಷಬ್ ಪಂತ್ ಕುರಿತು ಚರ್ಚೆಯಾಗುತ್ತಿದ್ದು, ಈತ ಸೆನಾ ದೇಶಗಳಲ್ಲಿ ಶತಕ ಬಾರಿಸಿದ ಯಾವುದೇ ಪಂದ್ಯದಲ್ಲಿಯೂ ಕೂಡ ಟೀಮ್ ಇಂಡಿಯಾ ಗೆದ್ದಿಲ್ಲ ಎಂಬ ಅಂಕಿಅಂಶ ಹರಿದಾಡುತ್ತಿದೆ. ಅವುಗಳ ಕುರಿತಾದ ವಿವರ ಕೆಳಕಂಡಂತಿದೆ.
2018ರ ಓವಲ್ ಶತಕ
2018ರಲ್ಲಿ ಓವಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ನಲ್ಲಿ ರಿಷಭ್ ಪಂತ್ 114 ರನ್ ಬಾರಿಸಿ ಶತಕ ಸಿಡಿಸಿದ್ದರು. ಆದರೆ ಈ ಪಂದ್ಯವನ್ನು ಇಂಗ್ಲೆಂಡ್ 118 ರನ್ಗಳಿಂದ ಗೆದ್ದು ಬೀಗಿತ್ತು.
2019ರ ಸಿಡ್ನಿ ಟೆಸ್ಟ್
2019ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿತ್ತು. ಈ ಪಂದ್ಯದ ಮೊದಲನೇ ಇನ್ನಿಂಗ್ಸ್ನಲ್ಲಿ ರಿಷಭ್ ಪಂತ್ ಅಜೇಯ 159 ರನ್ ಕಲೆಹಾಕಿದ್ದರು. ಆದರೆ ಈ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಕಂಡಿತ್ತು.
ನ್ಯೂಲ್ಯಾಂಡ್ಸ್ 2022
ಇದೇ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಲ್ಯಾಂಡ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ರಿಷಭ್ ಪಂತ್ ಅಜೇಯ 100 ರನ್ ಕಲೆಹಾಕಿ ಶತಕ ಪೂರೈಸಿದ್ದರು. ಆದರೆ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 7 ವಿಕೆಟ್ಗಳ ಜಯ ಸಾಧಿಸಿತ್ತು.
ಎಡ್ಜ್ ಬಾಸ್ಟನ್ 2022
ಸದ್ಯ ಈಗ ಎಡ್ಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿಯೂ ರಿಷಬ್ ಪಂತ್ ಶತಕ ಬಾರಿಸಿದ್ದಾರೆ. ಪಂದ್ಯದ ಮೊದಲನೇ ಇನ್ನಿಂಗ್ಸ್ನಲ್ಲಿ 146 ರನ್ ಕಲೆಹಾಕಿದ್ದ ರಿಷಬ್ ಪಂತ್ ಕುಸಿತ ಕಂಡಿದ್ದ ತಂಡಕ್ಕೆ ಆಸರೆಯಾಗಿದ್ದರು. ಆದರೆ ಪಂತ್ ಶತಕ ನಿರ್ಮಿಸಿರುವ ಈ ಪಂದ್ಯದಲ್ಲಿಯೂ ಕೂಡ ಟೀಮ್ ಇಂಡಿಯಾ ಸೋಲಿನ ಸುಳಿಯಲ್ಲಿದೆ. ಈ ಮೂಲಕ ರಿಷಭ್ ಪಂತ್ ಸೆನಾ ದೇಶಗಳಲ್ಲಿನ ಟೆಸ್ಟ್ ಪಂದ್ಯಗಳಲ್ಲಿ ಶತಕ ಸಿಡಿಸಿದಾಗಲೆಲ್ಲಾ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತಿದೆ ಅಥವಾ ಪಂದ್ಯ ಡ್ರಾ ಆಗಿದೆಯೇ ಹೊರತು ಗೆಲ್ಲಲಾಗಿಲ್ಲ ಎಂಬ ಕಳಂಕ ಇದೀಗ ಪಂತ್ ಪಾಲಾಗಿದೆ.
myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ.
Allow Notifications
You have already subscribed