ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿವೀಸ್ ವಿರುದ್ದದ ಎರಡನೇ ಟೆಸ್ಟಿಗೆ ಭಾರತದ ಈ ಪ್ರಮುಖ ಬೌಲರ್ ಡ್ರಾಪ್?

India Vs New Zelanad 2nd Test: Either R Ashwin Or Ravindra Jadeja, Who Is Virat Kohli Choice
ಕಿವೀಸ್ ವಿರುದ್ದದ ಎರಡನೇ ಟೆಸ್ಟಿಗೆ ಭಾರತದ ಈ ಪ್ರಮುಖ ಬೌಲರ್ ಡ್ರಾಪ್? | Ashwin | Oneindia Kannada

ಸತತ ಸೋಲಿನಿಂದ ಕಂಗೆಟ್ಟಿರುವ ಟೀಂ ಇಂಡಿಯಾ, ಶನಿವಾರ (ಫೆ 29) ಕ್ರೈಸ್ಟ್ ಚರ್ಚ್ ನಲ್ಲಿ ನಡೆಯಲಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ನಲ್ಲಿ, ತನ್ನ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆಯಿದೆ.

ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಮೊದಲನೇ ಸ್ಥಾನದಲ್ಲಿರುವ ಭಾರತ, ವೆಲ್ಲಿಂಗ್ಟನ್ ನಲ್ಲಿನ ಬೇಸಿನ್ ರಿಸರ್ವ್ ಮೈದಾನದಲ್ಲಿ ನ್ಯೂಜಿಲ್ಯಾಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ, ಯಾವುದೇ ಪ್ರತಿರೋಧವನ್ನು ಒಡ್ಡಲಾಗದೇ ಹತ್ತು ವಿಕೆಟ್ ನಿಂದ ಶರಣಾಗಿತ್ತು.

ಭಾರತ-ಪಾಕಿಸ್ತಾನ ವೈಷಮ್ಯಕ್ಕೆ 'ಆತನೇ ಕಾರಣ' ಎಂದ ಶಾಹಿದ್ ಅಫ್ರಿದಿ!ಭಾರತ-ಪಾಕಿಸ್ತಾನ ವೈಷಮ್ಯಕ್ಕೆ 'ಆತನೇ ಕಾರಣ' ಎಂದ ಶಾಹಿದ್ ಅಫ್ರಿದಿ!

ಬ್ಯಾಟ್ಸ್ ಮ್ಯಾನ್ ಗಳ ಜೊತೆ ಬೌಲರ್ ಗಳ ಸಾಧನೆಯೂ ಹೇಳಿಕೊಳ್ಳುವಂತಿರಲಿಲ್ಲ. ಕಿವೀಸ್ ಬಾಲಂಗೋಚಿಗಳನ್ನು ಬೇಗ ಪೆವಲಿಯನ್ ಗೆ ಕಳುಹಿಸಲು ಟೀಂ ಇಂಡಿಯಾ ವಿಫಲವಾಗಿದ್ದದ್ದು ಮೊದಲ ಟೆಸ್ಟಿನ ಸೋಲಿಗೆ ಪ್ರಮುಖ ಕಾರಣವಾಯಿತು.

ನ್ಯೂಜಿಲ್ಯಾಂಡ್ ವಿರುದ್ದ ವಿರಾಟ್ ಕೊಹ್ಲಿ ಪಡೆ ಧೂಳೀಪಟ: ಸೋಲಿಗೆ ನಾಲ್ಕು ಕಾರಣಗಳುನ್ಯೂಜಿಲ್ಯಾಂಡ್ ವಿರುದ್ದ ವಿರಾಟ್ ಕೊಹ್ಲಿ ಪಡೆ ಧೂಳೀಪಟ: ಸೋಲಿಗೆ ನಾಲ್ಕು ಕಾರಣಗಳು

ನ್ಯೂಜಿಲ್ಯಾಂಡ್ ಮೈದಾನವು ಸ್ವಿಂಗ್ ಬೌಲಿಂಗ್ ಗೆ ಹೆಚ್ಚು ಅನುಕೂಲಕರವಾಗಿರುವುದರಿಂದ, ಎರಡನೇ ಟೆಸ್ಟ್ ನಲ್ಲಿ ಭಾರತದ ವೇಗದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಯಾಗುವ ಸಾಧ್ಯತೆಕಮ್ಮಿ. ಹಾಗಾಗಿ, ಸ್ಪಿನ್ನ ವಿಭಾಗದಲ್ಲಿ ಒಬ್ಬರಿಗೆ ಕೊಕ್ ಕೊಟ್ಟು, ಇನ್ನೊಬ್ಬರನ್ನು ಸೇರ್ಪಡೆಗೊಳಿಸುವ ಸಾಧ್ಯತೆಯಿದೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು

ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು

ವೆಲ್ಲಿಂಗ್ಟನ್ ನಲ್ಲಿನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಒಂದು ಹಂತದಲ್ಲಿ 225 ರನ್ನಿಗೆ 7ವಿಕೆಟ್ ಕಳೆದುಕೊಂಡಿತ್ತು. ಆದರೆ, ಕೊನೆಯ ಮೂರು ವಿಕೆಟ್ ನಿಂದ 123 ರನ್ ಬಂತು. ಇದು ನ್ಯೂಜಿಲ್ಯಾಂಡ್ ಉತ್ತಮ ಲೀಡ್ ಗಳಿಸಲು ಶಕ್ತವಾಯಿತು. ಕಿವೀಸ್ ಕೊನೆಯ ಹಂತದ ಆಟಗಾರರನ್ನು ಬೇಗ ಔಟ್ ಮಾಡಲಾಗದೇ ಇದ್ದಿದ್ದಕ್ಕೆ ಭಾರತದ ಬೌಲರ್ ಗಳು ತೀವ್ರ ಟೀಕೆಗೆ ಗುರಿಯಾಗಿದ್ದರು.

ಬ್ಯಾಟಿಂಗ್ ನಲ್ಲಿ ಅಶ್ವಿನ್ ವಿಫಲ

ಬ್ಯಾಟಿಂಗ್ ನಲ್ಲಿ ಅಶ್ವಿನ್ ವಿಫಲ

ಮೊದಲ ಟೆಸ್ಟ್ ನಲ್ಲಿ ಸ್ಪಿನ್ನರ್ ಆರ್. ಅಶ್ವಿನ್ ಮೂರು ವಿಕೆಟ್ ಅನ್ನು ಪಡೆದಿದ್ದರೂ, ಅವರ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ನಾಯಕ ಕೊಹ್ಲಿಗೆ ತೃಪ್ತಿ ತಂದಿಲ್ಲ. ಮೊದಲ ಟೆಸ್ಟಿನ ಮೊದಲ ಇನ್ನಿಂಗ್ಸ್ ನಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಸೌಥಿಗೆ ಬೌಲ್ಡ್ ಆಗಿದ್ದರು. ಇನ್ನು, ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ ನಾಲ್ಕು ರನ್ ಗಳಿಸಿದ್ದರು. ಹಾಗಾಗಿ, ಎರಡನೇ ಟೆಸ್ಟಿಗೆ ಅಶ್ವಿನ್ ಡ್ರಾಪ್ ಆಗುವ ಸಾಧ್ಯತೆಯಿದೆ.

ಆಲ್ರೌಂಡರ್ ರವೀಂದ್ರ ಜಡೇಜಾ

ಆಲ್ರೌಂಡರ್ ರವೀಂದ್ರ ಜಡೇಜಾ

ಅಶ್ವಿನ್ ಜಾಗದಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಬ್ಯಾಟಿಂಗ್ ನಲ್ಲಿ ಉತ್ತಮ ಫಾರಂನಲ್ಲಿರುವ ಜಡೇಜಾ, ಕಳೆದ ಇಪ್ಪತ್ತು ಟೆಸ್ಟಿನಲ್ಲಿ ಸರಾಸರಿ ಐವತ್ತು ರನ್ ಬಾರಿಸಿದ್ದಾರೆ. ಉತ್ತಮ ಫೀಲ್ಡರ್ ಕೂಡಾ ಆಗಿರುವ ಜಡೇಜಾ, ಅಶ್ವಿನ್ ಜಾಗಕ್ಕೆ ಸೇರ್ಪಡೆಯಾಗಬಹುದು.

48 ಟೆಸ್ಟ್ ಪಂದ್ಯಗಳನ್ನು ಆಡಿರುವ ಜಡೇಜಾ, 1,844 ರನ್ ಗಳನ್ನು ಹೊಡೆದಿದ್ದಾರೆ

48 ಟೆಸ್ಟ್ ಪಂದ್ಯಗಳನ್ನು ಆಡಿರುವ ಜಡೇಜಾ, 1,844 ರನ್ ಗಳನ್ನು ಹೊಡೆದಿದ್ದಾರೆ

ಇದುವರೆಗೆ 48 ಟೆಸ್ಟ್ ಪಂದ್ಯಗಳನ್ನು ಆಡಿರುವ ಜಡೇಜಾ, 1,844 ರನ್ ಗಳನ್ನು ಹೊಡೆದಿದ್ದಾರೆ ಮತ್ತು 211 ವಿಕೆಟ್ ಅನ್ನು ಪಡೆದಿದ್ದಾರೆ. ಮೂರೂ ವಿಭಾಗದಲ್ಲೂ ತಂಡಕ್ಕೆ ನೆರವಾಗಬಲ್ಲ ರವೀಂದ್ರ ಜಡೇಜಾ 2ನೇ ಟೆಸ್ಟ್ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಕ್ರೈಸ್ಟ್ ಚರ್ಚ್, ಹಾಗ್ಲೇ ಓವಲ್ ಮೈದಾನದಲ್ಲಿ ಇತ್ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂಲಕ, ಭಾರತದ ಪ್ರವಾಸ, ನ್ಯೂಜಿಲ್ಯಾಂಡ್ ಪ್ರವಾಸ ಮುಕ್ತಾಯಗೊಳ್ಳಲಿದೆ.

Story first published: Wednesday, February 26, 2020, 12:00 [IST]
Other articles published on Feb 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X