ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತ ತಂಡದ ವಿಶೇಷ ದಾಖಲೆ

India only team to win World Cups in 60-over, 50-over & 20-over tournaments

60, 50 ಮತ್ತು 20-ಓವರ್‌ಗಳಲ್ಲಿ ವಿಶ್ವಕಪ್‌ ಗೆದ್ದ ಏಕಮಾತ್ರ ತಂಡ ಭಾರತ

ಬೆಂಗಳೂರು, ಮೇ 02: ಟೀಮ್‌ ಇಂಡಿಯ ಕ್ರಿಕೆಟ್‌ ಜಗತ್ತಿನಲ್ಲಿ ಅಪರೂಪದ ದಾಖಲೆಯೊಂದನ್ನು ಬರೆದಿದೆ. 60, 50 ಮತ್ತು 20 ಓವರ್‌ಗಳ ಕ್ರಿಕೆಟ್‌ನಲ್ಲಿ ವಿಶ್ವಕಪ್‌ಗಳನ್ನು ಗೆದ್ದ ಜಗತ್ತಿನ ಏಕಮಾತ್ರ ತಂಡ ಎಂಬ ಹೆಗ್ಗಳಿಕೆ ಭಾರತ ತಂಡದ್ದು.

1983ರಲ್ಲಿ 60 ಓವರ್‌ಗಳ ವಿಶ್ವಕಪ್‌, 2007ರಲ್ಲಿ ಟಿ20 ವಿಶ್ವಕಪ್‌ ಮತ್ತು 2011ರಲ್ಲಿ 50 ಓವರ್‌ಗಳ ವಿಶ್ವಕಪ್‌ ಗೆದ್ದು ಭಾರತ ತಂಡ ಇಂಥದ್ದೊಂದು ಅತಿ ಅಪರೂಪದ ಸಾಧನೆ ಮಾಡಿದೆ.

1975, 1979 ಮತ್ತು 1983ರಲ್ಲಿ ನಡೆದ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗಳಲ್ಲಿ 60 ಓವರ್‌ಗಳ ಪಂದ್ಯಗಳನ್ನು ಆಡಿಸಲಾಗುತ್ತಿತ್ತು. ದೈತ್ಯ ವೆಸ್ಟ್‌ ಇಂಡೀಸ್‌ ತಂಡ ಮೊದಲೆರಡು ವಿಶ್ವಕಪ್‌ಗಳನ್ನು ಗೆದ್ದರೆ, 1983ರಲ್ಲಿ ಕಪಿಲ್‌ ದೇವ್‌ ಸಾರಥ್ಯದ ಯಂಗ್‌ ಇಂಡಿಯಾ ತಂಡ ಫೈನಲ್‌ ಪಂದ್ಯದಲ್ಲಿ ಕೆರಿಬಿಯನ್‌ ಕಲಿಗಳ ಹೆಡೆಮುರಿಕಟ್ಟಿ ಟ್ರೋಫಿ ಎತ್ತಿ ಹಿಡಿದು ಇತಿಹಾಸ ಬರೆದಿತ್ತು. ಇದು 60 ಓವರ್‌ಗಳ ಕ್ರಿಕೆಟ್‌ನಲ್ಲಿ ನಡೆದ ಕೊನೆಯ ವಿಶ್ವಕಪ್‌ ಟೂರ್ನಿಯಾಗಿದೆ.

1987ರಲ್ಲಿ ಭಾರತ ಮತ್ತು ಪಾಕಿಸ್ತಾನದ ಜಂಟಿ ಆಶ್ರಯದಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ 60 ಓವರ್‌ಗಳ ಬದಲಾಗಿ 50 ಓವರ್‌ಗಳ ಮಾದರಿಯನ್ನು ಪರಿಚಯಿಸಲಾಯಿತು.

24 ವರ್ಷಗಳ ಬಳಿಕ ವಿಶ್ವಕಪ್‌

24 ವರ್ಷಗಳ ಬಳಿಕ ವಿಶ್ವಕಪ್‌

ಭಾರತ ತಂಡ ಮತ್ತೊಂದು ವಿಶ್ವಕಪ್‌ ಗೆಲ್ಲಲು ಬರೋಬ್ಬರಿ 24 ವರ್ಷಗಳನ್ನು ಕಾಯಬೇಕಾಯಿತು. 2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಮಹೇಂದ್ರ ಸಿಂಗ್‌ ಧೋನಿ ಸಾರಥ್ಯದ ಭಾರತ ತಂಡ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ಸೋಲುಣಿಸುವ ಮೂಲಕ ಬರೋಬ್ಬರಿ ಎರಡೂವರೆ ದಶಕಗಳ ನಂತರ ವಿಶ್ವಚಾಂಪಿಯನ್ಸ್‌ ಪಟ್ಟ ಅಲಂಕರಿಸಿತು.

ಧೋನಿ ಸಾರಥ್ಯದಲ್ಲಿ ಮತ್ತೊಂದು ವಿಶ್ವಕಪ್‌ ಗೆಲುವು

ಧೋನಿ ಸಾರಥ್ಯದಲ್ಲಿ ಮತ್ತೊಂದು ವಿಶ್ವಕಪ್‌ ಗೆಲುವು

ಕ್ಯಾಪ್ಟನ್‌ ಕೂಲ್‌ ಖ್ಯಾತಿಯ ನಾಯಕ ಎಂ.ಎಸ್‌ ಧೋನಿ ಕೇವಲ ನಾಲ್ಕು ವರ್ಷಗಳ ಅಂತರದಲ್ಲಿ ಭಾರತಕ್ಕೆ ಮತ್ತೊಂದು ವಿಶ್ವಕಪ್‌ ಗೆಲುವಿನ ಸಂಭ್ರಮ ತಂದುಕೊಟ್ಟರು. 2011ರಲ್ಲಿ ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಜಂಟಿ ಆಶ್ರಯದಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತ ತಂಡ ಫೈನಲ್‌ನಲ್ಲಿ ಶ್ರೀಲಂಕಾಗೆ ಸೋಲುಣಿಸಿ ಟ್ರೋಫಿ ಎತ್ತಿ ಹಿಡಿಯಿತು. ಈ ಗೆಲುವಿನೊಂದಿಗೆ 60, 50 ಮತ್ತು 20 ಓವರ್‌ಗಳಲ್ಲಿ ಪ್ರಶಸ್ತಿ ಗೆದ್ದ ವಿಶ್ವದ ಮೊದಲ ಮತ್ತು ಏಕಮಾತ್ರ ತಂಡ ಎಂಬ ವಿಶ್ವ ದಾಖಲೆ ಬರೆಯಿತು.

ವೆಸ್ಟ್‌ ಇಂಡೀಸ್‌ಗೆ ಮಾತ್ರ ಅವಕಾಶ

ವೆಸ್ಟ್‌ ಇಂಡೀಸ್‌ಗೆ ಮಾತ್ರ ಅವಕಾಶ

ವಿಶ್ವಕಪ್‌ ಗೆಲುವಿನಲ್ಲಿ ಭಾರತ ತಂಡದ ಸಾಧನೆಯನ್ನು ಸರಿಗಟ್ಟಲು ಕೇವಲ ವೆಸ್ಟ್‌ ಇಂಡೀಸ್‌ ತಂಡಕ್ಕೆ ಮಾತ್ರವೇ ಸಾಧ್ಯವಿದೆ. 1975 ಮತ್ತು 1979ರಲ್ಲಿ 60 ಓವರ್‌ಗಳ ಕ್ರಿಕೆಟ್‌ನ ವಿಶ್ವಕಪ್‌ಗಳನ್ನು ಗೆದ್ದಿರುವ ವಿಂಡೀಸ್‌, 2012 ಮತ್ತು 2016ರಲ್ಲಿ ನಡೆದ ಟಿ20 ವಿಶ್ವಕಪ್‌ ಟೂರ್ನಿಯಲ್ಲೂ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಇನ್ನು 50 ಓವರ್‌ಗಳ ಮಾದರಿಯಲ್ಲಿ ಮಾತ್ರವೇ ವಿಂಡೀಸ್‌ ಪ್ರಶಸ್ತಿ ಗೆಲ್ಲಬೇಕಿದೆ. 50 ಓವರ್‌ಗಳ ಕ್ರಿಕೆಟ್‌ನಲ್ಲಿ 1996ರಲ್ಲಿ ಸೆಮಿಫೈನಲ್ಸ್‌ ತಲುಪಿರುವುದು ವೆಸ್ಟ್‌ ಇಂಡೀಸ್‌ ತಂಡದ ಶ್ರೇಷ್ಠ ಸಾಧನೆಯಾಗಿದೆ.

ಆಸ್ಟ್ರೇಲಿಯಾಗೆ ಇಲ್ಲಿ ಈ ಭಾಗ್ಯ

ಆಸ್ಟ್ರೇಲಿಯಾಗೆ ಇಲ್ಲಿ ಈ ಭಾಗ್ಯ

ಕ್ರಿಕೆಟ್‌ ಜಗತ್ತಿನಲ್ಲಿ ದಶಕ ಕಾಲ ಅಧಿಪತ್ಯ ಮೆರೆದಿದ್ದ ಆಸ್ಟ್ರೇಲಿಯಾ ತಂಡಕ್ಕೆ ಭಾರತ ತಂಡದ ಈ ಅಪರೂಪದ ಸಾಧನೆಯನ್ನು ಸರಿಗಟ್ಟುವ ಅವಕಾಶ ಇಲ್ಲವಾಗಿದೆ. 60 ಓವರ್‌ಗಳ ಕ್ರಿಕೆಟ್‌ ಈಗ ನಡೆಯುತ್ತಿಲ್ಲವಾದ್ದರಿಂದ, ಏಕದಿನ ಕ್ರಿಕೆಟ್‌ನಲ್ಲಿ ಈವರೆಗೆ ನಡೆದಿರುವ 11 ವಿಶ್ವಕಪ್‌ಗಳಲ್ಲಿ 5 ಬಾರಿ (1987, 1999, 2003, 2007, 2015) ಪ್ರಶಸ್ತಿ ಗೆದ್ದಿರುವ ಆಸ್ಟ್ರೇತಂಡಕ್ಕೆ ಇನ್ನು 20 ಓವರ್‌ಗಳ ಕ್ರಿಕೆಟ್‌ ವಿಶ್ವಕಪ್‌ ಗೆಲ್ಲುವ ಅವಕಾಶ ಮಾತ್ರವೇ ಉಳಿದಿದೆ.

Story first published: Thursday, May 2, 2019, 17:13 [IST]
Other articles published on May 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X