ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ವೇಗಿ ಇಶಾಂತ್ ಶರ್ಮಾ ಬಲ ಕೈಗೆ ಗಾಯ, 3 ಹೊಲಿಗೆ

India pacer Ishant Sharma Gets Three Stitches On Right Hand

ಸೌಥಾಂಪ್ಟನ್: ಭಾರತದ ಅನುಭವಿ ವೇಗಿ ಇಶಾಂತ್‌ ಶರ್ಮಾ ಬಲಗೈಗೆ ಗಾಯವಾಗಿದ್ದು ಮೂರು ಹೊಲಿಗೆಗಳನ್ನು ಹಾಕಲಾಗಿದೆ. ಬುಧವಾರ (ಜೂನ್ 23) ಮುಕ್ತಾಯಗೊಂಡ ಭಾರತ-ನ್ಯೂಜಿಲೆಂಡ್ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದ ವೇಳೆ ಇಶಾಂತ್ ಗಾಯ ಮಾಡಿಕೊಂಡಿದ್ದಾರೆ.

 World Test Championship 2ನೇ ಆವೃತ್ತಿಗೆ ಭಾರತದ ವೇಳಾಪಟ್ಟಿ ಪ್ರಕಟ! World Test Championship 2ನೇ ಆವೃತ್ತಿಗೆ ಭಾರತದ ವೇಳಾಪಟ್ಟಿ ಪ್ರಕಟ!

ಸೌಥಾಂಪ್ಟನ್‌ನ ಏಜಸ್ ಬೌಲ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದ ವೇಳೆ ಚೆಂಡನ್ನು ತಡೆಯೆತ್ನಿಸುವಾಗ ಇಶಾಂತ್ ಶರ್ಮಾ ಬಲಗೈಗೆ ಗಾಯವಾಗಿದೆ. ಹೀಗಾಗಿ ಮೂರು ಹೊಲಿಗೆಗಳನ್ನು ಹಾಕಲಾಗಿದೆ. ಆದರೆ ಮುಂಬರಲಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ವೇಳೆ ಇಶಾಂತ್ ಫಿಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಎಎನ್‌ಐ ಜೊತೆ ಮಾತನಾಡಿದ ಮೂಲವೊಂದು, "ಚೆಂಡನ್ನು ತಡೆಯಲೆತ್ನಿಸುವಾಗ ಇಶಾಂತ್‌ ಕೈಗೆ ಗಾಯ ಮಾಡಿಕೊಂಡಿದ್ದಾರೆ, ಅವರ ಕೈಗೆ ಮೂರು ಹೊಲಿಗೆ ಹಾಕಲಾಗಿದೆ. ಆದರೆ ಆಗಸ್ಟ್ 4ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿ ವೇಳೆಗೆ ಇಶಾಂತ್ ತಯಾರಾಗಲಿದ್ದಾರೆ," ಎಂದು ತಿಳಿಸಿದೆ.

WTC Final: ನಗದು ಪುರಸ್ಕಾರ, ಕುತೂಹಲಕಾರಿ ದಾಖಲೆಗಳ ಸಂಪೂರ್ಣ ವಿವರWTC Final: ನಗದು ಪುರಸ್ಕಾರ, ಕುತೂಹಲಕಾರಿ ದಾಖಲೆಗಳ ಸಂಪೂರ್ಣ ವಿವರ

2021ರ WTC ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ 8 ವಿಕೆಟ್‌ ಗೆಲುವನ್ನಾಚರಿಸಿತ್ತು. ದ್ವಿತೀಯ ಆವೃತ್ತಿ ಜುಲೈನಿಂದ ಆರಂಭಗೊಳ್ಳಲಿದೆ. ಭಾರತಕ್ಕೆ ಇಂಗ್ಲೆಂಡ್ ಸರಣಿಯೇ ದ್ವಿತೀಯ ಆವೃತ್ತಿಯ ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ ಭಾಗವಾಗಿರಲಿದೆ. ಐದು ಪಂದ್ಯಗಳ ಈ ಟೆಸ್ಟ್‌ ಸರಣಿ ಆಗಸ್ಟ್ 4ರಿಂದ ಸೆಪ್ಟೆಂಬರ್ 14ರ ವರೆಗೆ ನಡೆಯಲಿದೆ.

Story first published: Saturday, June 26, 2021, 10:10 [IST]
Other articles published on Jun 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X