ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಓವರ್‌ಗೆ 30 ರನ್ ಬಿಟ್ಟುಕೊಟ್ಟಿದ್ದೇ ವೃತ್ತಿ ಜೀವನದ ದೊಡ್ಡ ಪಾಠವಾಯಿತು: ಇಶಾಂತ್ ಶರ್ಮಾ

India Pacer Ishant Sharma Recalled Turning Point of His Life

ಟೀಮ್ ಇಂಡಿಯಾದ ಅನುಭವಿ ವೇಗಿ ಇಶಾಂತ್ ಶರ್ಮಾ ಭಾರತದ ತಂಡದ ಪ್ರಮುಖ ವೇಗಿದ ಅಸ್ತ್ರವಾಗಿದ್ದಾರೆ. ಅದರಲ್ಲೀ ಇಶಾಂತ್ ಟೆಸ್ಟ್‌ನಲ್ಲಿ ನೀಡುತ್ತಿರುವ ಪ್ರದರ್ಶನ ಅತ್ಯುನ್ನತ ಮಟ್ಟದಲ್ಲಿದೆ. ಕೆಲ ವರ್ಷಗಳ ಹಿಂದೆ ಇಶಾಂತ್ ತನ್ನ ಬೌಲಿಂಗ್‌ನಲ್ಲಿ ಮೊನಚು ಕಳೆದುಕೊಳ್ಳುತ್ತಿರುವಂತೆ ಭಾಸವಾಗಿತ್ತು. ಆದರೆ ಮತ್ತೆ ಇಶಾಂತ್ ವಾಪಾಸ್ ಶ್ರೇಷ್ಠ ಫಾರ್ಮ್ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಕಳೆದ ಎರಡ್ಮೂರು ವರ್ಷಗಳಲ್ಲಿ ಟೆಸ್ಟ್ ತಂಡದ ವೇಗದ ಬೌಲಿಂಗ್ ನಾಯಕತ್ವ ವಹಿಸಿಕೊಂಡಿದ್ದಾರೆ.

31 ವರ್ಷದ ಇಶಾಂತ್ ಶರ್ಮಾ ವೃತ್ತಿ ಬದುಕಿನಲ್ಲಿ ಅತ್ಯಂತ ದೊಡ್ಡ ತಿರುವು ನೀಡಿದ ಸಂದರ್ಭವನ್ನು ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನಿರ್ಣಾಯಕ ಹಂತದಲ್ಲಿ 30 ರನ್‌ಗಳನ್ನು ಇಶಾಂತ್ ನೀಡಿದ್ದ ಪರಿಣಾಮವಾಗಿ ಭಾರತ ಸೋಲನ್ನು ಕಂಡಿತ್ತು. ಆ ಪಂದ್ಯವೇ ನನ್ನ ವೃತ್ತಿ ಬದುಕಿನಲ್ಲಿ ಮಹತ್ವದ ತಿರುವು ನೀಡಿದ ಪಂದ್ಯವಾಗಿದೆ ಎಂದು ಇಶಾಂತ್ ಶರ್ಮಾ ಹೇಳಿದ್ದಾರೆ.

ವಿಶ್ವಕ್ರಿಕೆಟ್‌ನಲ್ಲಿ ಮತ್ತೊಂದು ಬೃಹತ್ ಚೇಸಿಂಗ್: ಇಂಗ್ಲೆಂಡ್ ವಿರುದ್ಧ 329 ರನ್ ಬೆನ್ನಟ್ಟಿ ಗೆದ್ದ ಐರ್ಲೆಂಡ್!ವಿಶ್ವಕ್ರಿಕೆಟ್‌ನಲ್ಲಿ ಮತ್ತೊಂದು ಬೃಹತ್ ಚೇಸಿಂಗ್: ಇಂಗ್ಲೆಂಡ್ ವಿರುದ್ಧ 329 ರನ್ ಬೆನ್ನಟ್ಟಿ ಗೆದ್ದ ಐರ್ಲೆಂಡ್!

ಅದು 2013ರಲ್ಲಿ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯ. ಈ ಪಂದ್ಯದಲ್ಲಿ ಭಾರತ ನಾಯಕ ಎಂಎಸ್ ಧೋನಿ ಸಿಡಿಸಿದ ಅಜೇಯ 139 ರನ್‌ಗಳ ಸಹಾಯದಿಂದ 303 ರನ್ ಗಳಿಸಿತ್ತು. ಈ ಪಂದ್ಯವನ್ನು ಭಾರತ ಅಂತಿಮ ಹಂತವರೆಗೂ ತನ್ನ ಹಿಡಿತದಲ್ಲೇ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಅಂತಿಮಹಂತದಲ್ಲಿ ಬಂದ ಜೇಮ್ಸ್ ಫಾಲ್ಕ್ನರ್ ಫಲಿತಾಂಶವನ್ನೇ ಬದಲಿಸಿಬಿಟ್ಟಿದ್ದರು.

ಈ ಪಂದ್ಯದಲ್ಲಿ ಫಾಲ್ಕ್‌ನರ್ ಕೇವಲ 29 ಎಸೆತಗಳಲ್ಲಿ 64 ರನ್ ಬಾರಿಸುವಲ್ಲಿ ಯಶಸ್ವಿಯಾಗಿದ್ದರು.ಅದರಲ್ಲೂ ಇಶಾಂತ್ ಶರ್ಮಾರ ಒಮದು ಓವರ್‌ನಲ್ಲಿ ಫಾಲ್ಕ್‌ನರ್ ಬರ್ಜರಿ 30 ರನ್‌ಗಳನ್ನು ಸಿಡಿಸಿದ್ದರು. ಈ ಮೂಲಕ ಆಸ್ಟ್ರೇಲಿಯಾದ ರೋಚಕ ಗೆಲುವಿಗೆ ಕಾರಣರಾಗಿದ್ದರು.

ಕಮ್‌ಬ್ಯಾಕ್‌ ಬಳಿಕ ಧೋನಿ, ಕೊಹ್ಲಿ ಬೆಂಬಲ ಹೇಗಿತ್ತು: ವಿವರವಾಗಿ ಬಿಚ್ಚಿಟ್ಟ ಯುವರಾಜ್ ಸಿಂಗ್ಕಮ್‌ಬ್ಯಾಕ್‌ ಬಳಿಕ ಧೋನಿ, ಕೊಹ್ಲಿ ಬೆಂಬಲ ಹೇಗಿತ್ತು: ವಿವರವಾಗಿ ಬಿಚ್ಚಿಟ್ಟ ಯುವರಾಜ್ ಸಿಂಗ್

ಆ ಸಂದರ್ಭ ಈಗ ನಗುವಿನಗೆ ಕಾರಣವಾದರೂ ಅದು ಅತ್ಯಂತ ಕಠೀಣವಾಗಿತ್ತು. ಆದರೆ ನಾನು ಅದನ್ನು ಸಾಕಷ್ಟು ಗಂಬೀರವಾಗಿ ಪರಿಗಣಿಸಿದ್ದೇನೆ. 2013ರ ಆ ಘಟನೆಗೂ ಮುನ್ನ ಜನರು ಕೆಟ್ಟ ಪ್ರದರ್ಶನವನ್ನು ನಿಡಿದಾಗ, ಇದೆಲ್ಲಾ ನಡೆಯುತ್ತದೆ, ಆಟದಲ್ಲಿ ಇದೆಲ್ಲಾ ಸಾಮಾನ್ಯ ಎಂದು ಅವರೇ ಸಮಾಧಾನಿಸುತ್ತಿದ್ದರು. ಆದರೆ ಅದಾದ ನಂತರ ಯಾರಾದರೂ ಈ ರೀತಿ ಹೇಳಲು ಬಂದರೂ ನಾನು ಅದನ್ನು ಕೇಳಲಿಲ್ಲ. ನನ್ನಿಂದ ತಪ್ಪಾಗಿದ್ದರು ಅದು ತಪ್ಪೆ. ಅದನ್ನು ಒಪ್ಪಿಕೊಂಡು ನನ್ನ ಜವಾಬ್ಧಾರಿಯನ್ನು ವಹಿಸಿಕೊಳ್ಳಲು ಆರಂಭಿಸಿದೆ. ಪ್ರತಿ ಪಂದ್ಯವನ್ನೂ ಗೆಲ್ಲಲೇ ಬೇಕೆಂದು ಆಡತೊಡಗಿದೆ ಎಂದು ಇಶಾಂತ್ ಹೇಳಿದ್ದಾರೆ.

Story first published: Wednesday, August 5, 2020, 13:50 [IST]
Other articles published on Aug 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X